ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಶೋಕ ಸುವರ್ಣ
ಇತ್ತೀಚಿನ ಬರಹಗಳು: ಅಶೋಕ ಸುವರ್ಣ (ಎಲ್ಲವನ್ನು ಓದಿ)

ಕರ್ಮನಗರಿ, ವಾಣಿಜ್ಯ ನಗರಿ, ಉತ್ಸವ ನಗರಿ, ಚೇತನಾ ನಗರಿ, ಅವಿಶ್ರಾಂತ ನಗರಿ, ಮಾಯಾ ನಗರಿ, ಹೋರಾಟ ನಗರಿ, ಸ್ವಾತಂತ್ರ್ಯ ಕ್ರಾಂತಿಯ ಮೈದಾನದ ನಗರಿ, ಸಮಗ್ರ ಭಾರತದ ಸಾಂಸ್ಕೃತಿಕ ನಗರಿ, ಬಹುಭಾಷೆ, ಬಹು ಧರ್ಮ, ಬಹು ವರ್ಣಗಳ ನಗರಿ, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಕೆ. ಎಂ. ಮುನ್ಶಿ, ಜೆ. ಆರ್. ಡಿ. ಟಾಟಾ, ಡಾ. ವಿಶ್ವೇಶ್ವರಯ್ಯ, ದಾದಾ ಬಾಯಿ ನವರೋಜಿ, ಮಹಾತ್ಮಾ ಗಾಂಧಿ, ಮೊರಾರ್ಜಿ ದೇಸಾಯಿ, ಬಿ. ಜಿ. ಖೇರ್, ಮೊದಲಾದವರು ನಡೆದ, ಕಟ್ಟಿದ ಪುಣ್ಯನಗರಿ. ಚಲನಚಿತ್ರ ಜಗತ್ತು ಹುಟ್ಟಿದ ನಗರಿ. ಮೌರ್ಯರು, ಶಾತವಾಹನರು, ಅಭಿರಸರು, ಕಲಚೂರಿಗಳು, ಕೊಂಕಣದ ಮೌರ್ಯರು, ಚಾಲುಕ್ಯರು, ರಾಷ್ಟ್ರ ಕೂಟರು, ಶಿಲಾಹಾರರು, ಯಾದವರು, ಗುಜರಾತ್ ಸುಲ್ತಾನರು, ಪೋರ್ಚುಗೀಸರು, ಬ್ರಿಟಿಷರು ಆಕ್ರಮಿಸಿದ, ಆಡಳಿತ ನಡೆಸಿದ ಪ್ರಾಂತ್ಯದ ಮುಂಬಯಿಯು 1960ರಲ್ಲಿ ಮೂರು ರಾಜ್ಯಗಳಿಗೆ ಹಂಚಿಹೋಯಿತು.

ದಕ್ಷಿಣದ ಧಾರವಾಡ, ಬೆಳಗಾವಿ, ಕಾರವಾರ-ಕರ್ನಾಟಕಕ್ಕೆ, ಉತ್ತರದ ವಾಪಿ ಗುಜರಾತಿಗೆ, ಮೂಲದಲ್ಲಿ ಸಪ್ತ ದ್ವೀಪಗಳಿದ್ದ ಕೇಂದ್ರ ಮುಂಬಯಿ ಮಹಾರಾಷ್ಟ್ರಕ್ಕೆ ಸೇರಿಹೋಯಿತು. ಇಂತಹ ಐತಿಹಾಸಿಕ ಹಿನ್ನೆಲೆಯ ಮುಂಬಯಿ ಇತಿಹಾಸ ಪ್ರಿಯರಿಗೆ, ಪ್ರಾಚೀನತೆಯನ್ನು ಸಂಶೋಧಿಸುವವರಿಗೆ, ಧಾರ್ಮಿಕ ಪಲ್ಲಟವನ್ನು ಅಧ್ಯಯನ ಮಾಡುವವರಿಗೆ ಸಂಪನ್ಮೂಲ ಪ್ರದೇಶವಾಗಿ ಈಗಲೂ ತನ್ನ ವಿಶೇಷತೆಯನ್ನು ಉಳಿಸಿಕೊಂಡಿದೆ. ಪರದೇಶದಿಂದ ವಲಸೆ ಬಂದ ಯಹೂದಿಗಳು, ಪಾರ್ಸಿಗಳು, ಇರಾನಿಗಳು ಇಲ್ಲಿ ತಮ್ಮ ಪ್ರತಿಭೆ, ಶ್ರಮ, ಪ್ರಾಮಾಣಿಕ ಕೊಡುಗೆಯಿಂದ ಭಾರತೀಯರಾದುದು ಮುಂಬಯಿಯ ಮಣ್ಣಿನಿಂದಲೇ ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

ಸುಮಾರು 250 ವರ್ಷಗಳ ಹಿಂದೆ ದಕ್ಷಿಣ ಕನ್ನಡದ ಮೊಗವೀರರು ಬಳಿಕ ಇತರ ತುಳುವರು ಇಲ್ಲಿಗೆ ಉದ್ಯೋಗ ನಿಮಿತ್ತ ಬಂದು ತಮ್ಮದೇ ಕಾರ್ಯಕ್ಷೇತ್ರಕ್ಕೆ ಸಾಮ್ರಾಜ್ಯ ಕಟ್ಟಿದ್ದೂ ಇದೇ ಮುಂಬಯಿಯಲ್ಲಿ.

ಇಂತಹ ಅನೇಕಾನೇಕ ವಿಶೇಷಣಗಳಿಂದ ಕರೆಯಲ್ಪಡುವ ಈ ನಗರ ಒಂದು ಕಾಲದಲ್ಲಿ ಸಪ್ತದ್ವೀಪಗಳಾಗಿತ್ತು. ಕೊಲಬಾ, ಸಣ್ಣ ಕೊಲಬಾ, ಬಾಂಬೆ, ಮಜ್‍ಗಾಂವ್, ಪರೇಲ್, ವರ್ಲಿ, ಮಾಹಿಮ್ ಈ ದ್ವೀಪಗಳು ಗುಜರಾತ್ ಸುಲ್ತಾನ್ ನಿಂದ ಪೋರ್ಚುಗೀಸರಿಗೆ, ಪೋರ್ಚುಗೀಸರಿಂದ ಬ್ರಿಟಿಷ ದೊರೆಗೆ, ಬ್ರಿಟಿಷ ದೊರೆಯಿಂದ ಈಸ್ಟ್ ಇಂಡಿಯಾ ಕಂಪನಿಗೆ ವರ್ಗಾವಣೆಗೊಂಡು ಕೊನೆಗೆ ಬ್ರಿಟಿಷರ ಆಡಳಿತಾವಧಿಯಲ್ಲಿ ಏಕದ್ವೀಪವಾಗಿ ನಿರ್ಮಾಣಗೊಂಡಿತು.

ದ್ವೀಪಪ್ರದೇಶವಾದುದರಿಂದ ಇಲ್ಲಿನ ಮೂಲ ನಿವಾಸಿಗಳು ಹೆಚ್ಚಿನವರು ಮೀನುಗಾರರು (ಕೋಲಿಗಳು). ಒಳನಾಡಿನಲ್ಲಿ ಕುನ್ಬಿ, ಅಗ್ರಿ, ಭಂಡಾರಿ, ಪರು (ಪ್ರಭು ಪಠಾರೆ) ಹಾಗೂ ಗುಜರಾತ್ ಮುಂಬಯಿ ದ್ವೀಪಗಳ ನಡುವೆ ನಾವೆ ನಡೆಸುತ್ತಿದ್ದ ಮುಸ್ಲಿಂ ನಾವಿಕರು. (ನವಾಯಕರು ಎಂದು ಕರೆಯಲ್ಪಟ್ಟ ಇವರು ಮೂಲತಃ ಮೀನುಗಾರರಾದ ಗಾವಿತ್ ಸಮಾಜದವರು). ಈಗಲೂ ಮುಂಬಯಿಯ ಒಳಭಾಗದಲ್ಲಿ ಕೋಳಿವಾಡ ಎಂದು ಕರೆಯಲ್ಪಡುವ ವಾಡಿಗಳಿವೆ. ದೆಹಲಿಯ ಬಾದಶಾಹ ಹುಮಾಯೂನ್ ಉತ್ತರ ಭಾರತ ಮತ್ತು ಮಧ್ಯ ಭಾರತವನ್ನು ಆಕ್ರಮಿಸುತ್ತಾ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿರುವುದನ್ನು ಕಂಡು ಹಾಗೂ ಹುಮಾಯೂನನ ಸೈನ್ಯ ಗುಜರಾತ್‍ನತ್ತ ಬರಲಿದೆ ಎಂದು ತಿಳಿದು ಗುಜರಾತಿನ ಕೊನೆಯ ಸುಲ್ತಾನ್ ಬಹುದ್ದೂರ್ ಶಾಹ ಆತನ ಪ್ರಭಾವಕ್ಕೆ ಹೆದರಿ, ಆದಾಗಲೇ ದಿವ್ – ಚಿಮನ್‍ಗಳನ್ನು ವಶಪಡಿಸಿಕೊಂಡಿದ್ದ ಪೋರ್ಚುಗೀಸರೇ ದೆಹಲಿ ಬಾದ್ ಶಾಹನನ್ನು ಸೋಲಿಸಲು ಸಮರ್ಥರು ಎಂದು ಭಾವಿಸಿ ಪೋರ್ಚುಗೀಸರೊಡನೆ ಒಡಂಬಡಿಕೆ ಮಾಡಿಕೊಂಡು ಮುಂಬಯಿ ದ್ವೀಪ ಸಮೂಹ ಹಾಗೂ ವಸಾಯಿ (ವರ್ಸೋವ-ಅಂಧೇರಿ ಸಹಿತ) ಪ್ರದೇಶವನ್ನು ಪೋರ್ಚುಗೀಸರಿಗೆ 1534ರಲ್ಲಿ ಒಪ್ಪಿಸಿದನು. ಅವರು ಕಂದಾಯ ವಸೂಲಿಗಾಗಿ ವಸಾಯಿ, ಮಾಹಿಮ್‍ನಲ್ಲಿ ಕೋಟೆ ನಿರ್ಮಿಸಿ ಪ್ರಾಂತೀಯ ಆಡಳಿತ ಕೇಂದ್ರ ಸ್ಥಾಪಿಸಿದ್ದರು ಹಾಗೂ ಪ್ರತಿ ದ್ವೀಪಕ್ಕೂ ತಮ್ಮದೇ ಆದ ಗುತ್ತಿಗೆದಾರರನ್ನು ಬಾಡಿಗೆಯ ವ್ಯವಸ್ಥೆಯಲ್ಲಿ ಕಂದಾಯ ವಸೂಲಿಗೆ ನೇಮಿಸಿದ್ದರು. ಈ ಗುತ್ತಿಗೆದಾರರು ಪೋರ್ಚುಗೀಸರೇ ಆಗಿದ್ದು ಸ್ಥಳೀಯರನ್ನು ರೋಮನ್ ಕೆಥೋಲಿಕ್ ಧರ್ಮಕ್ಕೆ ಮತಾಂತರ ಮಾಡುವ ಕಾರ್ಯದಲ್ಲೂ ತೊಡಗಿದ್ದರು. ಮತಾಂತರಕ್ಕೆ ಒಗ್ಗದವರನ್ನು ಹಿಂಸಿಸಿ ಬಲಾತ್ಕಾರವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಗೊಳಿಸುತ್ತಿದ್ದರು. ಈ ದ್ವೀಪ ಸಮೂಹವನ್ನು ಅವರು 1534ರಿಂದ 1665ರವರೆಗೆ ತಮ್ಮ ಆಡಳಿತದಲ್ಲಿ ಕಟ್ಟಿ ಹಾಕಿಟ್ಟರು. ಈ ಮಧ್ಯೆ ಉತ್ತರ ಭಾರತದಲ್ಲಿ ಡಚ್ಚರ ಪ್ರಭಾವವೂ ಹೆಚ್ಚುತ್ತಿರುವುದನ್ನು ಮನಗಂಡ ಬ್ರಿಟಿಷರು, ಅವರಿಗೆ ತಡೆಯನ್ನು ಮಾಡಲು ಪಶ್ಚಿಮ ಕರಾವಳಿಯ ಭಾಗವು ಅಗತ್ಯವಾಗಿತ್ತು. ಅವರು ಈ ಸಮಸ್ಯೆಯ ಪರಿಹಾರೋಪಾಯಕ್ಕಾಗಿ ಬ್ರಿಟನ್ ದೊರೆ ಚಾಲ್ರ್ಸ್ ಮತ್ತು ಪೋರ್ಚುಗಲ್ ದೊರೆ ಕಿಂಗ್ ಜಾನ್ I ಅವರ ಮಗಳು ಕ್ಯಾಥರೆನ್ ಬ್ರಾಗಾಂಜಳೊಡನೆ ವಿವಾಹವನ್ನು ನೆರವೇರಿಸಿದರು.

ಒಪ್ಪಂಚಿ ಚಿಂತೆ ಮದುವೆಯ ವರದಕ್ಷಿಣೆ ರೂಪದಲ್ಲಿ ಪೋರ್ಚುಗಲ್ ದೊರೆಯು ಬ್ರಿಟಿಷ ದೊರೆಗೆ 11ನೇ ಮೇ 1661ರಲ್ಲಿ ಮುಂಬಯಿ ದ್ವೀಪ ಸಮೂಹವನ್ನು ವರದಕ್ಷಿಣೆಯಾಗಿ ಬಹುಮಾನ ರೂಪದಲ್ಲಿ ನೀಡಿದರು. ಆದರೆ ಮುಂಬಯಿಯಲ್ಲಿ ಆಡಳಿತ ನಿರ್ವಹಿಸುತ್ತಿದ್ದ ಪೋರ್ಚುಗೀಸ್ ವೈಸ್‍ರಾಯ್‍ರು ಬ್ರಿಟಿಷರಿಗೆ ಸಂಪದ್ಭರಿತ ಮುಂಬಯಿಯನ್ನು ಒಪ್ಪಿಸಲು ತಯಾರಿರಲಿಲ್ಲ. ಬ್ರಿಟಿಷರು 1662ರಲ್ಲಿ ಅಬ್ರಾಹಂ ಶಿಪ್‍ಮೆನ್ ಎಂಬ ಗವರ್ನರ್‍ರನ್ನು ಕಳುಹಿಸಿ ಪೋರ್ಚುಗೀಸರಿಗೆ ಒತ್ತಡ ಕಳುಹಿಸಿದರು.

ಅವರು ಶಿಪ್‍ಮೆನ್‍ಗೂ ಮುಂಬಯಿ ಪ್ರದೇಶಕ್ಕೆ ಪ್ರವೇಶಿಸಲೇ ಬಿಡಲಿಲ್ಲ. ಬಳಿಕ 1664 ಗವರ್ನರ್ ಹಾಂಪ್ರ ಕ್ರೂಕ್ ನೇತೃತ್ವದ ಬ್ರಿಟಿಷ ಸೈನ್ಯವು ಮುಂಬಯಿಯನ್ನು ವಶಪಡಿಸಲು ಬಂದಾಗ ಪೋರ್ಚುಗೀಸರು ವಿರೋಧಿಸಿದರು. ಬಳಿಕ ಪೋರ್ಚುಗಲ್ ದೊರೆಯ ಮಧ್ಯಸ್ಥಿಕೆಯಲ್ಲಿ ಮುಂಬಯಿ ಪ್ರಾಂತ್ಯವು ಕೆಲವೊಂದು ಷರತ್ತುಗಳೊಂದಿಗೆ ಬ್ರಿಟಿಷರ ವಶವಾಯಿತು. ಈ ಷರತ್ತುಗಳು ಈಗಲೂ ಚಾಲ್ತಿ ಯಲ್ಲಿದ್ದು ಪೋರ್ಚುಗೀಸರು ಆಸ್ತಿಯ ಪಾಲುದಾರರು, ಶೇರುದಾರರ ಅಂಶವು ಅಥವಾ ಅವರ ಬ್ಯಾಂಕಿನಲ್ಲಿ ಅಡವು ಇಡಲಾಚಿ ಚಿನ್ನಾಭರಣಗಳು ಈಗಲೂ ಪೋರ್ಚುಗಲ್ ಸರಕಾರದ ಅಧೀನತೆಯಲ್ಲಿದೆ. ಬಳಿಕ 1668ರ ಮಾರ್ಚ್ 27ರಂದು ಬ್ರಿಟಿಷ ದೊರೆಯು ಮುಂಬಯಿಯನ್ನು ಬ್ರಿಟನ್‍ನ ಈಸ್ಟ್ ಇಂಡಿಯಾ ಕಂಪೆನಿಗೆ ಗುತ್ತಿಗೆಯ ಆಧಾರದಲ್ಲಿ ವಾರ್ಷಿಕ ಕಂ ದಾಯ ನೀಡುವ ಷರತ್ತು ಮೇರೆಗೆ ವರ್ಗಾವಣೆ ಮಾಡಿದರು.

17ನೇ ಜುಲಾಯಿ 1669ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ (ಅಧಿಕೃತವಾಗಿ ಬ್ರಿಟಿಷ ರಾಜಮನೆತನದ ಅಧಿಕೃತ ಸಂಸ್ಥೆ)ಯು ಗೇರಾಲ್ಡ್ ಆಂಗ್ರೆ ಅವರನ್ನು ಪ್ರಥಮ ಗವರ್ನರ್ ಆಗಿ ಮುಂಬಯಿಗೆ ನೇಮಕ ಮಾಡಿದರು. ಅವರು ಮುಂಬಯಿಯನ್ನು ರೂಪಾಂತರಗೊಳಿಸಿದ ‘ಪ್ರಥಮ ಶಿಲ್ಪಿ’ ಎಂದು ಖ್ಯಾತರಾದರು. 1673ರಲ್ಲಿ ಮುಂಬಯಿ ಸೇರಿ ಇತರ ದ್ವೀಪಗಳಾಚೆ ಸಪ್ತ ದ್ವೀಪಗಳನ್ನು ಒಟ್ಟು ಸೇರಿಸುವ ಯೋಜನೆ ಪ್ರಾರಂಭಿಸಿದರು. ಎರಡು ದ್ವೀಪಗಳ ಮಧ್ಯೆ ಇರುವ ಸಮುದ್ರ ಭಾಗಕ್ಕೆ ಕಲ್ಲು, ಮಣ್ಣು ತುಂಬಿಸಿ ಜೋಡಿಸಿದರು. ಒಟ್ಟು ಏಳು ದ್ವೀಪಗಳ ಜೋಡಣೆಯ ಕಾರ್ಯವು 1723ರಲ್ಲಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ನಿರ್ಮಾಣವೂ ಶ್ರೀ ಮುಂಬಾ ದೇವಿ ದೇವಸ್ಥಾನದ ಸ್ಥಳಾಂತರವೂ ನಡೆಯಿತು. ಎಲ್ಲಾ ದ್ವೀಪಗಳು ಒಟ್ಟು ಸೇರಿ ನಂತರ ಮುಂಬಯಿ ಪಟ್ಟಣವಾಯಿತು. ವಸಾಯಿಯಿಂದ ಕೊಲಬಾವರೆಗಿನ ಭೂಪ್ರದೇಶ ಬ್ರಿಟಿಷರ ವಶದಲ್ಲಿದ್ದರೆ
ಬ್ರಿಟಿಷರು ಪೋರ್ಚುಗೀಸರ ವಶದಲ್ಲಿದ್ದ ಇತರ ಪ್ರದೇಶಗಳಿಗೆ ಆಕ್ರಮಣ ಮಾಡಬಾರದೆಂದು 1664ರ ಒಡಂಬಡಿಕೆ ಯಂತೆ ಗೋವಾ, ದಿವ್, ಚಿಮನ್, ದಾದ್ರಾ ನಗರ ಹವೇಲಿ ಪೋರ್ಚುಗೀಸರ ವಶದಲ್ಲಿಯೇ ಉಳಿಯಿತು. ಆಗ ಮುಂಬಯಿ ವಿಭಾಗ ವೆಂದೆನಿಸಿದ ವಸಾಯಿ, ಥಾಣೆ ಪ್ರದೇಶವು ಮಧ್ಯದ ಕಡಲ್ಗಾಲುವೆ (ಕ್ರೀಕ್- ಈಗ ಭಾಯಂದರ್ ಖಾಡಿ) ಥಾಣೆ ಮತ್ತು ಸಯನ್ ಮಧ್ಯದ ನೈಋತ್ಯವಾಗಿ ಕಡಲಾಲ್ಗುವೆ ಮಾಹಿಮ್ ಮತ್ತು ಬಾಂದ್ರಾದ ಮಧ್ಯದಲ್ಲಿರುವ ಮಾಹಿಂ ಕ್ರೀಕ್ ಇವುಗಳು ಆಗ ಬ್ರಿಟಿಷರ ಆಡಳಿತ ವಿಕೇಂದ್ರೀಕರಣದ ಗಡಿ ಭಾಗವಾಗಿತ್ತು. ಬಳಿಕ ಇವುಗಳನ್ನು ನಗರ, ಉಪನಗರ ಗ್ರಾಮೀಣ ಪ್ರದೇಶಗಳಾಗಿ ಮಾರ್ಪಾಟು ಗೊಳಿಸಲಾಯಿತು. 1871ರಲ್ಲಿ ದಕ್ಷಿಣ ಮತ್ತು ಉತ್ತರ ಉಪನಗರಗಳೆಂದು ಬ್ರಿಟಿಷರು ಬಾಂದ್ರಾದಿಂದ ದಹಿಸರ್ ಮತ್ತು ಕುರ್ಲಾದಿಂದ ಮುಲುಂಡ್‍ವರೆಗಿನ ಉಪನಗರಕ್ಕೆ ಪ್ರತ್ಯೇಕ ಉಪ ಜಿಲ್ಲಾಧಿಕಾರಿಗಳನ್ನು ನೇಮಿಸಿಚ್ದಿರು.

1920ರಲ್ಲಿ ಮತ್ತೊಮ್ಮೆ ಜಿಲ್ಲೆಗಳು ಪುನರ್ರಚನೆಗೊಂಡು ತಾಲೂಕುಗಳಾದವು. ಅಂತಹ ಒಂದು ತಾಲೂಕಿಗೆ ‘ಅಂಧೇರಿ’ ಕೇಂದ್ರವಾಯಿತು.

ಮುಂಬಯಿಯ ಉಪನಗರಗಳಲ್ಲಿ ಅತ್ಯಂತ ದೊಡ್ಡ ಉಪನಗರವೇ ‘ಅಂಧೇರಿ’. ನಾಲ್ಕು ಮಂದಿ ಶಾಸಕರು, ಇಬ್ಬರು ಸಂಸತ್ ಸದಸ್ಯರ ವ್ಯಾಪ್ತಿಯ ಎಂಟು ಮಂದಿ ನಗರಸೇವಕರ ಕಾರ್ಯಕ್ಷೇತ್ರವಾದ ಅಂಧೇರಿಯಲ್ಲಿ ಹಾದುಹೋಗುತ್ತಿರುವ ಪಶ್ಚಿಮ ರೈಲ್ವೆ ಯ ರೈಲು ಮಾರ್ಗ ಮತ್ತು ನಿಲ್ದಾಣ ಈ ನಗರವನ್ನು ಪಶ್ಚಿಮ ಮತ್ತು ಪೂರ್ವ ಎಂದು ವಿಂಗಡಿಸಿದೆ. ಅಂಧೇರಿ ಮಧ್ಯಭಾಗವು ಉತ್ತರ ದಕ್ಷಿಣವಾಗಿ ಅತ್ಯಂತ ಕಿರಿದಾಗಿದೆ. ದಕ್ಷಿಣದಲ್ಲಿ ಒಂದು ಕಿಲೋ ಮೀಟರ್ ಅಂತರದಲ್ಲಿ ವಿಲೇಪಾರ್ಲೆ, ಉತ್ತರದಲ್ಲಿ ಒಂದು ಕಿಲೋ ಮೀಟರ್ ಅಂತರದಲ್ಲಿ ಜೋಗೇಶ್ವರಿ ನಗರಗಳಿವೆ. ಆದರೆ ಅಂಧೇರಿಯಲ್ಲಿ ಪೂರ್ವ ಹಾಗೂ ಪಶ್ಚಿಮಕ್ಕೆ ಸಾಗಿದಂತೆ ತುಂಬಾ ವಿಸ್ತಾರವಾದ ಭೂಪ್ರದೇಶವನ್ನು ಹೊಂದಿದೆ. ಬೃಹ ನ್ಮುಂಬಯಿ ಮಹಾನಗರಪಾಲಿಕೆಯು ಈ ನಗರದ ಮೂಲಭೂತ ಸೌಕರ್ಯವಾದ ನೀರು, ಆರೋಗ್ಯ, ತ್ಯಾಜ್ಯ ವಿಲೇವಾರಿ, ಜನನ, ಮರಣ ದಾಖಲೆ, ಕಂದಾಯ ವಸೂಲಿ, ವಾಣಿಜ್ಯ ಸಂಕೀರ್ಣಕ್ಕೆ ಒಪ್ಪಿಗೆ, ವ್ಯಾಪಾರ, ವ್ಯವಹಾರಕ್ಕೆ ದಾಖಲೆಗಳ ಸಂಗ್ರಹ ಮೊದಲಾದ ಸ್ಥಳೀಯ ಆಡಳಿತಕ್ಕಾಗಿ ವಿಭಾಗ (ಕೆ. ಪೂರ್ವ) ಮತ್ತು (ಕೆ. ಪಶ್ಚಿಮ) ಎಂಬ ಎರಡು ಆಡಳಿತ ಕಚೇರಿಗಳೂ ಕಾರ್ಯ ನಿರ್ವಹಿಸುತ್ತಿದೆ.

ಪೆÇಲೀಸ್ ಉಪಾಯುಕ್ತರ ಎರಡು ಕೇಂದ್ರಗಳೂ ಇಲ್ಲಿವೆ. ಪೆÇವಾಯಿ, ಸಾಕಿ ವಿಹಾರ್, ಅಂಧೇರಿ (ಪ್ರಧಾನ) ಅಂಬೋಲಿ, ವರ್ಸೋವಾ ಇಲ್ಲಿ ಲಾಕ್ ಅಪ್ ಸಹಿತ ಪೆÇಲೀಸ್ ಠಾಣೆಗಳಿವೆ.
ಚಾಂದಿವಲಿ, ಮೊಗ್ರ, ಮರೋಳ್, ಸಹಾರ, ಅಂಬೋಲಿ, ಗೊಂಡವಲಿ, ವರ್ಸೋವಾ, ಗಿಲ್ಬರ್ಟ್ ಈ ಮೊದಲಾದ ಗ್ರಾಮ ಹೊಂದಿರುವ ಅಂಧೇರಿ ಹಾಗೂ ಕುರ್ಲಾ ಪ್ರದೇಶಗಳು ಪೆÇೀರ್ಚುಗೀಸರ ಕಾಲದಲ್ಲಿ 66 ಹಳ್ಳಿಗಳನ್ನು ಹೊಂದಿತ್ತು. ಅದಕ್ಕಾಗಿ ಈ ಪ್ರದೇಶವನ್ನು ಸಾಲ್‍ಸೆಟ್ ಎಂದು ಕರೆಯಲಾಗುತ್ತಿತ್ತು. ಅಂಧೇರಿಯಲ್ಲಿ ಪೆÇೀರ್ಚುಗೀಸರೇ ನಿರ್ಮಿಸಿದ ಚರ್ಚ್ ಹಾಗೂ ಕೋಟೆ ಇದೆ. ಭೂಗರ್ಭದ ಲಾವಾ ಸ್ಫೋಟದಿಂದ ಉಂಟಾದ ಮಿಲಿಯ ವರ್ಷ ಪೂರ್ವದ ಶಿಲಾಮಯ ಗುಡ್ಡ ಇದೆ. ನದಿ, ಪರ್ವತ, ಸರೋವರ, ಹೊಳೆ, ಕಡಲ್ಗಾಲುವೆ (ಒಚಿಟಿgಡಿoತಿ), ಅಳುವೆ, ಆಕರ್ಷಕ ಸಮುದ್ರ ತೀರ, ಕಾಂಡ್ಲಾ ಕಾಡು, ಹುಲ್ಲಿನ ಬಯಲು, ಪುರಾತನ ಗುಹೆಗಳು, ದೇವಾಲಯಗಳೂ ಇವೆ. ಬ್ರಿಟಿಷರ ಕಾಲದ ಚರ್ಚ್‍ಗಳು, ಆಧುನಿಕ ದೇವಮಂದಿರಗಳು, ಮೆಟ್ರೋ 1ರ ಸೌಲಭ್ಯವಿದೆ. ಮೆಟ್ರೋ ರೈಲು ಮಾರ್ಗ ಅತ್ಯಂತ ಹೆಚ್ಚು ನಿಲ್ದಾಣಗಳನ್ನು ಪಡೆದಿದೆ. ಅಂಧೇರಿ (ವರ್ಸೋವ, ಡಿ. ಎನ್. ನಗರ, ಅಜಾದ್ ನಗರ, ಅಂಧೇರಿ ರೈಲು ನಿಲ್ದಾಣ, ಹೈವೆ, ಚಕಾಲ, ಮರೋಲ್, ಸಾಕಿನಾಕ) ಜೋಪಡಿಗಳ ಕೊಳಚೆಗೇರಿ, ಶ್ರೀಮಂತರ ಬಂಗಲೆಕೇರಿ, ಜೈನಾಲಯ, ಬೌದ್ಧಾಲಯ, ಮಸೀದಿ ದರ್ಗಾಗಳಿವೆ. ಸಿಖ್ಖರ ಗುರುದ್ವಾರಗಳು, ಪಾರ್ಸಿಗಳ ಅಗ್ಯಾರ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಂತಾರಾಜ್ಯ ಸಂಪರ್ಕ ರೈಲು ನಿಲ್ದಾಣ, ಉತ್ತರ ಮತ್ತು ದಕ್ಷಿಣ ಮುಂಬಯಿಯನ್ನು ಸಂಪರ್ಕಿಸುವ ಮೂರು ರಾಜಮಾರ್ಗಗಳಿವೆ (ಪಶ್ಚಿಮ ಹೆದ್ದಾರಿ, ಎಸ್. ವಿ. ರೋಡ್, ಲಿಂಕ್ ರೋಡ್). ರಾಜ್ಯದಲ್ಲೇ ಅತಿದೊಡ್ಡ ಕ್ರೀಡಾ ಸಂಕೀರ್ಣ ಇದೆ.

ಫಿಶರೀಸ್ ಮಹಾವಿದ್ಯಾಲಯವೂ ಇರುವುದು ಇಲ್ಲಿ ಮಾತ್ರ. ಪೋರ್ಚುಗೀಸರ ಕಾಲದ ರೋಮನ್ ಮತ್ತು ಬ್ರಿಟಿಷರ ಪ್ರಾಬಲ್ಯದಿಂ ದಾಗಿ ಈಸ್ಟ್ ಇಂಡಿಯನ್ ಕ್ರಿಶ್ಚಿಯನ್‍ರು ಇದ್ದಾರೆ. ಮೂಲ ನಿವಾಸಿಗಳಾದ ಕೋಲಿ, ಅಗ್ರಿ, ಭಂಡಾರಿ, ಪ್ರಭು ಪಠಾರೆ, ಬನಿಯಾಗಳಿದ್ದಾರೆ. ಮುಂಬಯಿ ನಗರವು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಬಳಿಕ ಮಹಾರಾಷ್ಟ್ರದ ಕೊಂಕಣ ಹಾಗೂ ಇತರ ಭಾಗಗಳಿಂದ ವಲಸೆ ಬಂದ ಮರಾಠಿಗಳಿದ್ದಾರೆ. ವಲಸೆ ಬಂದ ದಕ್ಷಿಣ ಮತ್ತು ಉತ್ತರದ ಭಾರತೀಯರೂ ಇದ್ದಾರೆ. ಹಲವಾರು ಫಿಲ್ಮ್ ಥಿಯೇಟರ್, ಫಿಲ್ಮ್ ತಯಾರಿಸುವ ಬೃಹತ್ ಫಿಲ್ಮ್ ಸ್ಟುಡಿಯೋಗಳೂ ಇವೆ. ಟಿಪ್ಪು ಸುಲ್ತಾನ್‍ನ ಸ್ಮಾರಕ, ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕವೂ ಇವೆ. ಸ್ಕೈವಾಕ್, ಸಬ್‍ವೇ ಇವೆ. ಐ. ಟಿ. ವಾಣಿಜ್ಯ ಸಂಕೀರ್ಣಗಳಿವೆ. ಸಗಟು ಮತ್ತು ಬಿಡಿ ವ್ಯವಹಾರಗಳ ಅನೇಕ ಸಂಕೀರ್ಣಗಳಿವೆ. ಸಿಗರೇಟ್ ಫ್ಯಾಕ್ಟರಿ, ಬಿಸ್ಕಿಟ್, ಚಾಕಲೇಟ್ ತಯಾರಿಸುವ ಕಾರ್ಖಾನೆ ಇದೆ. ಮಿನರಲ್ ವಾಟರ್ ಖ್ಯಾತಿಯ ಬಿಸ್ಲೇರಿಯ ಪ್ರಧಾನ ಘಟಕವೂ ಇರುವುದು ಇಲ್ಲಿಯೇ. ದ್ವೀಪಕ್ಕೆ ಸಂಪರ್ಕದ ಫೇರಿ ಸರ್ವಿಸ್ ಇದೆ. ಹೆಲಿಕಾಪ್ಟರ್ ಸೇವೆಯ ಕಂಪನಿ ಇದೆ. ಸರೋವರ, ದ್ವೀಪದ, ಗುಡ್ಡ ಇವೆ. ಚಿತ್ರ ತಾರೆಯರ ಮಹಲುಗಳಿವೆ. ಪ್ರವಾಸಿ ತಾಣಗಳಿವೆ. ಉದ್ಯಾನಗಳಿವೆ. ವೃದ್ಧಾಶ್ರಮ, ಅನಾಥಾಲಯ ಇವೆ. ಶಿಕ್ಷಣ ಸಂಕೀರ್ಣ, ನೃತ್ಯ, ಸಂಗೀತ ಕೇಂದ್ರಗಳಿವೆ. ಗಣಪತಿ ಮಂಡಳಗಳ ಪ್ರಖ್ಯಾತಿ ‘ಅಂಧೇರಿಯ ರಾಜ’ನ ಆಡಂಬೊಲವಿದೆ. ವಿಭಾಗೀಯ ಸಾರಿಗೆ ಕಚೇರಿ ಇದೆ. ತಾಲೂಕು ತಹಶೀಲ್ದಾರರ ಕಚೇರಿ, ಜಿಲ್ಲಾ ನ್ಯಾಯಾಲಯ, ಸರಕಾರಿ ಬೃಹತ್ ಆಸ್ಪತ್ರೆ, ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳಿವೆ, ಪುರಾತನ ಮನೆ, ಆಧುನಿಕ ಬಂಗಲೆ, ಮಠ, ಆಶ್ರಮ, ಸರಕಾರ ನಿರ್ಮಿಸಿದ ವಸತಿ ಸಂಕೀರ್ಣಗಳಿವೆ. (ದಾದಾಬಾಯಿ ನವರೋಜಿ ನಗರ, ಚಂದ್ರಶೇಖರ್ ಅಜಾದ್ ನಗರ). ಮಿಲಿಟರಿ ವೈರ್‍ಲೆಸ್, ಕ್ಷಿಪ್ರ ಕಾರ್ಯಪಡೆಯ ತರಬೇತಿ ಕೇಂದ್ರ, ಅಗ್ನಿಶಾಮಕ ಕೇಂದ್ರಗಳೂ ಇವೆ. ಪತ್ರಿಕಾ ಕಚೇರಿ, ಆಕಾಶವಾಣಿಯ ಉಪಕೇಂದ್ರವಿದೆ.

ಅತ್ಯಂತ ಪುರಾತನ ನಗರವಾಚಿ ಕ್ರಿ.ಪೂ. ದಲ್ಲೇ ಪಶ್ಚಿಮ ಭಾಗದ ಪ್ರಮುಖ ಈ ಪ್ರದೇಶಕ್ಕೆ ‘ಅಂಧೇರಿ’ ಎಂಬ ನಾಮಧೇಯ ಹೇಗೆ ಬಂತು? ಎಂಬ ವಿಷಯ ಈಗಲೂ ನಿಗೂಢವಾಗಿದೆ. ಅಂಧೇರಿ ಪೂರ್ವದಲ್ಲಿ ಕೊಂಡಿವಿಟಾ ಬೆಟ್ಟ ಮತ್ತು ಪಶ್ಚಿಮದಲ್ಲಿ ಗಿಲ್ಟರ್ಟ್ ಬೆಟ್ಟ ಇದ್ದುದರಿಂದ ದಿನದ ಹಲವು ತಾಸು ಸೂರ್ಯಕಿರಣ ಬೀಳದೇ ಇದ್ದುದರಿಂದ ಈ ಪ್ರದೇಶವು ಕತ್ತಲೆಯಿಂದ ಆವೃತ್ತವಾಗಿ ದ್ದುದರಿಂದ ‘ಅಂಧೇರಾ’ ವೇ ಅಂಧೇರಿ ಆಯಿತೆಂದು ಹೇಳಬಹುದು. ಈಗ ಸುಮಾರು ಹದಿನೈದು ಲಕ್ಷ ಜನಸಂಖ್ಯೆ ಇರುವ ಈ ಪ್ರದೇಶವು ಒಂದು ಕಾಲದಲ್ಲಿ ಪ್ರಮುಖ ಬಂದರು ಆಗಿತ್ತು. ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಉತ್ತರದಲ್ಲಿ ಹರಿಯುವ ಮೀಠಿ ನದಿಯು ಸಾಕಿ ವಿಹಾರದಿಂದ ಸಹಾರ ತನಕ ಹರಿದು ಆನಂತರ ಕುರ್ಲಾ, ಧಾರಾವಿ ಮುಖಾಂತರ ಮಾಹಿಮ್‍ನಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.

ಹಿಂದೆ ಅಂಧೇರಿಯಲ್ಲಿ ಫಲವತ್ತಾದ ಭೂಮಿ ಇತ್ತು. ಅಗ್ರಿಗಳು ಬೇಸಾಯ, ಭಂಡಾರಿಗಳು ಶೇಂದಿ, ಕೋಲಿಗಳು ಮೀನುಗಾರಿಕೆಯಲ್ಲಿ ತೊಡಗಿದ್ದ ಕಾಲವೊಂದಿತ್ತು. ಈಗ ಪಶ್ಚಿಮ ಭಾಗದಲ್ಲಿ ಮಾತ್ರ ಕೋಲಿಗಳು ಉಳಿದಿದ್ದಾರೆ. ವಸತಿ ಸಂಕುಲ ಗಳು, ವಾಣಿಜ್ಯ ಸಂಕೀರ್ಣಗಳು, ಕೈಗಾರಿಕಾ ವಲಯಗಳು, ಮಾರುಕಟ್ಟೆಗಳು, ಫ್ಯಾಕ್ಟರಿಗಳ ನಿರ್ಮಾಣ ಇವುಗಳಿಂದಾಗಿ ಬೃಹತ್ ಪಟ್ಟಣವಾಗಿ ರೂಪುಗೊಂಡಿದೆ. ಶುದ್ಧ ನೀರು ಹರಿಯುತ್ತಿದ್ದ ಮೀಠಿ ನದಿಯು ಈಗ ತ್ಯಾಜ್ಯದ ತೋಡು ಆಗಿದೆ. ಇದ್ದ ಬಯಲು, ಗದ್ದೆ ಕಾಂಡ್ಲಾ ಕಾಡುಗಳನ್ನು ಜೋಪಡಿಗಳು ಆಕ್ರಮಿಸಿಕೊಂಡಿವೆ. ಎಮ್ಮೆಯ ಹಾಲು ಒದಗಿಸುತ್ತಿದ್ದ ಅನೇಕ ತಬೇಲಾ (ಎಮ್ಮೆಯ ಬೃಹತ್ ಕೊಟ್ಟಿಗೆಗಳು) ಜಾಗದಲ್ಲಿ ಕಾಂಪ್ಲೆಕ್ಸ್ ತಲೆ ಎತ್ತಿವೆ. ಜನಸಂಖ್ಯೆಯು ವಿಪರೀತ ವೃದ್ಧಿಯಾಗಿರುವುದರಿಂದ ವಾಹನ ಸಂಚಾರವೂ ಹೆಚ್ಚಾಗಿದೆ.

ಸರಕಾರದ ಆಡಳಿತದಲ್ಲಿರುವ ಬೃಹತ್ ಆರ್. ಎಲ್. ಕೂಪರ್ ಆಸ್ಪತ್ರೆಯು ಅಂಧೇರಿಯ ಗಡಿ ಭಾಗದಲ್ಲಿದ್ದು 1969ರಲ್ಲಿ ಪ್ರಾರಂಭವಾಗಿತ್ತು. 1970 ರಲ್ಲಿ ಇನ್ನೂ ವಿಸ್ತರಣೆಗೊಳಿಸಲಾಯಿತು. ನಗರದ ಪಶ್ಚಿಮ ಭಾಗದ ಜನರಿಗೆ ಈ ಸರಕಾರಿ ಆಸ್ಪತ್ರೆಯು ಸಂಜೀವಿನಿಯಂತಿರುವುದರಿಂದ 1999 ರಲ್ಲಿ ಇದನ್ನು ವಿಶೇಷ ಅಭಿವೃದ್ಧಿಗೊಳಿಸಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಮಟ್ಟಕ್ಕೆ ಸನ್ನದ್ಧಗೊಳಿಸಲಾಗಿದೆ. ಈ ಆಸ್ಪತ್ರೆಯೊಡನೆ ಬಾಳ್ ಠಾಕ್ರೆ ಆಸ್ಪತ್ರೆ ಯನ್ನೂ ಸಮ್ಮಿಲನಗೊಳಿಸಿ ಮೆಡಿಕಲ್ ಕಾಲೇಜು ದರ್ಜೆಗೆ ಏರಿಸಲಾಗಿದೆ. ಈಗ ಇಲ್ಲಿ ಒಟ್ಟು 940 ರೋಗಿಗಳಿಗೆ ಏಕಕಾಲದಲ್ಲಿ ಸುಶ್ರೂಷೆ ನಡೆಯುತ್ತದೆ. ಪಶ್ಚಿಮ ಉಪನಗರದಲ್ಲಿನ ಒಂದು ಬೃಹತ್ ಆಸ್ಪತ್ರೆ ಇದಾಗಿದೆ.

ಅಂಧೇರಿ ರೈಲು ನಿಲ್ದಾಣದ ಪಶ್ಚಿಮದಲ್ಲಿ ಎನ್. ಜೆ. ವಾಡಿಯಾ ಎಂಬ ಆಸ್ಪತ್ರೆಯು ಅತ್ಯಂತ ಪುರಾತನವಾಗಿದೆ . ಪಾರ್ಸಿ ಸಮಾಜದ ಡಿನಾ ವಾಡಿಯಾ, ಸರಕಾರಕ್ಕೆ ನೀಡಿದ ನಿಧಿಯಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಈ ಆಸ್ಪತ್ರೆಯು ಬಡವರ ಆಶಾಕಿರಣವಾಗಿತ್ತು. ಕಲ್ಲಿನ ಈ ಕಟ್ಟಡದಲ್ಲಿ ಗಜ್ದಾರ್ ಸಭಾಗೃಹವೂ ಇದೆ.

ಅಂಧೇರಿ ಈಶಾನ್ಯ ಭಾಗದಲ್ಲಿ ತುಲ್ಸೀ, ವಿಹಾರ್ ಮತ್ತು ಪೊವೈ ಎಂಬ ಮೂರು ಸರೋವರಗಳಿರುವ ಏಕೈಕ ಉಪನಗರ. ಇಲ್ಲಿಯೇ ಓಶಿವಾರ ಮತ್ತು ಮೀಠಿ ನದಿಯು ಉಗಮವಾಗಿ ಅರಬ್ಬಿ ಸಮುಚ್ರಿ ಸೇರುತ್ತದೆ.

ವರ್ಸೋವದಲ್ಲಿ ಪ್ರತಿವರ್ಷ ಜನವರಿಯಲ್ಲಿ ನಡೆಯುವ ವರ್ಸೋವ ಕೋಲಿವಾಡ ಸೀಫುಡ್ ಫೆಸ್ಟಿವಲ್ ಇಪ್ಪತ್ತೈದರಿಂದ ಮೂವತ್ತು ಸಾವಿರ ಜನರ ಆಕರ್ಷಣೆಯ ಕೇಂದ್ರ. ಸಾಗರ ಉತ್ಪನ್ನ ಆಹಾರದ ರುಚಿಯನ್ನು ಆಸ್ವಾದಿಸಬಯಸುವವರು ಇಲ್ಲಿಗೆ ಪ್ರತೀವರ್ಷ ಬರುತ್ತಾರೆ. ಮುಂಬಯಿಯ ವರ್ಲಿ ಮತ್ತು ಅಂಧೇರಿಯ ವರ್ಸೋವದಲ್ಲಿ ಮಾತ್ರ ಈ ವಿಶೇಷ ಉತ್ಸವ. ನೃತ್ಯ, ಸಂಗೀತ, ವಾದ್ಯಘೋಷ ಗಳೊಂದಿಗೆ ವಿವಿಧ ಮೀನು, ಸಿಗಡಿ, ಏಡಿಗಳ ಬಗೆಬಗೆಯ ಕೋಲಿ ಮಹಿಳೆಯರೇ ತಯಾರಿಸಿದ ಮೀನು ಖಾದ್ಯ ಇಲ್ಲಿ ಏಕಕಾಲದಲ್ಲಿ ದೊರೆಯುತ್ತದೆ.

ಅಂಧೇರಿಯ ಪೂರ್ವ ಮತ್ತು ಪಶ್ಚಿಮದಲ್ಲಿ ಅನೇಕ ಗಣೇಶ ಮಂಡಳಗಳಿದ್ದು ಮರೋಲ್, ಸಾಕಿನಾಕ, ಪೆÇವೈಯಲ್ಲಿ ಸ್ಥಾಪಿತವಾದ ಗಣೇಶನ ಬೃಹತ್ ವಿಗ್ರಹಗಳ ವಿಸರ್ಜನೆಯು ವರ್ಸೋವ ಕಡಲ ತೀರದಲ್ಲಿ ನಡೆಯುತ್ತದೆ. ಗಣೇಶ ವಿಗ್ರಹಗಳ ಮೆರವಣಿಗೆಯು ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ. ಆದರೆ ಅಂಧೇರಿ ಪಶ್ಚಿಮದ ಅಜಾದ್ ನಗರದಲ್ಲಿ 1966ರಲ್ಲಿ ಪ್ರಾರಂಭವಾದ “ಅಂಧೇರಿ ಚಾ ರಾಜಾ”ನ ವಿಗ್ರಹ ವಿಸರ್ಜನೆಯು ಮಾತ್ರ ಅನಂತ ಚತುರ್ದಶಿಯಂದು ಆಗುವುದಿಲ್ಲ. ಚತುರ್ದಶಿಯ ಐದು ದಿನಗಳ ಬಳಿಕ ಸಂಕಷ್ಟಿಯ ದಿನದಂದು ಗಣಪತಿಯ ವಿಸರ್ಜನೆಯು ಸಾಯಂಕಾಲ 5 ಗಂಟೆಗೆ ಪ್ರಾರಂಭವಾಗಿ ಮೆರವಣಿಗೆಯು ಅಂಧೇರಿ ಪಶ್ಚಿಮ ನಗರವನ್ನು ಸುತ್ತಿ ಅರಬ್ಬಿ ಸಮುದ್ರ ಕಿನಾರೆಗೆ ಬರುವಾಗ ಮರುದಿನ ಬೆಳಿಗ್ಗೆ 6 ಗಂಟೆ. ಮೆರವಣಿಗೆ ವಾದ್ಯ, ಬ್ಯಾಂಡು, ವಾಲಗ, ಡೋಲುಗಳ ತಂಡವು ಮಹಾರಾಷ್ಟ್ರ ಮತ್ತು ಮುಂಬಯಿಯ ಕಲಾವಿದರು ತಮ್ಮ ಸೇವೆಯ ರೂಪದಲ್ಲಿ ಭಾಗವಹಿಸುತ್ತಾರೆ.

ದಾರಿಯುದ್ದಕ್ಕೂ ಪ್ರಸಾದ, ತಿಂಡಿ, ನೀರು, ಶರಬತ್ತು, ಚಾ ವಿತರಣೆಯನ್ನು ಮುಸ್ಲಿಮರು, ಕ್ರಿಶ್ಚಿಯನ್ನರು, ಪಾರ್ಸಿಗಳು ಭಕ್ತಾದಿಗಳಿಗೆ ನೀಡುವ ಭಾವನಾತ್ಮಕ ಮೆರವಣಿಗೆ ‘ಶ್ರೀ ಅಂಧೇರಿಚಾ ರಾಜ’ನದ್ದು. ಗೋಲ್ಡನ್ ಟೊಬಾಕೋ ಕಂಪನಿಯ ಕೆಲಸಗಾರರು ಸಮಸ್ಯೆಗೆ ಒಳಗಾದಾಗ ಗಣಪತಿಯನ್ನು ನೆನೆದರು. ಸಮಸ್ಯೆಯ ನಿವಾರಣೆಯಾದುದರಿಂದ 1966ರಿಂದ ಭಕ್ತಾದಿಗಳ ಇಚ್ಫೆಯನ್ನು ಅನುಗ್ರಹಿಸುವ ಗಣಪತಿ ‘ನವ್ಸಾಲ ಪಾವ್‍ಣಾರ ಗಣಪತಿ’ ಎಂಬ ನಾಮದಿಂದ ಪೂಜಿಸಿದರು.

ಗಣಪತಿ ವಿಸರ್ಜನೆ ಮೆರವಣಿಗೆಯಂತೆ ಕ್ರಿಶ್ಚಿಯನ್ನರ ಕಾರ್ನಿವಲ್ ಸಮಾರಂಭದ ಯಾತ್ರೆ, ಮುಸ್ಲಿಮರ ಮೊಹರಂ ಮೆರವಣಿಗೆ ನಾಗರಿಕರ ಕೂಡುವಿಕೆಯಲ್ಲಿ ಅದ್ದೂರಿ ಹಾಗೂ ಸೌಹಾರ್ದಯುತವಾಗಿ ಪ್ರತೀವರ್ಷ ಸಾಗುತ್ತಿವೆ.
1992ರಲ್ಲಿ ಅಯೋಧ್ಯೆಯ ರಾಮಜನ್ಮ ಭೂಮಿ ವಿವಾದದಿಂದಾಗಿ ಎಲ್ಲೆಡೆ ಕೋಮು ದಳ್ಳುರಿಯಿಂದ ಅನೇಕ ಆಸ್ತಿ ಹಾನಿ, ಹತ್ಯೆ, ಹಿಂಸೆಗಳು ನಡೆದಿತ್ತು. ಆದರೆ ಅಂಧೇರಿಯಲ್ಲಿ ಇತರ ನಗರಕ್ಕೆ ತುಲನೆ ಮಾಡಿದಾಗ ಅತ್ಯಲ್ಪ ಜೀವಹಾನಿ ಸಂಭವಿಸಿತ್ತು. ಆದರೆ 2005ರ 26 ಜುಲೈನಲ್ಲಿ ಭೀಕರ ಪ್ರವಾಹದ ನೀರು ಸಮುದ್ರಕ್ಕೆ ಸೇರುವ ತೀವ್ರತೆಯಿಂದಾಗಿ ಹಲವಾರು ಮುಗ್ಧರು ಜೀವಕಳಕೊಂಡಿದ್ದರು. ಕೋಟ್ಯಾಂತರ ರೂಪಾಯಿಗಳ ನಷ್ಟ ಸಂಭವಿಸಿತ್ತು. ಈ ಘಟನೆಯು ಎಂದೂ ನೆನಪಿನಾಳದಿಂದ ಮಾಸಲಾಗದ್ದು .

ಕಾನೂನು ಸುವ್ಯವಸ್ಥೆ ಹಾಗೂ ಅಪರಾಧಿಗಳ ನಿಯಂತ್ರಣ ಮತ್ತು ಅಪರಾಧಿಗಳ ಶೋಧ, ಶಿಕ್ಷೆಗಾಗಿ ನಾಲ್ಕು ಪೆÇಲೀಸ್ ಠಾಣೆಗಳಿವೆ. ಕಾಗದ ಪತ್ರ ವಿಲೇವಾರಿಗಾಗಿ ನಾಲ್ಕು ಅಂಚೆ ಕಚೇರಿಗಳಿವೆ. ಎರಡು ಉಪಕೇಂದ್ರ ಕಚೇರಿಗಳಿದ್ದು ಅವುಗಳು ಅಂಧೇರಿ ಪಶ್ಚಿಮದ ಎಸ್. ವಿ. ರೋಡ್‍ನಲ್ಲಿ (ಪುರಾತನ) ಮತ್ತು ಅಜಾದ್ ನಗರದಲ್ಲಿ ನೂತನ ಪತ್ರ ವಿಂಗಡನಾ ಉಪಕೇಂದ್ರವಿದೆ.

1960 ರ ಮೇ 1ರಂದು ಮಹಾರಾಷ್ಟ್ರ ರಾಜ್ಯ ಉದಯವಾದ ಬಳಿಕಮುಂಬಯಿಗೆ ಮಹಾರಾಷ್ಟ್ರಿಯನ್ನರ ವಲಸೆ ಪ್ರಾರಂಭವಾಯಿತು ಹಾಗೂ ಗಿಗಾರ್ಂವ್, ಲಾಲಾಭಾಗ್, ಪರೇಲ್, ಬೈಕುಲಾ ಕಡೆಯಲ್ಲಿ ಚಿಕ್ಕ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದವರು ಕೂಡ ಉಪನಗರಕ್ಕೆ ಬರಲಾರಂಭಿಸಿದರು. ಇದರಿಂದಾಗಿ ಮರೋಲ್, ಚಂದಾವಳಿ, ಮರೋಸಿ, ಗುಂಡವಲಿ, ಸಹಾರ ಈ ಹಳ್ಳಿಗಳಲ್ಲಿ ಸ್ಥಳೀಯ ಮಾಲಕರೊಡನೆ ಒಡಂಬಡಿಕೆಯೊಂದಿಗೆ ಜೋಪಡಿ ಚಾಲ್‍ಗಳು ನಿರ್ಮಾಣಗೊಂಡವು. ಹುಲ್ಲು ಗದ್ದೆ, ನದಿ ಕಿನಾರೆ, ಮುಕ್ತ ಬಯಲು ಅತಿಕ್ರಮಣಗೊಂಡಿತು. ಬಳಿಕ ಉತ್ತರ ಭಾರತೀಯರು, ಮುಸ್ಲಿಂರು ಸೇರಿ ಇಲ್ಲಿ ಜನಸಂಖ್ಯೆ ವೃದ್ಧಿಯಾಯಿತು. ವಿಶೇಷವಾಗಿ ಅಂಧೇರಿ ಪೂರ್ವದಲ್ಲಿದ್ದ ಹಳೆಯ ಹಳ್ಳಿಗಳು ಮಾಯವಾಯಿತು. ಇತ್ತೀಚಿನ ಹತ್ತು ವರ್ಷಗಳಲ್ಲಿ ವಾಣಿಜ್ಯ, ಐಟಿ ಸಂಸ್ಥೆಗಳ ಕಟ್ಟಡಗಳೂ ಭಾರೀ ಸಂಖ್ಯೆಯಲ್ಲಿ ತಲೆ ಎತ್ತಿವೆ.

2007ರಲ್ಲಿ ರಾಷ್ಟ್ರೀಯ ಪುರಾತನ ಸೊತ್ತು ದರ್ಜೆ 2ಕ್ಕೆ ಸೇರಿಸಲಾದ ಮತ್ತು 1952ರಲ್ಲಿ ರಾಷ್ಟ್ರೀಯ ಸಂಪತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಗಿಲ್ಬರ್ಟ್ ಹಿಲ್’ ಎಂಬ 66 ಮಿಲಿಯ ವರ್ಷಗಳ ಇತಿಹಾಸದ ಶಿಲಾ ಪರ್ವತವು ಇರುವುದು ಕೂಡ ಅಂಧೇರಿ ಪಶ್ಚಿಮದಲ್ಲಿ.

1960ರಿಂದ ಬಳಿಕ ಜನವಸತಿ ಪ್ರಾರಂಭವಾಗಿ ವಿಸ್ತಾರವಾದ ಈ ಗುಡ್ಡೆಯ ಸುತ್ತ ಬಹುಮಹಡಿಯ ಕಟ್ಟಡಗಳು ನಿರ್ಮಾಣಗೊಂಡವು. ಆಗ ಈ ಗುಡ್ಡದ ಭಾಗವನ್ನೇ ಅತಿಕ್ರಮಿಸಲಾಗಿತ್ತು. 2007ರಲ್ಲಿ ಪುರಾತತ್ವ ಇಲಾಖೆಯ ಸುಪರ್ದಿಯ ಬಳಿಕ ಅತಿಕ್ರಮಣ ಅಂತ್ಯಗೊಂಡಿದೆ. ಈ ಗುಡ್ಡದ ಮೇಲೆ ಒಂದು ದೇವಿಯ ದೇವವಸ್ಥಾನವನ್ನೂ ನಿರ್ಮಿಸಲಾಗಿತ್ತು. ಈಗ ಪ್ರಕೃತಿಯ ವಿಚಿತ್ರ ಸೃಷ್ಟಿಯನ್ನು ನೋಡಬಯಸುವ ಪ್ರವಾಸಿಗರಿಗೆ ಇದು ಆಕರ್ಷಣೆಯ ಪ್ರದೇಶವಾಗಿದೆ.

ಅಂಧೇರಿಯಲ್ಲಿ ಮತ್ತೊಂದು ವಿಚಿತ್ರ ಹಾಗೂ ನಿಗೂಢತೆಯನ್ನು ಹೊಂದಿರುವ ಸ್ಥಳ ‘ಬಾಪ್ಟಿಸ್ಟ್ ಚರ್ಚ್‍ಳಿ. 1579ರಲ್ಲಿ ಪೋರ್ಚುಗೀಸರ ರೋಮನ್ ಕೆಥೋಲಿಕ್ ಧರ್ಮದ ಫಾ. ಮ್ಯಾನ್ಯುವಲ್ ಗೋಮ್ಸ್ ಪಾದ್ರಿಯು ನಿರ್ಮಿಸಿದ ಈ ಚರ್ಚ್ ಪೋರ್ಚುಗೀಸರು ಮುಂಬಯಿಯ ಆಡಳಿತದಲ್ಲಿದ್ದಾಗ ಅವರ ಪ್ರಾರ್ಥನಾ ಕೇಂದ್ರವಾಗಿತ್ತು. ಪೋರ್ಚುಗೀಸರಿಗೆ ಮತಾಂತರ ಪ್ರಮುಖ ಉದ್ದೇಶವಾಗಿತ್ತು. ಅವರು ಸ್ಥಳೀಯರನ್ನು ಹಿಂಸಿಸಿ ತಮ್ಮ ಮತಕ್ಕೆ ಸೇರಿಸುತ್ತಿದ್ದರು. ಈ ಚರ್ಚ್‍ನಲ್ಲೂ ಮತಾಂತರದ ಒಂದು ಪ್ರತ್ಯೇಕ ಹಿಂಸಾ ಕೊಠಡಿಯಿತ್ತು. ಪೋರ್ಚುಗೀಸರೇ ಪ್ರಬಲವಾಗಿದ್ದ ಆ ಕಾಲದಲ್ಲಿ ಸ್ಥಳೀಯರು ಆ ಧರ್ಮಕ್ಕೆ ಭಾರೀ ಸಂಖ್ಯೆಯಲ್ಲಿ ಹಿಂಸೆ ಸಹಿಸಲಾರದೆ ಮತಾಂತರ ಹೊಂದಿದ್ದರು.

ಪೆÇೀರ್ಚುಗೀಸರು ಮುಂಬಯಿಯನ್ನು ಬ್ರಿಟಿಷರಿಗೆ ನೀಡಿದ್ದ ಸಂದರ್ಭ ಆದ ಒಡಂಬಡಿಕೆಯಂತೆ ರೋಮನ್ ಕೆಥೋಲಿಕ್ ಧರ್ಮ ಅನುಯಾಯಿಗಳ ಆಚರಣೆಗೆ ಧಕ್ಕೆ ಉಂಟಾಗಬಾರದೆಂದು ಷರತ್ತು ಆಗಿತ್ತು. ಸೈಂಟ್ ಜೋನ್ ಬಾಪ್ಟಿಸ್ಟ್ ಎಂಬ ಸಂತನ ಹೆಸರಿನಲ್ಲಿ ನಿರ್ಮಿಸಲಾದ ಈ ಚರ್ಚ್‍ನಲ್ಲಿ 1588ರಲ್ಲಿ ಸಾಮೂಹಿಕ ಧರ್ಮ ಪರಿವರ್ತನೆಯು ಭಾರೀ ವಿವಾದಕ್ಕೆ ಒಳಗಾಗಿ ವಿಶ್ವದಲ್ಲೇ ಚರ್ಚೆ ಉಂಟಾಗಿತ್ತು. ನಂತರ 1840ರಲ್ಲಿ ಬಂದ ಸಾಂಕ್ರಾಮಿಕ ಮಹಾಮಾರಿಯಿಂದಾಗಿ ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ಮಡಿದರು. ಉಳಿದವರು ವಲಸೆ ಹೋಚಿರು. ಈ ಚರ್ಚ್‍ನಲ್ಲಿ ನಡೆಯುತ್ತಿದ್ದ ಅಮಾನವೀಯ ಕೃತ್ಯದಿಂದಾಗಿ ಋಣಾತ್ಮಕ ಶಕ್ತಿಗಳ ಕಾರಣದಿಂದ ಮಹಾಮಾರಿ ಬಂತೆಂದು ಗುಮಾನಿ ನಡೆಯಿತು. ಕೆಥೋಲಿಕರು ಹೆದರಿ ಚರ್ಚ್‍ಗೆ ಹೋಗುವುದನ್ನು ನಿಲ್ಲಿಸಿದರು. ಇದರಿಂದಾಗಿ ಚಿಂತೆಗೀಡಾದ ಆಗಿನ ಫಾ| ಜಾನ್ ಲೌರೆಂಗೋ ಪಾಯಸ್ ಮರೋಲ್‍ನಲ್ಲಿ ಪ್ರತ್ಯೇಕ ಚರ್ಚ್ ನಿರ್ಮಿಸಿದರು.

ಬಾಪ್ಟಿಸ್ಟ್ ಚರ್ಚ್ ಪಾಳು ಬಿತ್ತು. ನಂತರ ಈ ಚರ್ಚ್ ಇತರ ಕೃತ್ಯಗಳಿಗೆ ಸ್ಥಾನವಾಯಿತು. ಕೆಲವೇ ವರ್ಷಗಳಲ್ಲಿ ಛಾವಣಿ ಗೋಡೆ ಕುಸಿದು ಮರಗಳು ಆವೃತ್ತವಾಯಿತು. ಈಗ ದೆವ್ವ – ಪ್ರೇತಗಳ ಜಾಗವೆಂದೇ ಜನರು ತಿಳಿದು ಅತ್ತ ಯಾರೂ ಸುಳಿಯುವುದಿಲ್ಲ. ಪ್ರೇತಗಳು ಕಾಣ ಸಿಕ್ಕಿವೆ ಎಂಬ ಗುಮಾನಿಯೂ ಇದೆ.

ದೆವ್ವಗಳ ಚರ್ಚ್ ಎಂದು ಈಗ ಕರೆಯಲ್ಪಡುವ 440 ವರ್ಷಗಳ ಹಿಂದಿನ ಪೋರ್ಚುಗೀಸರ ಈ ಐತಿಹಾಸಿಕ ಚರ್ಚ್‍ನಲ್ಲಿ ಪ್ರತೀ ವರ್ಷ ಮೇ ತಿಂಗಳ ಎರಡನೇ ರವಿವಾರದಂದು ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ. ಈ ಚರ್ಚ್‍ನ ಮಾಲಕತ್ವದ ಬಗ್ಗೆ ವಿವಾದವು ಎರಡೂ ಚರ್ಚ್‍ಗಳ ವಾರಿಸುದಾರರ ಮಧ್ಯೆ ನಡೆಯುತ್ತಿದೆ. ಎಂಐಡಿಸಿ ಆವರಣದಲ್ಲಿಯ ಈ ಚರ್ಚ್‍ನ ಗತವೈಭವ, ಅಳಿದುಳಿದ ಗೋಡೆಯಲ್ಲಿ ಬೆಳೆದ ಮರಗಳ ಬೇರುಗಳ ನಡುವೆ ಇಣುಕುತ್ತಿವೆ.

ಪೆÇೀರ್ಚುಗೀಸರು ಆಳಿದ ಕುರುಹುಗಳಾಗಿ ಅಂಧೇರಿಯ ಈ ಚರ್ಚ್, ಮಡ್ ದ್ವೀಪದಲ್ಲಿರುವ ಮತ್ತು ಮಾಹಿಂ ಕಡಲ ದಂಡೆಯಲ್ಲಿ ನಿರ್ಮಿಸಿದ ಸುಂಕವಸೂಲಿಯ ಕೋಟೆಗಳು ಈಗಲೂ ಉಳಿದಿವೆ.

ಅಂಧೇರಿಯ ಮೂಲ ನಿವಾಸಿಗಳಾದ ಕೋಲಿ, ಅಗ್ರಿ ಮತ್ತು ಭಂಡಾರಿ ಹಾಗೂ ಪಠಾರೆ ಇವರಲ್ಲಿ ಅಗ್ರಿ ಮತ್ತು ಭಂಡಾರಿಗಳು ಪೆÇೀರ್ಚುಗೀಸರ ಪ್ರಭಾವದಿಂದ ಮತಾಂತರ ಹೊಂದಿರುವರು. ಆದರೆ ಗುಂಪು ಮನೆಗಳ ವಠಾರದಲ್ಲಿ ನೆಲೆನಿಂತಿರುವ ವರ್ಸೋವದ ಕೋಲಿಗಳು ಪೋರ್ಚುಗೀಸರ ಯಾವುದೇ ದಬ್ಬಾಳಿಕೆಗೆ, ಹಿಂಸೆಗೆ ಬಗ್ಗದೆ ಇದ್ದುದರಿಂದ ಅವರು ಈಗಲೂ ಹಿಂದು ಗಳಾಗಿ ಉಳಿದಿದ್ದಾರೆ. ಅವರು ತಮ್ಮ ಗ್ರಾಮದೇವತೆ ‘ಗಾಂವ್ದೇವಿ’ ಯ ಆರಾಧಕರಾಗಿದ್ದಾರೆ. ಈ ದೇವಿಯ ಮಂದಿರದಲ್ಲಿ ಮಹಿಳೆಯರೇ ಪೂಜಾರಿಗಳಾಗಿರುವುದು ಕೂಡ ವಿಶೇಷ.

ಅಂಧೇರಿಯ ಅಂಬೋಲಿ, ಸಹಾರ, ಮಡ್ ದ್ವೀಪ ಪ್ರದೇಶದಲ್ಲಿದ್ದವರು ಮತಾಂತರ ಹೊಂದಿದ್ದಾರೆ. ಕರಾವಳಿಯ ವಸಾಯಿ ಮತ್ತು ಗೋವಾ ಪ್ರದೇಶದಲ್ಲಿ ಮತಾಂತರ ಸಾಮೂಹಿಕವಾಗಿ ನಡೆದಿತ್ತು. ಬ್ರಿಟಿಷರ ಕಾಲದಲ್ಲಿ ಅವರು ಈಸ್ಟ್ ಇಂಡಿಯಾ ಕಂಪೆನಿಯ ಪ್ರಭಾವ ಹಾಗೂ ಅದರ ಸಿಬ್ಬಂದಿಗಳಾಗಿದ್ದುದರಿಂದ ಮತಾಂತರ ಹೊಂದಿದ ಕ್ರಿಶ್ಚಿಯನ್ನರು ಈಸ್ಟ್ ಇಂಡಿಯಾ ಕ್ರಿಶ್ಚಿಯನ್‍ರೆಂದು ಕರೆಯಲ್ಪಟ್ಟರು.

ಮುಂಬಯಿಯಲ್ಲಿ ಬ್ರಿಟಿಷರಿಗೆ ಸರಿಸಮಾನವಾಗಿ ವರ್ಚಸ್ಸನ್ನು ಮತ್ತು ಶ್ರೀಮಂತಿಕೆಯನ್ನು ಪಡೆದ ಜನಾಂಗವೇ ಪಾರ್ಸಿ ಮತ್ತು ಯಹೂದಿಗಳು. ಭಾರತಕ್ಕೆ ವಲಸೆ ಬಂದಿದ್ದ ಅವರು ತಮ್ಮ ಶ್ರಮ ಹಾಗೂ ಕಾರ್ಯಶೈಲಿಯಿಂದ ಯಶಸ್ವಿಯಾಗಿದ್ದರು. ಪಾರ್ಸಿ ಸಮಾಜದ ದಾದಾಭಾಯಿ ನವರೋಜಿಯವರು ಪ್ರಥಮ ‘ಸರ್’ ಉಪಾಧಿ ಪಡೆದ ಭಾರತೀಯ ನಾಗರಿಕ. ಪ್ರಭಾವೀ ಪಾರ್ಸಿಗಳು ಮುಂಬಯಿಯ ಕೋಟೆ ಪ್ರದೇಶ ಬಿಟ್ಟರೆ ನಂತರ ಅವರು ತಮ್ಮ ವಾಸಸ್ಥಾನಕ್ಕೆ ಆಯ್ಕೆ ಮಾಡಿದ ಪ್ರದೇಶ ಹತ್ತಿರದ ಮರಿನ್ ಲೈನ್ಸ್, ಚರ್ನಿರೋಡ್, ಗ್ರಾಂಟ್ ರೋಡ್ ಮತ್ತು ಮುಂಬಯಿ ಸೆಂಟ್ರಲ್. ಆದರೆ ನಂತರ ಅವರಿಗೆ ನೆಮ್ಮದಿ ನೀಡಿದ ಉಪನಗರವೇ ಅಂಧೇರಿ. 1920ರ ಮೊದಲೇ ಅವರು ತಮ್ಮ ಕಾಲನಿಯನ್ನು ಗಿಲ್ಬರ್ಟ್ ಹಿಲ್ ಹತ್ತಿರದ ಗುಡ್ಡದಲ್ಲಿ ಕಟ್ಟಿಸಿದ್ದರು.

ತಮ್ಮ ಆರಾಧನೆಯ ‘ಆಗ್ಯಾರ್’ ಕೂಡ ನಿರ್ಮಿಸಿದ್ದಾರೆ. ಅಂಧೇರಿಯಲ್ಲಿ ಹೊಟೇಲು, ಬೇಕರಿ ಅಂಗಡಿಗಳ ಉದ್ದಿಮೆ ಸ್ಥಾಪಿಸಿದ್ದಾರೆ. ಅಂಧೇರಿ ರೈಲು ನಿಲ್ದಾಣ ಪಶ್ಚಿಮದ ಸಾರ್ವಜನಿಕರ ಆರೋಗ್ಯಕ್ಕಾಗಿ ವಾಡಿಯಾ ಹೆಸರಲ್ಲಿ ಆಸ್ಪತ್ರೆ ಹಾಗೂ ಗಜ್ದಾರ್ ಸಭಾಗೃಹವನ್ನು ಒದಗಿಸಿಕೊಟ್ಟಿದ್ದಾರೆ. ಆದರೆ ಈಗ ಅವರ ಸಂಖ್ಯೆಯು ಗಣನೀಯವಾಗಿ ಕುಸಿದಿದ್ದರಿಂದ ಅವರ ಹೊಟೇಲುಗಳು ಈಗ ‘ಮೆಕ್ ಡೊನಾಲ್ಡ್’ ಆಗಿ ಪರಿವರ್ತನೆಗೊಂಡಿದೆ. ಪಾರ್ಸಿಗಳ ಪುಡ್ಡಿಂಗ್ ಬಗೆಬಗೆಯ ಕೇಕ್‍ಗಳು, ಮಾಂಸಾಹಾರಿ ಅಡುಗೆಗಳು ಇಂದು ಸಿಗದು. ‘ಮೆರ್ವಾನ್ಸ್ ಕೇಕ್’ ಅಂಗಡಿ ಮತ್ತು ಔರಾಬೇಕರಿ ಮಾತ್ರ ಈಗಲೂ ಖ್ಯಾತಿಯಿಂದ ಉಳಿದುಕೊಂಡಿದೆ.

ಕ್ರಿ. ಪೂ. 4ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಈಗಲೂ ತನ್ನ ಸೌಂದರ್ಯವನ್ನು ಕಾಪಾಡಿಕೊಂಡಿರುವ ಮಹಾಕಾಳಿ ಕೇವ್ಸ್ ಅಂಧೇರಿ ಪೂರ್ವದ ಕೊಂಡಿವಿಟಾ ಗುಡ್ಡದಲ್ಲಿದೆ. ಬೌದ್ಧ ಭಿಕ್ಷುಗಳ ವಿಹಾರ ಧಾಮವಾಗಿದ್ದ ಇಲ್ಲಿ 9 ಗುಹೆಗಳಿವೆ. (ಅಶೋಕ ಸುವರ್ಣರ ‘ಮಹಾಕಾಳಿ ಕೇವ್ಸ್‍ನ ಮಹಾನುಭಾವ’ ಓದಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು). ದಟ್ಟ ಅಡವಿಯಲ್ಲಿದ್ದ ಈ ಗುಹೆಯು ಬೌದ್ಧ ಧರ್ಮದ ಅವನತಿಯಿಂದಾಗಿ ಜನ ಸಂಪರ್ಕದಿಂದ ಅನೇಕ ಶತಮಾನಗಳ ಕಾಲ ಕಣ್ಮರೆಯಾಗಿತ್ತು. ಈ ಗುಹೆಗಳು 18ನೇ ಶತಮಾನದಲ್ಲಿ ದಕ್ಷಿಣ ಕನ್ನಡದಿಂದ ದೇಶಾಂತರ ತಿರುಗಿ ಅಲ್ಲಿ ತಪಸ್ವಿಯಾಗಿ ನೆಲೆನಿಂತ ಮಹಾಕಾಳಿ ದೇವಿ ಆರಾಧಕರಾದ ಮುದರ ಯಾನೆ ಮುಕ್ತಾನಂದ ಸ್ವಾಮೀಜಿಯವರ ಖ್ಯಾತಿಯಿಂದಾಗಿ ಈ ಗುಹೆಯು ‘ಮಹಾಕಾಳಿ ಕೇವ್ಸ್’ ಎಂಬ ಹೆಸರಿನಿಂದ ಬೆಳಕಿಗೆ ಬಂತು. ಈ ಗುಹೆಯು ಈಗ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದೆ. ಸ್ವಾಮಿಯು ನಿರ್ಮಿಸಿದ ಮಹಾಕಾಳಿ ಮಂದಿರವು ಪಕ್ಕದಲ್ಲಿದೆ.

‘ಮಹಾಕಾಳಿ ಕೇವ್ಸ್’

20ನೇ ಶತಮಾನದ ಪ್ರಾರಂಭದಲ್ಲಿ ಜೋಪಡಿಗಳ ಅತಿಕ್ರಮಣವನ್ನು ತಡೆಯಲು ಈ ಗುಹೆಯ ಸುತ್ತ ಪ್ರಾಂಗಣ ನಿರ್ಮಿಸಲಾಗಿದೆ. ಅಂತಹ ಶತ ಶತಮಾನಗಳ ಗುಹೆಗಳ ಸಮೂಹವನ್ನು ಹೊಂದಿದೆ. ‘ಅಂಧೇರಿ’
ಶಿಕ್ಷಣಕ್ಕೆ ಅತ್ಯಂತ ಖ್ಯಾತಿಯನ್ನು ಪಡೆದ ನಗರವೇ ಅಂಧೇರಿ. ಕೆ. ಎಂ. ಮುನ್ಶಿ ಅವರು ಸ್ಥಾಪಿಸಿದ್ದ ಭಾರತೀಯ ವಿದ್ಯಾ ಭವನ ಈ ರಾಷ್ಟ್ರೀಯ ವಿದ್ಯಾಸಂಸ್ಥೆಯು ಇಲ್ಲಿ ಬಹುದೊಡ್ಡ ವಿದ್ಯಾಸಂಕೀರ್ಣವನ್ನು 1996ರಲ್ಲಿ ಸ್ಥಾಪಿಸಿದೆ.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಭಾಗಗಳು ಇಲ್ಲಿವೆ. ವಿಶ್ವವಿದ್ಯಾಲಯದ ಮಟ್ಟದಲ್ಲಿರುವ ಈ ವಿದ್ಯಾಲಯದಲ್ಲಿ ಸುಮಾರು 9000 ಮಂದಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದಾರಿಗೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಅಲ್ಲದೆ ಅಂಧೇರಿಯಲ್ಲಿ ಎಚ್. ಎಸ್. ಕಾಲೇಜು, ಎಂ.ಜೆ. ಕಾಲೇಜು ಸಹಿತ ಹತ್ತು ಶ್ರೇಷ್ಠ ದರ್ಜೆಯ ಮಹಾ ವಿದ್ಯಾಲಯಗಳಿವೆ. ಇಲ್ಲಿಯ ಬಂಟರ ಸಂಘ ಮತ್ತು ಮೊಗವೀರ ವ್ಯವಸಾಪ್ಥಕ ಮಂಡಳಿಯ ವಿದ್ಯಾ ಸಂಕೀರ್ಣಗಳು ಕ್ರಮವಾಗಿ ಅಂಧೇರಿ (ಪೊವೈ) ಪೂರ್ವ ಮತ್ತು ಪಶ್ಚಿಮದಲ್ಲಿದೆ.

ಕೇಂದ್ರ ಸರಕಾರದ ಮೀನುಗಾರಿಕಾ ವಿಶ್ವವಿದ್ಯಾಲಯ (ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಫಿಶರೀಸ್ ಎಜುಕೇಶನ್ Deemed University) ಅಂಧೇರಿಯ ವರ್ಸೋವಾದಲ್ಲಿದೆ. ಉತ್ತರ ಮತ್ತು ದಕ್ಷಿಣದ ಕೆಲವು ರಾಜ್ಯಗಳ ಮೀನುಗಾರಿಕಾ ಕಾಲೇಜುಗಳಿಗೆ ಈ ವಿಶ್ವವಿದ್ಯಾಲಯವು ಪ್ರಮಾಣ ಪತ್ರ ನೀಡುವ ಮಾನ್ಯತೆ ಪಡೆದಿದೆ.

ಅಂಧೇರಿಯಲ್ಲಿ ಅನೇಕ ಪುರಾತನ ಮತ್ತು ಆಧುನಿಕ ದೇವಾಲಯಗಳಿವೆ. ಶ್ರೀಕೃಷ್ಣನ ಪರಮ ಭಕ್ತರಾದ ಶ್ರೀ ಸ್ವಾಮಿ ಪ್ರಭು ಪಾದರು 1966ರಲ್ಲಿ ನ್ಯೂಯಾರ್ಕ್‍ನಲ್ಲಿ ಸ್ಥಾಪಿಸಿದ್ದ ಇಸ್ಕಾನ್ ಸಂಸ್ಥೆಯು 1978ರಲ್ಲಿ ಅಂಧೇರಿಯ ಸಮೀಪ ಬೃಹತ್ ಶಿಲಾಮಯ ಕಟ್ಟಡಗಳ ಸಮುಚ್ಚಯದ ಶ್ರೀ ಕೃಷ್ಣ ಮಂದಿರವನ್ನು ನಿರ್ಮಿಸಿದೆ. ಅತ್ಯಂತ ಸುಂದರ ಶ್ವೇತವರ್ಣ ಶಿಲೆಯ ಈ ದೇವಸ್ಥಾನವು ವಿಶ್ವವಿಖ್ಯಾತಿ ಹೊಂದಿದೆ.

ಪಶ್ಚಿಮ ಕರಾವಳಿಯಲ್ಲಿ ಶೋಭಿಸುತ್ತಿರುವ ಹರೇ ಕೃಷ್ಣ ಪಂಥದ ಇದು ಏಕೈಕ ಮಂದಿರವಾಗಿದೆ. ಮೀರಾರೋಡ್‍ನಲ್ಲಿಯೂ ಹರೇ ಕೃಷ್ಣ ಮಂದಿರವಿದ್ದರೂ ಅದು ಇಸ್ಕಾನ್‍ನ ಆಡಳಿತಕ್ಕೆ ಒಳಪಟ್ಟಿಲ್ಲ ಎಂಬ ವಿಷಯವೂ ಇಲ್ಲಿ ಉಲ್ಲೇಖನೀಯ.

ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಅಧಮಾರು ಮಠದ ಶಾಖೆಯು ಇಲ್ಲಿ ಎಸ್. ವಿ. ರೋಡ್‍ನಲ್ಲಿದೆ. ಇದು ಪುರಾಣ ತತ್ವ, ಸಿದ್ಧಾಂತ, ವೇದ, ಅಧ್ಯಯನ, ಯಜ್ಞ, ಯಾಗ ಹಾಗೂ ಪ್ರವಚನದ ಕೇಂದ್ರವಾಗಿ ಹೆಸರು ಗಳಿಸಿದೆ. ವಿಶೇಷವಾಗಿ ಶಿಕ್ಷಣಕ್ಕೆ ಮಹತ್ವ ಕೊಡುವ ಅಧಮಾರು ಮಠವು ದಹಿಸರ್‍ನಲ್ಲಿ ವಿದ್ಯಾಸಂಕುಲ ಹೊಂದಿದೆ. ತೆಂಗು, ಕಂಗು ಮರಗಿಡಗಳ ಸುಂದರ ವಠಾರದಲ್ಲಿ ಈ ಮಠವು ಧರ್ಮ ಕಾರ್ಯ ನಿಮಿತ್ತ ಮುಂಬಯಿಗೆ ಭೇಟಿ ನೀಡುವ ಅನೇಕ ಮಠಗಳ ಮಠಾಧಿಪತಿಗಳಿಗೆ ವಿಶ್ರಾಂತಿ ಧಾಮವೂ ಆಗಿದೆ. ಹಿಂದೂ ಧಾರ್ಮಿಕ ವಿಧಿ ವಿಧಾನಗಳು ಇಲ್ಲಿ ನಿರಂತರ ನಡೆಯುತ್ತವೆ.

1878ರಲ್ಲಿ ಸ್ಥಾಪನೆಯಾದ ಮುಂಬಯಿ ಕನ್ನಡಿಗರ ಪ್ರಥಮ ಧಾರ್ಮಿಕ ಶ್ರೀಮದ್ಭಾರತ ಮಂಡಳಿಯು ತನ್ನ ಕಚೇರಿಯನ್ನು ಕೋಟೆ ಪ್ರದೇಶದಿಂದ 1999ರಲ್ಲಿ ಅಂಧೇರಿಗೆ ಸ್ಥಳಾಂತರಿಸಿದ ಬಳಿಕ ಶ್ರೀ ಲಕ್ಷ್ಮೀನಾರಾಯಣ ಮಂದಿರವನ್ನು ಅಂಧೇರಿ ವೀರದೇಸಾಯಿ ರಸ್ತೆಯ ಸಮೀಪ ತನ್ನದೇ ಜಾಗದಲ್ಲಿ 2002ರಲ್ಲಿ ನಿರ್ಮಿಸಿದೆ. ವಾಡಿಕೆಯಂತೆ ಪೌರಾಣಿಕ ಗ್ರಂಥ ಪ್ರವಚನ ಗಮಕ ಪದ್ಧತಿಯಲ್ಲಿ ಇಲ್ಲಿ ನಡೆಯುತ್ತಿದೆ. 141 ವರ್ಷಗಳ ಈ ಧಾರ್ಮಿಕ ಪರಂಪರೆಯನ್ನು ಉಲ್ಲೇಖಿಸದೆ ಇರಲಾಗದು.

ಹಾಗೆಯೇ ಅಂಧೇರಿಯ ಪೂರ್ವದ ಮರೋಲ್ ಮಿಲಿಟರಿ ರಸ್ತೆಯಲ್ಲಿ ಶ್ರೀರಾಮ ಕೃಷ್ಣ ಮಂದಿರ, ಬಾಪ್ಟಿಸ್ಟ್‍ವಾಡಿಯಲ್ಲಿ ಚಿತ್ತ ಜಗದಂಬಾ ಮಂದಿರ, ಜೆರಿಮೆರಿಯಲ್ಲಿ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಅಂಧೇರಿಗೆ ಖ್ಯಾತಿ ತಂದಿದೆ. ಕರ್ನಾಟಕ ಪರಂಪರೆಯ ಸೊಬಗು, ಪೂಜಾ ಕ್ರಮಗಳನ್ನು ಸ್ಥಳೀಯರಿಗೆ ಪರಿಚಯಿಸಿ ಸರ್ವರ ಶ್ರದ್ಧಾ ಕೇಂದ್ರವಾಗಿ ಬೆಳೆದಿವೆ. ಅಂತೆಯೇ ಶ್ರೀ ಮಹಾಲಕ್ಷ್ಮೀ ಕಾಲನಿಯ ಭಜನಾ ಮಂದಿರ ಸಹಿತ ಕನ್ನಡಿಗರ ಅನೇಕ ಭಜನಾ ಮಂಡಳಿಗಳು ಅಂಧೇರಿಯಲ್ಲಿ ದಾಸ ಪರಂಪರೆಯೊಡನೆ ಧಾರ್ಮಿಕ ಕಾರ್ಯದಲ್ಲಿ ತೊಡಗಿವೆ.

ಡಿ. ಎನ್. ನಗರದಲ್ಲಿರುವ ಶ್ರೀ ಸಿತ್ಲಾದೇವಿ ಮಂದಿರ ಮತ್ತು ಜೆ. ಪಿ. ರೋಡ್‍ನಲ್ಲಿರುವ ಶ್ರೀರಾಮ ಮಂದಿರ ಅತ್ಯಂತ ಪುರಾತನವಾದುದು. ಶ್ರೀ ರಾಮಮಂದಿರವು ಒಂದು ಕಾಲದಲ್ಲಿ ತುಳು – ಕನ್ನಡಿಗರ ಶ್ರದ್ಧಾಕೇಂದ್ರವಾದ ಪ್ರಾರ್ಥನೆಯ ಪೂಜಾ ಸ್ಥಳವಾಗಿತ್ತು. ವರ್ಸೋವದಲ್ಲಿರುವ ಗಾಂವ್ದೇವಿ ಮಂದಿರ, ಮಡ್ ದ್ವೀಪದಲ್ಲಿರುವ ಶ್ರೀ ಈಶ್ವರ ಮಂದಿರವೂ ಹಳೆಯದು. ಅಂಧೇರಿ ಪೂರ್ವದಲ್ಲಿ ಶ್ರೀ ಇಚ್ಫಾಗಣಪತಿಯ ಪಠಾರೆ ಪ್ರಭು ಮನೆತನಕ್ಕೆ ಸೇರಿದ ಮಂದಿರವೂ ಭಕ್ತಾದಿಗಳ ಶ್ರದ್ಧಾಕೇಂದ್ರಗಳಾಗಿವೆ.

ಸಿಖ್ಖರಿಗೆ ಅಂಧೇರಿಯು ಅತ್ಯಂತ ಪ್ರೀತಿಯ ನಗರವೆನ್ನಬಹುದು. ಅಂಧೇರಿ ಪೂರ್ವದಲ್ಲಿ ಎರಡು ಸಿಖ್ ಗುರುದ್ವಾರಗಳಿವೆ. ಚಕಾಲದಲ್ಲಿರುವ ಸಿಖ್ಖರ ಪಂಜಾಬ್ ಕಾಲನಿಯ ಮನೆಗಳು ಪಂಜಾಬ್ ರಾಜ್ಯದಲ್ಲಿರುವ ಮನೆಗಳಂತೆ ನಿರ್ಮಾಣವಾಗಿವೆ. ಅಂಧೇರಿ ಪಶ್ಚಿಮದಲ್ಲಿ ಒಂದು ಗುರುದ್ವಾರವಿದೆ. ಇಲ್ಲಿ ನಿರಂತರ ಅನ್ನದಾನ, ಗ್ರಂಥ ಆರಾಧನೆ, ಪ್ರವಚನ, ಸಿಖ್ಖ್ ಸಂಪ್ರದಾಯದ ಉತ್ಸವಗಳು ನಡೆಯುತ್ತಿವೆ. ಅಂಧೇರಿಯಲ್ಲಿ ಜೈನ ಸಮುದಾಯವು ಭಾರೀ ಸಂಖ್ಯೆಯಲ್ಲಿದೆ. ವ್ಯಾಪಾರದ ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವ ಇವರ ಅನೇಕ ಜೈನಮಂದಿರಗಳು, ಆಶ್ರಯ ಧಾಮಗಳು ಸುಮಾರು ಇಪ್ಪತ್ತಕ್ಕಿಂತಲೂ ಹೆಚ್ಚಿವೆ.
ಮಹಾರಾಷ್ಟ್ರ ರಾಜ್ಯದಲ್ಲೇ ಅತ್ಯಂತ ದೊಡ್ಡದೆಂದು ಪರಿಗಣಿಸಲ್ಪಟ್ಟಿರುವ ಅಂತಾರಾಜ್ಯ ಕ್ರೀಡಾ ಸ್ಪರ್ಧೆ ನಡೆಯಲು ಅನುಕೂಲವಾದ ಬೃಹತ್ ಕ್ರೀಡಾ ಸಂಕೀರ್ಣವು ಅಂಧೇರಿ ಪಶ್ಚಿಮಚಿಲ್ಲಿದೆ. ಈ ಶಹಾಜೆ ರಾಜೆ ಕ್ರೀಡಾ ಸಂಕೀರ್ಣವು ಮಹಾನಗರಪಾಲಿಕೆಯ ಆಡಳಿತಚಿಲ್ಲಿದೆ. ಈಜುಕೊಳಗಳ ಸಹಿತ ಕ್ರಿಕೆಟ್ ಮೈದಾನ ಹಾಗೂ ಒಳಾಂಗಣ ಕ್ರೀಡೆಗಳ ವಿಭಾಗ ಗಳನ್ನು ಹೊಂದಿದೆ.

118 ವರ್ಷಗಳ ಇತಿಹಾಸವಿರುವ ‘ಮೊಗವೀರ ವ್ಯವಸ್ಥಾಪಕ ಮಂಡಳಿ’ಯ ಕಚೇರಿಯು 2005ರಲ್ಲಿ ಅಂಧೇರಿಯ ತನ್ನ ಸ್ವಂತ ಜಾಗಕ್ಕೆ ಸ್ಥಳಾಂತರ ಹೊಂದಿದೆ. ಅಲ್ಲಿ ಬೃಹತ್ ಶಿಕ್ಷಣ ಸಂಕುಲವಿದೆ. ಇಲ್ಲಿಯೇ ‘ಮೊಗವೀರ ಮಾಸಿಕ’ ವನ್ನೂ 80 ವರ್ಷಗಳಿಂದ ಪ್ರಕಟಿಸುತ್ತಿದೆ. ಇಲ್ಲಿಯೇ 1963ರಲ್ಲಿ ‘ಶ್ರೀ ಮಹಾಲಕ್ಷ್ಮೀ ಹೌಸಿಂಗ್ ಸೊಸೈಟಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಎಂಟು ಕಟ್ಟಡಗಳ ಕಾಲನಿಯನ್ನು ನಿರ್ಮಿಸಿದೆ. ಮೊಗವೀರ ಭವನ ಆಧುನಿಕ ಸಭಾಗೃಹ ಹೊಂದಿದೆ. ಕನ್ನಡಿಗರ ಹಿರಿಯ ಸಂಸ್ಥೆಗಳಾದ ಸಾಫಲ್ಯ ಸೇವಾ ಸಂಘ ಮತ್ತು ಒಕ್ಕಲಿಗರ ಸಂಘವು ಅಂಧೇರಿ ಪೂರ್ವದಲ್ಲಿ ತನ್ನ ಕಚೇರಿಯನ್ನು ಹೊಂದಿದೆ. ಬಿಲ್ಲವರ ಎಸೋಸಿಯೇಶನ್ ಮತ್ತು ಬಂಟರ ಸಂಘದ ಸ್ಥಳೀಯ ಕಚೇರಿಗಳು ಇಲ್ಲಿ ಕ್ರಿಯಾಶೀಲವಾಗಿವೆ. ಭಾರತ್ ಕೋ. ಆಪರೇಟಿವ್ ಬ್ಯಾಂಕ್ ಮತ್ತು ಮೊಗವೀರ ಬ್ಯಾಂಕ್‍ಗಳ ಶಾಖೆಗಳು ಸೇವಾನಿರತವಾಗಿವೆ. ವೀರಶೈವ ಬ್ಯಾಂಕ್ ಹಾಗೂ ಕನ್ನಡಿಗ ಗೌಡ ಸಮಾಜದ ಸಂಘಟನೆ ಮತ್ತು ಶ್ರೀ ಲಕ್ಷ್ಮೀ ಕ್ರೆಡಿಟ್ ಸೊಸೈಟಿ ಇಲ್ಲಿದೆ.

ಕನ್ನಡಿಗ ರಾಜಕೀಯ ಧುರೀಣ, ಬಹುಕಾಲ ಅಂಧೇರಿ ಪೂರ್ವದಲ್ಲಿ ಶಾಸಕರಾಗಿದ್ದ ಮಹಾರಾಷ್ಟ್ರ ರಾಜ್ಯ ಸರಕಾರದ ಸಚಿವರಾಗಿ ಕರ್ನಾಟಕಕ್ಕೆ ಹೆಮ್ಮೆಯನ್ನು ತಂದ ಸುರೇಶ್ ಶೆಟ್ಟಿಯವರ ಕಾರ್ಯಕ್ಷೇತ್ರವು ಅಂಧೇರಿಯಲ್ಲೇ ಪ್ರಾರಂಭವಾದುದು. ವರ್ಸೋವ, ಸೀಫುಡ್ ಫೆಸ್ಟಿವಲ್, ಕ್ರಿಶ್ಚಿಯನ್ನರ ಕಾರ್ನಿವಲ್, ಮುಸ್ಲಿಮರ ಮೊಹರಂ, ಗಣೇಶ ವಿಸರ್ಜನೆ ಮೊದಲಾದ ಸಂಭ್ರಮಗಳ ಮೆರವಣಿಗೆಯೂ ಇಲ್ಲಿ ಶಾಂತವಾಗಿ ವೈಭವಯುತವಾಗಿ ನಿರಂತರ ಜರಗುತ್ತದೆ. ಸೆವೆನ್ ಹಿಲ್ಸ್, ಬೆಲ್ಲೆವಿ, ಕೋಕಿಲಾಬೆನ್ ಮೊದಲಾದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳೂ ಇಲ್ಲಿವೆ. ಹೊಟೇಲು ಉದ್ಯಮವು ಕನ್ನಡಿಗರ ಪಾರಮ್ಯದಲ್ಲಿದ್ದು, ಅನೇಕ ಸ್ಟಾರ್ ಹೊಟೇಲ್ ತುಳುವರ ಆಡಳಿತದಲ್ಲಿವೆ ಎಂಬುದು ಅಭಿಮಾನದ ಸಂಗತಿಯಾಗಿದೆ.

ವಾಣಿಜ್ಯ ಸಂಕೀರ್ಣಚಿಲ್ಲಿ ಆಹಾರ ಸೇವಾ ಉದ್ಯೋಗ ಕ್ಯಾಂಟೀನ್‍ಗಳನ್ನು ಕೂಡ ಕನ್ನಡಿಗರು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅನೇಕಾನೇಕ ವಿಶೇಷತೆಗಳಿಂದ ಪ್ರಾಚೀನ ಮತ್ತು ಆಧುನಿಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಪ್ರಶಾಂತ ವಲಯವೆಂದೇ ಗುರುತಿಸಲ್ಪಡುವ ಅಂಧೇರಿಯ ಪೂರ್ವದಲ್ಲಿ ಪರ್ವತ ಶ್ರೇಣಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಹೊಂದಿರುವ ಸುಂದರ ನಗರ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಗಗನ ಚುಂಬಿ ಕಟ್ಟಡ ನಿರ್ಮಾಣಕ್ಕೆ ಸರಕಾರದ ನಿಯಂತ್ರಣ ಇರುವುದರಿಂದ 18 ಮಹಡಿಯಷ್ಟು ಕಟ್ಟಡಕ್ಕೆ ಮಾತ್ರ ಸಮ್ಮತಿ. ಒಂದು ಕಾಲದಲ್ಲಿ ಕೊಂಡಿವಿಟಾ ಬೆಟ್ಟದಲ್ಲಿ ಅಥವಾ ಗಿಲ್ಬರ್ಟ್ ಹಿಲ್‍ನಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದಿತ್ತು. ಆದರೆ ಈಗ ಕಾಂಕ್ರಿಟ್ ಕಾಡುಗಳೇ ಎದ್ದು ನಿಂತಿರುವುದರಿಂದ ಈ ಸೌಭಾಗ್ಯವು ಮಾಯವಾಗಿದೆ. ಆದರೆ ಸದಾ ಸಂಭ್ರಮ, ಆಚರಣೆ, ವಿವಿಧತೆಯ ದುಡಿಮೆಯ ಅಂಧೇರಿ ನಗರ ನನಗೆ ಮೆಚ್ಚುಗೆಯ ಆಗರ.