ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೋಲ್ಕೊಂಡ : ದನಿಹಬ್ಬ – ಇದು ಹೈದರಾಬಾದ್ ನಿವಾಸಿಗಳಾದಾಗ್ಯೂ, ಕನ್ನಡ ಸಾಹಿತ್ಯ ಓದುವ,ಬರೆಯುವ,ಪೊರೆಯುವ ಪರಂಪರೆಯನ್ನು ಮುಂದುವರೆಸುವ ಮೂಲಕ ತಾಯ್ನುಡಿ,ತಾಯ್ನಾಡಿಗೆ ಸತತ ಸೇವೆ ಸಲ್ಲಿಸುತ್ತಿರುವ ಸಹೃದಯಿ,ಸಾಹಿತ್ಯ ಪ್ರೇಮಿ ಕನ್ನಡಿಗರ, ಸ್ವರಚಿತ ಕವಿತಾ ವಾಚನದ ವಿಶೇಷ ಸಂಚಿಕೆ.

ಸೀಮೆಗಳನ್ನು ಮೀರಿದ, ಯಾವತ್ತೂ ಕನ್ನಡದ ಸಾಹಿತ್ಯ ಲೋಕದ ಕೊಹಿನೂರ್ ಶ್ರೀ ಕೆ ವಿ. ತಿರುಮಲೇಶ್ ಅವರ ಸ್ಪೂರ್ತಿ, ಬಾಗಲಿಂಗಂಪಲ್ಲಿಯ ಐತಿಹಾಸಿಕ ಕರ್ನಾಟಕ ಸಾಹಿತ್ಯ ಮಂದಿರದ ಆಶ್ರಯದಲ್ಲಿ, ಕಸ್ತೂರಿ ಕಾವ್ಯ ಧಾರೆ ಸದಸ್ಯರುಗಳ ಅಪರಿಮಿತ ಅದಮ್ಯ ಪ್ರೋತ್ಸಾಹ,ಉತ್ಸಾಹಗಳಿಂದ ಬರೆವ ಹಿರಿ, ಕಿರಿ ಬರಹಗಾರರು ಇಲ್ಲಿ ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿದ್ದಾರೆ.

ಒಟ್ಟಿನಲ್ಲಿ, ಗೊಲ್ಕೊಂಡದ ದುರ್ಗಮ ಕೋಟೆಯಲ್ಲಿ ಅವಿತ ಕವಿತೆಗಳನ್ನು ನಿಮ್ಮ ಮುಂದೆ ಇರಿಸಿದ್ದೇವೆ. ನಸುಕು.ಕಾಮ್ ಓದುಗರ ಪ್ರೋತ್ಸಾಹ, ಹೈದರಾಬಾದ್ ಲೇಖಕರ ಮೇಲೆ ಸದಾ ಇರಲಿ ಎಂದು ಆಶಿಸುತ್ತಾ, ಈ ಸಂಚಿಕೆಗೆ ಪ್ರತ್ಯಕ್ಷ,ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಹೃದಯ ಪೂರ್ವಕ ಧನ್ಯವಾದಗಳನ್ನು ವ್ಯಕ್ತಪಡಿಸುವ ನಿಮ್ಮ ನಸುಕು.ಕಾಮ್.

ಸಂಚಿಕೆ ಆರಂಭದ ಮೊದಲಿಗೆ ಶ್ರೀ ಕೆ ವಿ ತಿರುಮಲೇಶ್ ಅವರಿಗೆ ವಂದಿಸುತ್ತಾ ಅವರ ಕವಿತೆಗಳು ಇಲ್ಲಿವೆ. ಶುಭ ಹಾರೈಕೆಗಳೊಂದಿಗೆ…!

ಶ್ರೀ ಗೋನವಾರ ಕಿಶನ್ ರಾವ್ – ಮಾತು

ಶ್ರೀ ಗೋನವಾರ ಕಿಶನ್ ರಾವ್ ಅವರಿಂದ ಪ್ರಾಸ್ತಾವಿಕ ಮಾತು

ಗೋಲ್ಕೊಂಡ : ದನಿಹಬ್ಬ

ನಸುಕು.ಕಾಮ್ ವಿಶೇಷ ಸಂಚಿಕೆಗೆ ಸ್ವಾಗತ

ಶ್ರೀ ಗೋನವಾರ ಕಿಶನ್ ರಾವ್ – ಕವಿತೆ : ಹೇಗೆ

ಬಳುವಳಿ: ಕವಿತೆ: ಶ್ರೀ ಪ್ರಹ್ಲಾದ್ ಜೋಷಿ

ಕುಮಾರವ್ಯಾಸನ ಪಂಚೆ: ಕವಿತೆ ಮತ್ತು ವಾಚನ ಶ್ರೀ ಪ್ರಹ್ಲಾದ್ ಜೋಷಿ

ಸುಭಾಷಿತ ತಾತ್ಪರ್ಯ : ಶ್ರೀಮತಿ ತಾರಾಮತಿ ಕುಲಕರ್ಣಿ

ಶ್ರೀಮತಿ ತಾರಾಮತಿ ಕುಲಕರ್ಣಿ: ಸುಭಾಷಿತದ ತಾತ್ಪರ್ಯ

ಅಬಾಬಿ ಕಾವ್ಯ : ಶ್ರೀ ಡಿ ಬಿ ರಾಘವೇಂದ್ರರಾವ್

ಗಾಯ ಮತ್ತು ತಳಿರು ಮೆದ್ದ ಕೋಗಿಲೆ ಕವಿತೆಗಳು :ಶ್ರೀ ರಮೇಶ ಬಾಬು

ಬೆಳಕಿನೊಡೆಯನ ಪ್ರೇಮಗೀತೆ: ಕವಿತೆ: ಡಾ.ಮಹಾದೇವ ಕಾನತ್ತಿಲ

ಸಿಟ್ಟು ಮಾಡತಿರ್ತಿ ಯಾಕ ಸುಮ್ ಸುಮ್ನ…: ಹಾಡು:ಶ್ರೀಮತಿ ವಿಜಯಲಕ್ಷ್ಮೀ ಬಸ್ವಾ

ನೀರಿನಲ್ಲಿ ಬಿಡಿಸಿದ ಚಿತ್ರ: ಕವಿತೆ: ಶ್ರೀಮತಿ ಮೀರಾ ಜೋಶಿ

ನೂರೆಂಟು ಕನಸುಗಳು : ಕವಿತೆ : ಶ್ರೀಮತಿ ಉಷಾ ಕೆ.ಆರ್.

ನಂಜಾಗದಿರು ಉಸಿರು ನಿಲ್ಲುವ ಮೊದಲು: ಕವಿತೆ: ಶ್ರೀ ಶಶಿಧರ್ ಕೃಷ್ಣ

ಪೇಪರ್ ಕಪ್ಪು ಚಹಾ: ಕವಿತೆ :ಶ್ರೀಮತಿ ವಿಜಯಲಕ್ಷ್ಮಿ ಬಸ್ವಾ

ಹರಟೆ ಹನುಮಣ್ಣ: ಶ್ರೀ ಸಂಪತ್ ಸುಳಿಭಾವಿ

ನಸುಕು.ಕಾಮ್: ಕವಿತೆ ಶ್ರೀಮತಿ ಮೀರಾ ಜೋಶಿ

ಬದುಕುವ ಕಲೆ: ಕವಿತೆ ಶ್ರೀಮತಿ ವಿಜಯಲಕ್ಷ್ಮಿ ಬಸ್ವಾ

ಪದವೊಂದ ಹಾಡ್ತೀನಿ : ಕವಿತೆ: ಶ್ರೀ ಪ್ರಹ್ಲಾದ ಜೋಷಿ

ಹೊತ್ತು ಹೊತ್ತು ಹೊತ್ತಗೆ : ಕವಿತೆ : ಡಾ.ಮಹಾದೇವ ಕಾನತ್ತಿಲ

ನನ್ನ ಮನದನ್ನೆ: ಕವಿತೆ: ಶ್ರೀ ಡಿ ಬಿ. ರಾಘವೇಂದ್ರರಾವ್

ಕಸ್ತೂರಿ ಕಾವ್ಯ ಧಾರೆಯ ಚಿಲುಮೆಗಳು: ಶ್ರೀ ಶಶಿಧರ ಕೃಷ್ಣ (ಬರಹ ರೂಪ ಕೆಳಗೆ ನೀಡಲಾಗಿದೆ)

ಹಿಂಜಾಲಿನಲಿ ಅಜ್ಞಾನದ ನಿಶೆಯಿಂದ ಸುಭಾಷಿತಗಳ ಮೂಲಕ ಜ್ಞಾನದ ಉಶೆ ಗೆ ದಾರಿ ತೊರುವವರಿಲ್ಲಿ ದಿದ್ಧಿಗಿ ರಾಯರು

ಇಲ್ಲಿದೆ ನೋಡಿ ಜ್ಞಾನದ ಒಂದು ನಕ್ಷತ್ರ ಮಹಾಯೋಗಿನಿ ಹೆಸರು ತಾರಮತಿ

ಪಕ್ಕದಲ್ಲೇ ಇರುವರು ನೋಡಿ ಉಪನಿಷತ್ತಿನ ಬಗ್ಗೆ ಬರೆದ ಗುರು ರಾಯರ ಅಂಶದ ಮಾರ್ಗ ದರ್ಶಕರು ಕುರ್ಡಿ ರಾಘವೇಂದ್ರರಾಯರು

ಇಲ್ಲಿ ಇರುವರು ನೋಡಿ ಅನುವಾದಕ ಕವಿ ಉತ್ಸಾಹ ತುಂಬುವ ಗುಂಪಿನ ಒಳ ಹೂರಣ ಎಲ್ಲರಿಗೂ ಉಣ ಬಡಿಸುವ ರಮೇಶರು

ಅವರ ನಂತರ ನೋಡಿ ಹರೀಶರು ಓಂಕಾರ ಪಠಣ ಮಾಡುತ್ತಿದ್ದಾರೆ

ಬರಹಗಾರರ ಹೂ ತೋಟವಿದು ಅದರ ಪರಿಮಳ ಮೀರ ಮೀರ ಎಂದು ಮಿಂಚುವ ದೇಶಪಾಂಡೆ ಹಾಗೂ ಜೋಶಿ
ಜೋಡಿ

“ಒಲವೇ ನಮ್ಮ ಬದುಕು” ಎಂದ ಪಲ್ಲಣ್ಣ ನವರ ಒಣಗಿದ ಪಂಚೆಯನ್ನುಟ್ಟ ಹರಟೆ ಹನುಮಣ್ಣ ನಗಿಸುತ್ತಾ ಜೀವನ ದರ್ಶನ ಮಾಡಿಸುತ್ತಿದ್ದಾರೆ

ನಾನು ಹಟಮಾರಿ ಎಂದ ಮಟಮಾರಿ ಯವರು ಬರಹದ ಸಹಸ್ರ ಪದ್ಮ ದಳದ ಪ್ರಭಾ ವ ಹೊಂದಿರುವವರು

ಯಾವುದೀ ಶಬ್ದ ಹಕ್ಕಿಯ ಗಾನದಿಂಪಾಗಿದೆ ಓ ತಮ್ಮ ಧ್ವನಿಗಳ ಮೂಲಕ ಹನಿಗಳನ್ನು ಬಡಿಸುತ್ತಿರುವ ಪ್ರವೀಣ ದ್ವಯರದ್ದು

ತಮ್ಮ ಸ್ಪಂದನೆಗಳ ಮೂಲಕ ಎಲ್ಲರನ್ನೂ ಚಿಂತನೆಗೆ ಚರ್ಚೆಗೆ ತೊಡಗಿಸುವ ಮಾನ್ವಿ ಅವರನ್ನು ಮರೆತವರುಂಟೆ

ಇಲ್ಲೊಂದು ವಿವಿಧ ಕಲಾ ರೂಪ ಗಳನ್ನು ಚಿತ್ರಿಸುವ ರತ್ನಾ ಜೋತ್ಯಿ ಯಂತೆ ಬೆಳಗಿದೆ ಹೆಸರೆನು ಎಂದಿರೊ ವಿಠಲ ಗೋಪಾಲ

ಓ ಅದೊ ನೋಡಿ ನರಸಿಂಹರ ಒಳಗಿನಿಂದ ಕವಿಯೊಬ್ಬ ಸೀಳಿಕೊಂಡು ಹೊರಬರುತ್ತಿದ್ದಾರೆ

ಈ ಹೈಕಿಗೆ ಇಷ್ಟೆಕೆ ಹೈಕು ಬಂತು? ಎಂದು ಕೇಳಿದ ವಿಜಯಲಕ್ಷ್ಮಿ ಅವರ ಜೊತೆಗೆ ಅದೊ ಬಂದರು ಹಲವಾರು ಕನಸುಗಳ ಹೊತ್ತು ತಂದರು ಸಹಸ್ರ ಅರ್ಥದ ಒಂದೇ ಪದದ ಹೆಸರಿನ ಮೌನೇಶರು

“ನುಡಿ ಕಾರಣ”ದ ಕಾರಣ ಗೋನವಾರ ರಾಯರ ಸಾಕ್ಷಿಯಾಗಿ ಅನುದಿನ ಒಂದೊಂದು “ಕಬ್ಬಿಗರ ಅಬ್ಬಿ”ಯಲ್ಲಿ ಮೀಯ್ಯುವ ಮಹಾದೇವರ ಮೇಲಾಣೆ ಇದು ಕಸ್ತೂರಿ ಕಾವ್ಯಧಾರೆ ಎಂದು ನಾಮಾಂಕಿತ ಬರಹ ಹೂ ತೋಟ

ಇಲ್ಲಿ ಎಲ್ಲರಂತೆ ಎಲ್ಲರೊಂದಿಗೆ ಎಲ್ಲರಲ್ಲೂ ಇದ್ದಾರೆ ತಿರುಮಲೇಶರು

ಎಂದವ ಬಡ ಮೆದುಳಿನ ಅಜ್ಞಾನಿ ಇವ ಕವಿ (ವಯಸ್ಸಾದ) ಯುವ ಕವಿ ಶಶಿಧರ ನಲ್ಲಿ ಕೃಷ್ಣ ನನ್ನು ಕಂಡ ಮಂಕುತಿಮ್ಮ

  • ಶಶಿಧರ್ ಕೃಷ್ಣ,ಹೈದರಾಬಾದ್

ಶ್ರೀ ಪ್ರಹ್ಲಾದ್ ಜೋಷಿ ಅವರ ಕುಮಾರವ್ಯಾಸನ ಪಂಚೆ(ಬಳುವಳಿ ಕವಿತೆಗೆ ಅಡಿಟಿಪ್ಪಣಿ): “ ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವದು” ಎಂದು ರಾಷ್ಟ್ರಕವಿ ಕುವೆಂಪು, ಕುಮಾರವ್ಯಾಸನೆಂದೇ ಖ್ಯಾತಿ ಹೊಂದಿರುವ ಮಹಾಕವಿ ಗದುಗಿನ ನಾರಾಣಪ್ಪನವರ ಬಗ್ಗೆ ತಮ್ಮ ಕವನದ ಮೂಲಕ ಹಾಡಿ ಹೊಗಳಿದ್ದಾರೆ.ಭಾಮಿನೀ ಷಟ್ಪದಿಯಲ್ಲಿ ‘ಮಹಾಭಾರತ’ ಕಾವ್ಯವನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ನಿಧಿಯನ್ನು ಇತ್ತ ಮಹಾಕವಿಯ ಕುರಿತು ಸ್ಥಳದ ಐತಿಹ್ಯ ಹಾಗೂ ಒಂದು ವದಂತಿಯ ಪ್ರಕಾರ – ಕವಿ ನಾರಣಪ್ಪ ಕಾವ್ಯ ರಚನೆಗೆ ತೊಡಗುವ ಮುನ್ನ ಗದಗಿನ ವೀರನಾರಾಯಣ ದೇವಾಲಯದ ಮುಂದಿರುವ ಹೊಂಡದಲ್ಲಿ ಮಿಂದು, ಹಾಗೆಯೇ ಒದ್ದೆ ಪಂಚೆಯನ್ನುಟ್ಟುಕೊಂಡು ವೀರನಾರಾಯಣ ದೇವಸ್ಥಾನದಲ್ಲಿ ಪಂಚೆ ಒಣಗುವ ತನಕ ಕಾವ್ಯರಚನೆ ಮಾಡುತ್ತಿದ್ದರು, ಮತ್ತೆ ಮರುದಿನ ಇದೇ ರೀತಿ ಮಿಂದು ಒದ್ದೆ ಪಂಚೆಯನ್ನುಟ್ಟು ಕಾವ್ಯರಚನೆ ಮುಂದುವರೆಸುತ್ತಿದ್ದರು ಎಂದು ಪ್ರತೀತಿ.ಒದ್ದೆ ಪಂಚೆಯನ್ನು ಕಾವ್ಯ ಸ್ಫೂರ್ಥಿಯ ಪ್ರತೀಕವಾಗಿಟ್ಟುಕೊಂಡು ಆ ಹಿನ್ನೆಲೆಯಲ್ಲಿ ಕವಿತೆಯ ರಚನೆ ಮಾಡಲಾಗಿದೆ.