ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಡೆಂಗೋಡ್ಲು ಕಾವ್ಯ ಪ್ರಶಸ್ತಿ – ೨೦೨೧

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ನೀಡುವ ಈ ಸಲದ ( ೨೦೨೧ನೇ ಸಾಲಿನ ) ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಲೇಖಕರಾದ​ ಶ್ರೀ ಡಿ. ಎಸ್. ರಾಮಸ್ವಾಮಿ ಆಯ್ಕೆಯಾಗಿದ್ದಾರೆ. ಡಿ. ಎಸ್. ರಾಮಸ್ವಾಮಿ ಅವರ ಮೀನು ಬೇಟೆಗೆ ನಿಂತ ದೋಣಿ ಸಾಲು ಎನ್ನುವ​ ಅಪ್ರಕಟಿತ ಕವನ ಸಂಕಲನವನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಮೂಲತಃ ತರೀಕೆರೆಯವರಾದ ಶ್ರೀಯುತರು ವೃತ್ತಿಯಿಂದ ಭಾರತೀಯ ಜೀವ ವಿಮಾ ನಿಗಮದ ಅರಸೀಕೆರೆ ಶಾಖೆಯ ಆಡಳಿತಾಧಿಕಾರಿ. ಅರಸೀಕೆರೆ ತಾಲ್ಲೂಕು ೫ನೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪಡೆದವರು.  ಡಿ ಸಿ ಅನಂತ ಸ್ವಾಮಿ ಪ್ರಶಸ್ತಿ, ಪ್ರೊ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ವಿಭಾ ಕಾವ್ಯಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳಿಗೆ ಶ್ರೀಯುತರು ಈಗಾಗಲೇ ಭಾಜನರಾಗಿದ್ದಾರೆ. ಮರೆತ ಮಾತು, ಉಳಿದ ಪ್ರತಿಮೆಗಳು, ತೆರೆದರಷ್ಟೇ ಬಾಗಿಲು, ಅನುಸಂಧಾನ, ಮನೆಯಿಂದ ಮನೆಗೆ ಇತ್ಯಾದಿಗಳು ಇವರ ಕೃತಿಗಳು.