ಕವಿತೆ
ಯುಗಯುಗಗಳಿಂದ ಮಿಸುಕದೆ ಮಲಗಿ ನನ್ನೊಳಗೆ ನಾ ಬಿದ್ದು ಜಡವಾಗಿಮುದ್ದೆಯಾಗಿದೆ ಮೈಮನ ಚಳಿ ಬಿಸಿಲು ಮಳೆಯ ಮನವಿಗೆಕಾಲನ ಪಾಚಿಯ ಮುಸುಕು ಸರಿದಿಲ್ಲ ಯೋಗನಿದ್ರೆಯೋ ಮಾಯಾವಿದ್ಯೆಯೋಶಾಪಗ್ರಸ್ತ ಮೈಮನಕೆ ದೀರ್ಘ ಮಂಪರು ತಣ್ಣಗೆ ಸುಳಿವ ಗಾಳಿ ಕಿವಿಯಲಿ ಪಿಸುಗುಡುತ್ತದೆಪ್ರಾಣವಾಯುವಲ್ಲ…ನಿನಗೆ ಬೇಕು ಚಲನೆ ನಿನ್ನೊಳಗಿನ ಮರಗಟ್ಟಿದ ಅಂಗಾಂಗಗಳಿಗೆಚುರುಗುಡುವ ಜೀವಂತಿಕೆಯ ಸಂವೇದನೆ ನಿಶ್ಚಲ ದೇಹದಲಿ ನಿಜದರಿವಿನ ಆವಾಹನೆಹೊರಗಿನ ರಾಮನಿಗೆ ಕಾಯುವ ಸಹನೆಅದುಮಿಕೊಂಡಷ್ಟೂ ಭುಗಿಲೇಳುವ ವೇದನೆ ಸಾಕು, ಎದ್ದೇಳು, ಮೈ ಕೊಡವಿನಿನ್ನ ಕಾಲು ನಿನ್ನ ನೆಲ ನಿನ್ನ ಛಲ ನಿನ್ನ ಬಲ ಕೊಡವಿಕೋ ತಡವಿಕೋ ನಿನ್ನಂತರಂಗವಹೊಸ ಆತ್ಮಬಲದ ನೀರು ಚಿಮುಕಿಸು ಹಳೆ(ಣೆ) ಬರಹವ ಅಳಿಸಿಬಿಡುಪತಿತ ಪಾವನದಾಟದ ಕಥೆಯ ನಾಯಕಿಹುಟ್ಟದಿರಲಿ ಮತ್ತೆ ಮತ್ತೆ…