ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕರಿ ಕುರುಳಿನ ಕೊರಳೊಳಗೆ ಕಾರ್ಮೋಡಗಳ ಧ್ವನಿ ಮೊಳಗೆ ಮೊಲ್ಲೆ ಮೊಗ್ಗುಗಳುದುರಿ ಬಿದ್ದವಾಗೆ !! - ಎಂದು ಕ್ಲಾಸ್ಸಿಕ್ ಆದ ಒಲುಮೆಯ ಕವಿತೆ ವಾಚಿಸಿದವರು ಲೇಖಕಿ ಶ್ರೀಮತಿ ಶಾಂತಾ ಶಾಸ್ತ್ರಿ ಅವರು..!

ಕರಿ ಗೆಂಚಿನ ಸಿರಿ ಮುಡಿಗೆ
ಬಿಳಿ ಮಿಂಚಿನ ಮಲ್ಲಿಗೆ
ಮುಡಿಯುತ್ತ ನಡೆದಿಹಳು ನಲ್ಲನೆಡೆಗೆ !!

ಕರಿ ಕುರುಳಿನ ಕೊರಳೊಳಗೆ
ಕಾರ್ಮೋಡಗಳ ಧ್ವನಿ ಮೊಳಗೆ
ಮೊಲ್ಲೆ ಮೊಗ್ಗುಗಳುದುರಿ ಬಿದ್ದವಾಗೆ !!

ಮೊದಲ ಕಾವದು ತಾಗೆ
ಮಧುರ ಕಂಪಿನ ಹೊಗೆ
ಹೊಸ ಹುರುಪ ಹರಡಿತು ಜಗದಾಗೆ !!

ಕಂಪಿನಲಿ ನೆಲ ತಂಪಾಗೆ
ಬಿಸಿಯುಸಿರು ಹಸಿಯಾಗೆ
ಹಚ್ಚೆ ಕೊಚ್ಚಿತು ಕಲ್ಲೀನಾಗೆ !!

ಭೂದೇವಿ ಖುಷಿಯಾಗೆ
ಹಸಿರು ಪಟ್ಟೆ ಸೀರ್ಯಾಗೆ
ಗರಿಬಿಚ್ಚಿ ನವಿಲು ಕುಣಿಯಿತಾಗೆ !!

ರವಿ ಕಿರಣ ಹೊರಬಾಗೆ
ಅಂಬರದೇಳು ಬಣ್ಣವಾಗೆ
ಹೊಸ ರಂಗು ಮೂಡಿತು ಬಾಳಿನಾಗೆ !!

ಹುಣ್ಣಿಮೆ ಚಂದಿರನಾಗೆ
ಮುತ್ತಿನ ತೆನೆ ತೊನೆವಾಗೆ
ಜೀವ ಜೀಕಿತು ಜೋಕಾಲಿಯಾಗೆ !!

ನದಿ ನಾಲೆಗಳು ನೆರೆದಾಗೆ
ಸಾಗರದೆಡೆ ಸರೀ ಸರಿದಾಗೆ
ನೆಮ್ಮದಿ ನೆಟ್ಟಿತು ನರನಾಡಿಗಾಗೆ