ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಬಣ್ಣ ವಾಸನೆ ರಹಿತ ಶುದ್ಧ ನೀರಿನ
ಒರತೆಯ ಕೊರತೆಯೇ ನಿಮಗೆ?
ಹೌದಾದರೆ ಕೇಳಿ,
ಅದು ನಿಮ್ಮ ಕಾಲಿಗೆಟಗುವ ರಸ್ತೆಯ ಆಚೆ,
ಕಿಕ್ಕಿರಿದ ಮುಖ್ಯ ವೀಧಿಯ ಸಭೆಗಳಲ್ಲಿ,
ದೊರಕಲಾರದು..
ದೂರದ, ದಖ್ಖನಿ ಬಂಡೆಗಳು ವಾಸಿಸುವ
ನೂರು ಹಳ್ಳಿಗಳಾಚೆ
ಕುರುಚಲು ಗುಡ್ಡದ ತಪ್ಪಲಿಗೊಮ್ಮೆ ಹೋಗಿ ಬನ್ನಿ
ಹಲವು ಅಪರಿಚಿತರುಗಳ ನಡುವೆ ಕಾಣಸಿಗುವರು
ಬಿಳಿಯ ಬಾನಿನ ಬಣ್ಣದ ಗಡ್ಡದ ತಿರುಮಲೇಶರು.
ಆ ಚಿಲುಮೆಯ ಕರ್ತೃರು …
ಅದೆಂಥ ನೀರದು.. ?
ಒಂದು ಕಾಲದ, ಒಂದು ದೇಶದ,
ಒಂದು ಸೂರಿನ, ಒಂದು ಊರಿನ..
ಊಹೂಂ.. ಅಲ್ಲ.
ಎಲ್ಲ ಆಯಾಮಗಳನು ಹಿಂಡಿ
ಕಾಲ-ಘಟ್ಟಗಳ ತೋಡಿ ತೋಡಿ
ಚಿಲುಮಿದ ಚಿಂತನ ಕಾರಂಜಿ .. !
ಹಲವು ಪರಿಧಿಗಳಲ್ಲಿ ,
ಒಂದಕ್ಕೊಂದು ತಳುಕಿಕೊಂಡ,
ಒಲಿಂಪಿಕ್ ರಿಂಗುಗಳ ಹಾಗೆ
ಅನುಭೂತಿ ಅಲೆಗಳೂ ಅಲ್ಲಿ…!
ತಣ್ಣನೆ ಸವಿದು ಅವರಿಗೊಂದು ಥ್ಯಾಂಕ್ಸ್
ಹೇಳಿ ಸುತ್ತ ನೋಡುವಿರಿ..
ಅಚ್ಚರಿ.. ಎಂಥ ಹಸನಾದ ಕೃಷಿ..
ಸಾಲು ಸಾಲು ಪದಗಳ ರಕ್ಕೆ ಅಗಲಿಸಿ ಲೆಕ್ಕ ಹಾಕಿದ ಮಾಸ್ಟರು…
ತಿರುಮಲೇಶ್ ಕಾವ್ಯಗಳು ಕಟ್ಟಿದ್ದಲ್ಲ ,ಹುಟ್ಟಿದ್ದು …. ಜೀವ ಜೀವಗಳ ರೀತಿ…
ಪಕ್ವವಾಗುವ ಪರಿಯ ಅರಿವಲ್ಲಿ,
ತಾವಾಗುವ ಸಂಭವ ಪ್ರೀತಿ..
ಅಳಿವುಳಿವನು ಮೀರಿ ಪ್ರಭಿಸುವ ಅಕ್ಷಯ ಕಾವ್ಯ..
ಕಾವ್ಯ ಜೈವ, ಭಾವ ದ್ರವ್ಯ, ಅದರ ಶ್ರವ್ಯವೂ ಭವ್ಯ !
ಅವರ ಓದುವುದು, ಆಲಿಸುವಾಗೆಲ್ಲ ,
ಮತ್ತೆ ಮತ್ತೆ, ಮುಗುದ ಮಳೆಯ,
ಒದ್ದೆಯಾದ , ಬದ್ಧವಾದ ಇಳೆಯ ನೆಲದ ಪುಳಕ … ಕೆಂಬಳದಿ ಗುಲ್ ಮೊಹರ ದಾರಿ, ನಡೆ ನಡೆವ ತನಕ..
ತೀರದ ತೀರಾ ತಿರುಮಲೇಶರು..
ಕ್ಷಯಿಸದ ಕ್ಷೀರ.. ತಿರುಮಲೇಶರು..
ಈ ಎಂಬತ್ತು, ತೊಂಬತ್ತು.. ಲೆಕ್ಕ ಬಾಬತ್ತು,
ಬರೀ ಕಾಲೆಂಡರ ಕಸರತ್ತು ..
ನಮಗೋ ತಿರುಮಲೇಶತ್ವ , ಸತ್ವ , ಅನವರತ!

  • ವಿಜಯ್ ದಾರಿಹೋಕ (ಆತ್ಮೀಯ ತಿರುಮಲೇಶರಿಗೊಂದು ಕಾವ್ಯ ನಮನದ ವಿನಯಪೂರ್ವಕ ಪ್ರಯತ್ನ)

ನಾ ಕಂಡ ತಿರುಮಲೇಶ್ ಸರ್..

ಕಾರ್ಯ ಕ್ಷೇತ್ರ , ಕರ್ಮಭೂಮಿ ಕಾರಣವಷ್ಟೇ ಅಲ್ಲ, ಸಾಹಿತ್ಯ, ಸಾಹಿತಿ ಪ್ರಪಂಚಗಳಿಂದ ದೂರವಿದ್ದು, ಹಾಗಾಗಿ ಆ ಮಟ್ಟಿಗೆ ಪಾಮರನಾಗಿರುವ ನಾನು ಕೆಲ ವರ್ಷಗಳ ಹಿಂದೆ ಕೆ ವಿ ತಿರುಮಲೇಶ್ ಭೇಟಿಯಾದದ್ದು, ನನ್ನ ಜೀವನದ ಯಾವುದೇ ಸಾಹಿತಿಗಳೊಂದಿಗಿನ ಮೊದಲ ಮುಖಾಮುಖಿ. ಅವರ ಜೊತೆ ಮಾಡಿದ ಒಂದೂವರೆ ತಾಸಿನ ಸಂದರ್ಶನ, ಯಾವುದೇ credential ಇಲ್ಲದ ನನ್ನಂತವನನ್ನೂ ತಾಳ್ಮೆಯಿಂದ ಕೇಳಿಸಿಕೊಂಡ, ಆತ್ಮೀಯವಾಗಿ ಮಾತನಾಡಿ, ಉತ್ತರಿಸಿದ ಅವರ ಹೃದಯವಂತಿಕೆಯನ್ನು ನಾನು ಅಷ್ಟು ಸುಲಭದಲ್ಲಿ ಹೇಗೆ ಮರೆತೇನು ?

ಇಸವಿ ಎರಡು ಸಾವಿರದಾ ಹದಿನಾರು, ಮಾರ್ಚು ತಿಂಗಳು.. ಹೈದರಾಬಾದಿನ ಪ್ರಕಾಶಮಾನ ದಿನಗಳು. ನಾನು ನಿಮ್ಮನ್ನು ಭೇಟಿ ಮಾಡಿ ಚಿಕ್ಕ ಸಂದರ್ಶನ ಮಾಡುವೆ ಎಂಬ ಕೋರಿಕೆಗೆ ತಿರುಮಲೇಶರಿಂದ ಆಗಲಿ ಎಂಬ ಸಂದೇಶ ಬಂದಾಗ ನನಗೆ ಸಂಭ್ರಮ ಜೊತೆಗೆ ಅಳುಕು ಕೂಡ. ಅಕಾಡೆಮಿಕ್ ಹೋಗ್ಲಿ, ಕನ್ನಡ ಮಾಧ್ಯಮದ ಪುಸ್ತಕಗಳನ್ನು ಬಿಟ್ಟರೆ ಬೇರೆ ಏನನ್ನೂ ಓದಿಕೊಳ್ಳದ ನನ್ನಂತಹ ಎಳಸು ಎಲ್ಲಿ , ತಿರುಮಲೇಶ್ ರಂಥ ಮೇರು ಸಾಧಕ, ಸರ್ವ ಮಾನ್ಯ ಸಾಹಿತಿಗಳೆಲ್ಲಿ ? ಫೇಸ್ ಮಾಡೋದು ಹೇಗೆ ?.
ಆದದ್ದಾಗಲಿ ಎಂದಾಗ ಸಾಥ್ ನೀಡಿದ್ದು ಹಿರಿಯರೂ, ಆತ್ಮೀಯರೂ ಆದ ಕಿಶನ್ ರಾವ್ ಗೋನವಾರ್.
ಹೈದರಾಬಾದ್ ಹೈಟೆಕ್ ಸಿಟಿಯಿಂದ ತಿರುಮಲೇಶ್ ರ ಮನೆ ನಗರದ ಇನ್ನೊಂದು ಭಾಗ ದಲ್ಲಿತ್ತು . ನಾನೇ ಡ್ರೈವ್ ಮಾಡಿ ಬರುವೆ ಎಂದಾಗ , ನನ್ನ ಈಮೈಲ್ ಗೆ ವಿಳಾಸವನ್ನು ಕಳಿಸಿದರು.. ನನ್ನ ಇನ್ಬಾಕ್ಸ್ ನಲ್ಲಿ ಅವರ ಈಮೇಲ್ ಪೂರ್ತಿ ಹೆಸರು Tirumalesh Kilingar Venkappa.
ಈಗ ನೋಡಿ. ಇದು ಇಂಪಾರ್ಟೆಂಟ್ .. ಅವರು ನನಗೆ ಕಳಿಸಿದ ಅಡ್ರೆಸ್ ವಿವರದ ಪೂರ್ಣ ಪರಿಪಾಠ ಹೀಗಿತ್ತು..

If you come from Secunderabad, come to Tarnaka, either take the fly-over or the ground road,come to Sudarshana Reddy Sweet Stall, turn left right angle–this is St. no. 12. Drive for about a kilometer (the street has several cross-roads but you come straight); you will find a T-junction (i.e.the street turns left and right but not forward); take the right turn, and then take the SECOND LLEFT TURN. You find a wide stretch of road of bout 300 yards; there is a Y-junction (fork); take the right one. Here on your left you find the long wall of Vijay Dairy Farm (the road is being widened here).
Come to end of the road (about a furlong of straight road). Turn right at the end. about a hundred yards ahead, enter xxxx xxx compound. The first 2 Blocks are under construction, the 3rd one (C Block) is complete. Take the far end lift and come to the 5th Floor; you will find Flat no. 501
on your right side when the lift opens.

( ಪರ್ಸನಲ್ ಡೇಟಾ ಪ್ರೈವಸಿ ಗಾಗಿ ಮನೆಯ ಹೆಸರನ್ನು ತೆಗೆದು xxxxxx ಹಾಕಿದ್ದೇನೆ)

ಇಷ್ಟು ಚಂದವಾಗಿ, ಕೂಲಂಕುಷವಾಗಿ ತಮ್ಮನ್ನು ಭೇಟಿಯಾಗಲು ಬರುವವರಿಗೆ ತ್ರಾಸಾಗದಂತೆ ಮುತುವರ್ಜಿ ವಹಿಸಿ ಈ ರೀತಿ ಸ್ವತಃ ಟೈಪ್ ಮಾಡಿ ವಿಳಾಸವನ್ನು ಕಳಿಸುವುದು ತಿರುಮಲೇಶ ಅಲ್ಲದೆ ಇನ್ನಾರಿಗೆ ಸಾಧ್ಯ. ? ಗೂಗಲ್ ಮಾಪ್ ಅಷ್ಟಾಗಿ ಬಳಕೆಯಾಗದ ಆ ಕಾಲದಲ್ಲಿ…?

ಅಷ್ಟರ ಹೊರತಾಗಿ , ಅಡ್ರೆಸ್ ವಿವರ ಇದರ ಸಂಕೇತಗಳು, ಆಯಾಮಗಳನ್ನು ವಿಶೇಷವಾಗಿ ಗಮನಕೊಟ್ಟರೆ ನಮಗೆ ಕಾಣಸಿಗುವುದು ಗಮನಶೀಲತೆ, ಸಂಕೀರ್ಣತೆಗಳನ್ನು ಬಿಡಿ ಬಿಡಿಯಾಗಿಸಿ ಸರಳಗೊಳಿಸುವ ಕುಶಲತೆ, ಸೂಕ್ಷ್ಮದೃಷ್ಟಿ, ವ್ಯಾಪ್ತಿ , ಸಂವಹನ, ದಿಕ್ಕು ಪ್ರಜ್ಞೆ , ಎಲ್ಲಕ್ಕೂ ಹೆಚ್ಚಾಗಿ ಮಾನವೀಯ ಕಳಕಳಿ, empathy, sensitiveness ಬೀಯಿಂಗ್ ನೈಸ್, Respect to individuals,ನಿರ್ದಿಷ್ಟತೆ, ದಕ್ಷತೆ ,ಸಹನಶೀಲತೆ, ಘನತೆ ಮತ್ತೆ ಸಮಾನತೆ ..!

ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ , ವಿವರಿತ ವಿಳಾಸ ಕಳಿಸುವುದರ ಹಿಂದಿನ ರಚನೆ, thought process, ವ್ಯಕ್ತಿತ್ವ ಗಮನೀಯ, ಗಣನೀಯ.

ಸುಮಾರು ಒಂದೂವರೆ ತಾಸುಗಳ ವರೆಗೆ ನನ್ನ ವಿವಿಧ ಪ್ರಶ್ನೆಗಳಿಗೆ ತಾಳ್ಮೆಯಿಂದ, ಉತ್ತರಿಸಿದರು. ನಾನು ಮತ್ತು ಕಿಶನ್ ರಾವ್ ತನ್ಮಯರಾಗಿ ಕೇಳಿದೆವು.. ಮಧ್ಯ ಮಧ್ಯ ಶ್ರೀ ಎಂಬ ಪುಸ್ತಕವನ್ನು ತೆರೆದು Quote ಮಾಡಿದರು.
ನನ್ನ ನರ್ವಸ್ ನೆಸ್ ಎಷ್ಟಿತ್ತು ಅಂದರೆ ಮೊಬೈಲ್ ರೆಕೊರ್ಡಿಂಗ್ ತುಂಬಾ ಸ್ಪಷ್ಟವಾಗಿ ಮಾಡುವಲ್ಲಿ ಎಡವಿದೆ. .. ಆದರೂ ಪೂರ್ತಿ ಮಾತುಕತೆಯನ್ನು ನಾನು ಅಪ್ಲೋಡ್ ಮಾಡಿದ ಲಿಂಕ್ ಕೆಳಗೆ ಕೊಟ್ಟಿದ್ದೇನೆ. ಕೆಲವು ಮಾತುಕತೆಗಳನ್ನು ಟೈಪಿಸಲು ಪ್ರಯತ್ನಿಸಿದ್ದೇನೆ. . ಸ್ವಲ್ಪ ಹೆಡ್ ಸೆಟ್ ಧರಿಸಿದ್ರೆ, I think you can still manage to hear and enjoy his flawless talks.

ಹೀಗೆ ನನ್ನ ಸೊ ಕಾಲ್ಡ್ ಇಂಟರ್ವ್ಯೂ ಮುಗಿದಾಗ, ಅವರೇ ‘ ನೀವೊಂದು ಕವಿತೆ ಓದುತ್ತೇನೆ ಅಂದಿದ್ರಲ್ಲ, ಅದನ್ನು ಓದಿ ಎಂದು ಜ್ಞಾಪಿಸಿದರು.. ಅದುವರೆಗೆ, ವರ್ಷಗಳಿಗೊಮ್ಮೆ ಪೆನ್ನು ಹಿಡಿಯುವ ಚಾಳಿಯಿದ್ದ ನಾನು ಹಿಂಜರಿಕೆಯಲ್ಲೇ ನಾನು ಬರೆದಿದ್ದ ಕವಿತೆ ಓದಿದೆ. ನನ್ನ ಆಯಿಯ ಹೊರತಾಗಿ ಇನ್ನೊಬ್ಬರ ಮುಂದೆ ದೊರೆತ ಕವಿತಾವಾಚನದ ಅವಕಾಶ ಅದೊಂದೇ ಇಲ್ಲಿಯವರೆಗೂ. ಅದೂ ಮಹತ್ವದ ಕವಿ ತಿರುಮಲೇಶ್ ರ ಮುಂದೆ. ಶೀರ್ಷಿಕೆ “ಶಿಲ್ಲೋನ್ ನ ಕೋಟೆ.”

ಸ್ವೀಟ್ಝರ್ಲಾಂಡ್ ನ ಜಿನೇವಾ ಲೇಕ್ ಗೆ ತಾಗಿ ಇರುವ chillon de castle ನಲ್ಲಿ ಖೈದಿಯಾಗಿದ್ದ ಬೋನಿವಾರ್ಡ್ ಎನ್ನುವ ಸಂತನ ಬಗೆಗಿನ ಕವಿತೆ ಯಾಗಿತ್ತು ಅದು. ಚಿಕ್ಕ ಕಿಂಡಿಯ ಮೇಲೆ ಸರೋವರದ ನೀರಲ್ಲಿ ಪ್ರತಿಫಲಿತ ಕಿರಣವನ್ನ ನೋಡಿ ಆತ, ತನ್ನನ್ನು ನೀರಿನ ಮಟ್ಟಕ್ಕಿಂತ ಕೆಳಗೆ ಸೆರೆಮನೆಯಲ್ಲಿ ಇಡಲಾಗಿದೆ ಎಂಬ ಹಲವು ವರ್ಷಗಳ ಕಾಲ ನಂಬಿದ್ದ. ಆ ಜಾಗವನ್ನು ನಾನು ಕಣ್ಣಾರೆ ಕಂಡು ಆ ಕವಿತೆ ಬರೆಯುವ ಪ್ರಯತ್ನ ಮಾಡಿದ್ದೆ. ಅದೇ ವಿಷಯದ ಬಗ್ಗೆ ಸುಪ್ರಸಿದ್ಧ ಆಂಗ್ಲ ಕವಿ ಲಾರ್ಡ್ ಬೈರನ್ Lord Byron ಬರೆದಿದ್ದು, ಅದನ್ನು ಓದುವ ಗೋಜಿಗೆ ಹೋಗಿರಲಿಲ್ಲ.

“ಚೆನ್ನಾಗಿದೆ , ಹಾಗೆಯೇ ಆ ಐತಿಹಾಸಿಕ ಬ್ಯಾಕ್ಗ್ರೌಂಡ್ ಬಗ್ಗೆ ಒಂದು ಚಿಕ್ಕ ಟಿಪ್ಪಣಿ ಹಾಕಿ ಕವಿತೆಯ ಜೊತೆಗೆ” ಎಂದು ಸೂಚಿಸಿದರು ತಿರುಮಲೇಶರು.
ಎಲ್ಲ ಮುಗಿದು ಹೊರಡುವ ಹೊತ್ತಿಗೆ , ಕೇಳಿದರು, ಯಾವ ಹೆಸರಿಟ್ಟಿದ್ದೀರಿ, ಒನ್ಲೈನ್ ಪತ್ರಿಕೆಗೆ?
ಸರ್, ನಸುಕು.ಕಾಮ್ ಅಂತ. ಓಹೋ ಹೆಸರು ಚೆನ್ನಾಗಿದೆ, ಶುಭವಾಗಲಿ ಎಂದು ಬೀಳ್ಕೊಟ್ಟರು ಬಾಗಿಲವರೆಗೂ ಬಂದು..

೧೨-೦೯-೨೦೨೦, ಶನಿವಾರ..
ಇವತ್ತು ನಸುಕು.ಕಾಮ್ ನಲ್ಲಿ ತಿರುಮಲೇಶ್ ರಿಗೆ ಹುಟ್ಟು ಹಬ್ಬದ ಸಂಭ್ರಮ .. ಜೊತೆಯಾದವರು ಅದೇ ಆತ್ಮೀಯ ಕಿಶನ್ ರಾವ್ ಗೋನಾವರ.
ನಾವು ಸ್ವತಃ ಮಾತಾಡಿ, ಮೆಸ್ಸೇಜ್ ಹಾಕಿದಾಗ ಅನೇಕರು ತಿರುಮಲೇಶ್ ಹೆಸರು ಕೇಳಿ ಸಂಭ್ರಮದಿಂದ ಸಂಚಿಕೆಗೆ, ಸಂದೇಶ ಬರಹ ಕಳಿಸಿಕೊಟ್ಟವರಿಗೆ ನಾವು ಅಭಾರಿಯಾಗಿದ್ದೇವೆ. ಸಮಯದ ಅಭಾವದಿಂದ ಇನ್ನೂ ಅನೇಕ ಆರ್ಟಿಕಲ್ಸ್ ಹಾಕಲಾಗಿಲ್ಲ.

.. ಓಹ್ ತಿರುಮಲೇಶ್ ಸರ್ ಗೆ ಎಂಬತ್ತಾ ಎಂದು ಅಚ್ಚರಿ ಪಡುತ್ತಾ.. ತಿರುಮಲೇಶ್ ರಿಂದ ತಾವು ಕಲಿತದ್ದನ್ನು , ಪ್ರಭಾವಿತರಾದುದನ್ನು ಕೃತಜ್ಞತೆಯಿಂದ ನೆನೆದಿದ್ದಾರೆ. ಜಯಂತ್ ಕಾಯ್ಕಿಣಿ ಅವರೊಡನೆ ಮೊನ್ನೆ ಮಾತನಾಡುವಾಗ, “ತಾನು ಕವಿಯಾದ್ದೇ ತಿರುಮಲೇಶ್ ಅವರನ್ನು ಓದಿ” ಎಂದು ಗೌರವದಿಂದ ನೆನೆದಿದ್ದಾರೆ.

ಮತ್ತೊಮ್ಮೆ ಈ ಸಂಚಿಕೆಗೆ ಸಹಾಯ ಮಾಡಿದ, ಕಿಶನ್ ರಾವ್ ಅವರಿಗೆ, ಮುಂಬಯಿ ಕನ್ನಡ ವಿಶ್ವವಿದ್ಯಾಲಯದ ಡಾ. ಜಿ ಎನ್. ಉಪಾಧ್ಯ ಅವರಿಗೆ, ಆತ್ಮೀಯ ಸುಬ್ರಾಯ ಚೊಕ್ಕಾಡಿಯವರಿಗೆ, ಶ್ರೀಮತಿ ಮಾಲಿನಿ ಹಾಗೂ ಡಾ.ಗೋವಿಂದ ಹೆಗಡೆ ಬಳಗಕ್ಕೆ ಅಲ್ಲದೇ ಗೌರವಾನ್ವಿತ ಲೇಖಕರು, ಸಂಚಿಕೆಗೆ ವಿಡಿಯೋ ಚಿತ್ರ ನೀಡಿದ ಎಲ್ಲರಿಗೂ ಕೃತಜ್ಞತೆಗಳು.
ಮತ್ತೊಮ್ಮೆ ಎಲ್ಲರಿಗೂ ಅಭಿನಂದನೆ ಹಾಗೂ ಶುಭಾಶಯಗಳು..

ಲಾಸ್ಟ್ ಸ್ಕೂಪ್

ಎಲ್ಲಿಯೂ ಸಲ್ಲದವರು, ಎಲ್ಲೆಡೆಗೂ ಸಲ್ಲುವರು, ಎಲ್ಲಿಗೂ ನಿಲುಕದವರು ಎಲ್ಲರಿಗೂ ದೊರಕುವರು.. ಯಾವುದಕ್ಕೂ ಅಂಟ ದವರು, ಕಾಯಕದ ಭಂಟರವರು.. . ಎಲ್ಲಿಂದಲೋ ಬಂದವರು.. ..! ಇದು ನನಗೆ ವೈಯಕ್ತಿಕವಾಗಿ ತುಂಬಾ ಹತ್ತಿರದ ಥೀಮ್.
ಈ ಥೀಮ್ ಗೆ ಉದಾಹರಣೆ ಹಾಗೂ ಮಾದರಿಯಾಗಿ ತಿರುಮಲೇಶ್ ರನ್ನು ನೋಡಲೆತ್ನಿಸುತ್ತೇನೆ. . ಕೇವಲ ಆ ಒಂದೂವರೆ ತಾಸು ಮುಖಾ ಮುಖಿ ಬಿಟ್ಟು ಅವರ ಬಗ್ಗೆ ಬೇರೆ ಏನು ಗೊತ್ತಿರದಿದ್ದರೂ ಅವರ ಆ ವ್ಯಕ್ತಿತ್ವ, ವಿಚಾರಧಾರೆ ,ತುಂಬಾ ಪ್ರಭಾವ ಬೀರಬಲ್ಲಂತವು, not just a scholar but with the ability to convey with clarity and convictions. ಹೊಸ ಪ್ರಯೋಗಗಳನ್ನು ಅವರು ಮಾಡುವ ರೀತಿ ಕೂಡ ಸ್ಪೂರ್ತಿದಾಯಕ. ನಾವು ಅದೇ ಸ್ಪೂರ್ತಿಯಿಂದ ನಸುಕಿನಲ್ಲಿ ಹೊಸತನ ಮಾಡ್ತಾ ಇರ್ತೀವಿ, ಕಲೆ , ಸಾಹಿತ್ಯ, ವಿನ್ಯಾಸ, ಮಾಧ್ಯಮ ವಿಷಯಗಳಲ್ಲಿ ಆಗಾಗ established rules ಬ್ರೇಕ್ ಮಾಡಬೇಕಾಗುತ್ತೆ.. to create new, for good.

ತಿರುಮಲೇಶ ಜೊತೆಗೆ ಮಾತಾಡಿದ ಅನೇಕ ವಿಷಯ ಗಳ ಬಗ್ಗೆ ಮುಂಚಿದ್ದ ಪ್ರಶ್ನೆಗಳು ಈಗ ನಂಗಿಲ್ಲ..ಕ್ಲಾರಿಟಿ ದೊರಕಿದೆ. ಅದಕ್ಕೆ ಅವರು ಉತ್ತರ ಕೊಟ್ಟಿದ್ದಾರೆ.. ಅದನ್ನು ನಾನು ಸ್ವವಿವೇಚನೆಯಿಂದ ಒಪ್ಪಿದ್ದೇನೆ ಕೂಡ.. ಉದಾಹರಣೆಗೆ ಕನ್ನಡದ ಬಗ್ಗೆ ನನ್ನ ಪ್ರಶ್ನೆಯನ್ನು ನೋಡಿ. ಅವರು ಉತ್ತರ ಕೊಟ್ಟಿದ್ದಾರೆ.

ಎಲ್ಲ ಕಾಲದ ಸಾಧಕರನ್ನೆಲ್ಲ ಇವತ್ತು ಕೆಲವು ಸ್ವ ಹಿತಾಸಕ್ತ ಗುಂಪುಗಳು ಗ್ರಹಣದಂತೆ ಆಕ್ರಮಿಸಿ ಅವರ ಸುತ್ತ ಭದ್ರ ಕೋಟೆ ಕಟ್ಟಿ ಬಂಧಿಸಿಟ್ಟು ಕೊಳ್ಳುವ ಪರಿ ಮುಂಚಿನಿಂದಲೂ ಇದೆ ಮತ್ತು ಈಗ ಜಾಸ್ತಿ ಆಗ್ತಿದೆ. ಒಳಗೆ ಭರ್ತಿ ಭಜನ , ಹೊರಗೆ ಉಳಿದ ಗುಂಪುಗಳೊಂದಿಗೆ ಭರ್ಚಿ ಕದನ ಆರಂಭಿಸಿದ್ದಾರೆ.. ಸೋಶಿಯಲ್ ಮೀಡಿಯಾ ದ ನಶೆ ಬೇರೆ.
ಇವೆಲ್ಲವುದರ ನಡುವೆ, ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಸಂಘರ್ಷಗಳ ಹಿನ್ನೆಲೆಯಲ್ಲಿ , ನಮ್ಮ ಪೇರೆನ್ನಿಯಲ್ (Perennial)ಪ್ರಶ್ನೆಗಳಿಗೆ ಉತ್ತರ ಬೇಕಿದೆ.. ಬೌದ್ಧಿಕ , ಸ್ವತಂತ್ರ ವಿವೇಚನೆ ಬೇಕಿದೆ.. ಎಡ, ಬಲ, ಮಧ್ಯಮ, hypocracy, ವ್ಯವಸ್ಥೆ, ಸ್ಟೀರಿಯೊಟೈಪಿಂಗ್,ಪೂರ್ವಾಗ್ರಹಗಳು, ಐತಿಹಾಸಿಕ ಪ್ರಮಾದಗಳು,ನಾನಾ ಪ್ರಮೇಯಗಳು , ಮಿಥ್ಯೆಗಳು , ಔಟ್ ಡೇಟೆಡ್ ಸಿದ್ಧಾಂತಗಳು, narratives ಇತ್ಯಾದಿಗಳಿಂದ ಮುಕ್ತಿಿ ಪಡೆದು , ಮಾನವೀಯತೆ ಕೇಂದ್ರಿತ , ಸಮಾಜ ಕೇಂದ್ರಿತ, ಶಿಕ್ಷಣ ಕೇಂದ್ರಿತ, ನೈತಿಕ ಹಾಗೂ ಮೌಲಿಕ ಪ್ರಜ್ಞೆಯನ್ನು ಮೂಡಿಸುವ ಕೆಲಸ ಹಿರಿಯ ಸಾಹಿತಿಗಳು, ಚಿಂತಕರು ಮಾಡಬೇಕು.

ಎಲ್ಲೂ ಬಂಧಿಯಾಗದ,ಕಟ್ಟಿ ಹಾಕಿಕೊಳ್ಳದ ಸರ್ವ ಸ್ವತಂತ್ರ ತಿರುಮಲೇಶರಂತವರು , ಅವರ ಬರಹಗಳು, ಚಿಂತನೆಗಳು ದಾರಿ ದೀಪ ಆಗಲಿವೆ ಎಂಬ utmost trust ನ ಜೊತೆಗೆ ಈ ಲೇಖನವನ್ನು ಇಲ್ಲಿಗೆ ಮುಗಿಸುತ್ತೇನೆ.. ತಪ್ಪುಗಳಿದ್ದರೆ ಉದಾರವಾಗಿ ಮನ್ನಿಸಿ.

ಶುಭ ಹಾರೈಕೆಗಳು.. ಮತ್ತೆ ತಿರುಮಲೇಶ್ ಅವರಿಗೆ 80ರ ಸಂಭ್ರಮದ ಶುಭಾಶಯಗಳು.