ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾ ಕಂಡಂತೆ ಕಸ್ತೂರ್ ಬಾ: ಭಾಗ-೪

ಎಚ್ಚಾರೆಲ್

Page 40

ಈ ತರಹದ ತಾರತಮ್ಯ ಸಿಪಾಯಿಗಳಿಗೆಲ್ಲ ತಿಳಿದು, ಬ್ರಾಹ್ಮಣ ಸಿಪಾಯಿಯ ಮೇಲೆ ಮಾಡಿದ ದೂರು ಮೇಲಧಿಕಾರಿಗಳ ಹತ್ತಿರದವರೆಗೂ ಹೋಯಿತು. ಕಾನೂನಿನ ಪ್ರಕಾರ ಎಲ್ಲರೂ ಕೆಲಸಮಾಡಿಕೊಡುತ್ತಾರೆ. ಕೆಲವರಿಗೆ ಏಕೆ ಹೆಚ್ಚು ಆದ್ಯತೆ ? ಅಧಿಕಾರಿಗಳು ಕಸ್ತೂರ್ ಬಾರವರಿಗೆ ಎಲ್ಲರನ್ನೂ ಒಂದೇ ತರಹ ಕಾಣಲು ಮನವಿ ಮಾಡಿದರು. ಬಾ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವ ಜಾಯಮಾನದವರಲ್ಲ. ಬ್ರಾಹ್ಮಣ ಸಿಪಾಯಿಗೆ ಗುಟ್ಟಾಗಿ ಏನನ್ನಾದರೂ ತಿನ್ನಲು ಕೊಡುತ್ತಿದ್ದರು. ನನ್ನ ಪಾಲಿನ ತಿಂಡಿಯನ್ನು ಆತನಿಗೆ ಕೊಟ್ಟರೆ ಬೇರೆಯವರು ಏಕೆ ಅಸೂಯೆ ಪಡಬೇಕು ? ಎನ್ನುವುದು ಅವರ ವಾದ.

ಎಚ್ಚಾರೆಲ್ ಅನುವಾದಿಸಿದ ಸುಶೀಲಾ ನಯ್ಯರ್ ರ ಡೈರಿಯ ಪುಟಗಳಿಂದ

23

ಆಗಾಖಾನ್ ಪ್ಯಾಲೇಸ್ ಗೆ ಹೋದಮೇಲೆ ಕಸ್ತೂರ್ಬಾ ತಮ್ಮ ಪತಿಯನ್ನು ‘ಏಕಾದಶಿ ಯಾವಾಗ ಬರುತ್ತೆ’ ಎಂದು ಕೇಳಿದರು. ಗಾಂಧಿಯವರು ಜೈಲ್ superintendent ಗೆ ಬಾ ರವರಿಗೋಸ್ಕರ ಒಂದು ಭಾರತೀಯ ಪಂಚಾಂಗವನ್ನು ತರಬೇಕೆಂದು ಮನವಿಮಾಡಿದರು. ಅಫೀಶಿಯಲ್ ಆಗಿ ತಕ್ಷಣ ಪಂಚಾಂಗವನ್ನು ಪಡೆಯಲು ಹಲವು ವಿಘ್ನಗಳಿವೆ ; ಸಮಯವೂ ಹೆಚ್ಚು ಬೇಕಾಗುತ್ತದೆ. ಹೇಗೂ ಪ್ರಯತ್ನಿಸುವುದಾಗಿ ವಾಗ್ದಾನಮಾಡಿ, ಒಂದು ಕ್ಯಾಲೆಂಡರ್ ತಯಾರಿಸಲು (ಸುಶೀಲ ನಾಯರ್) ನನಗೆ ಮನವಿಮಾಡಿದರು. ಅದು ಹೇಗಿರಬೇಕೆಂದು ವಿವರಿಸಿದರು. ಗಾಂಧೀಜಿಯವರು ಅರೆಸ್ಟ್ ಆದ ದಿನ, ಹುಣ್ಣಿಮೆಯ ತಿಥಿ ನೆನಪಿತ್ತು. ಆ ದಿನವನ್ನು ಮೂಲವಾಗಿಟ್ಟುಕೊಂಡು, ಬೇರೆ ತಿಥಿಗಳನ್ನು ಬರೆದೆವು. ಹುಣ್ಣಿಮೆ ಅಮಾವಾಸ್ಯೆಗಳ ದಿನಗಳಮೇಲೆ ಕ್ರಮವಾಗಿ ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ಮಾರ್ಕ್ ಮಾಡಿದೆವು. ಈಗ ಬಾಪು, ಬಾ ಗೆ ಏಕಾದಶಿ ತಿಥಿ, ಮತ್ತು ಇತರೆ ಉಪವಾಸದ ದಿನಗಳ ಮಾಹಿತಿಯನ್ನು ಕೊಡಲು ಸಾಧ್ಯವಾಯಿತು. ಈ ಕ್ಯಾಲೆಂಡರನ್ನು ಕಸ್ತೂರ್ ಬಾರವರು ಸುಮಾರು ಒಂದು ತಿಂಗಳು ಉಪಯೋಗಿಸಿದರು. ನಂತರ superintendent ಒಂದು ಹೊಸ ಪಂಚಾಂಗವನ್ನು ಕೊಂಡು ತಂದು ಕೊಟ್ಟರು. ಬಾರವರು ಏಕಾದಶಿ ಉಪವಾಸವನ್ನು ತಪ್ಪದೆ ಪಾಲಿಸುತ್ತಿದ್ದರು. ಹಾಗೆಯೇ ಪ್ರತಿ ಸೋಮವಾರ, ಪೂರ್ಣಿಮೆ, ಅಥವಾ ಅಮಾವಾಸ್ಯೆ, ಕೃಷ್ಣ ಜನ್ಮಾಷ್ಟಮಿ, ಮಹಾ ಶಿವರಾತ್ರಿ ಇತ್ಯಾದಿ. ಕೆಲವು ವೇಳೆ ಎರಡು ಅಥವಾ ಮೂರು ಆಚರಣೆಗಳ ತಿಥಿ ದಿನಗಳು ಒಟ್ಟಿಗೆ ಬರುತ್ತಿದ್ದವು. ಆ ಎಲ್ಲಾ ದಿನಗಳಲ್ಲೂ ಅವರು ಉಪವಾಸವನ್ನು ತಪ್ಪದೆ ಪಾಲಿಸುತ್ತಿದ್ದರು.

Kasturba Gandhi (Makhanji) (1869 - 1944) - Genealogy

ಕಸ್ತೂರ್ ಬಾರವರ ನಾಜೂಕಾದ ಆರೋಗ್ಯಸ್ಥಿತಿ, ನಿಶ್ಶಕ್ತಿಗಳನ್ನು ಗಮನಿಸಿ, ಉಪವಾಸಗಳನ್ನು ಸಾಧ್ಯವಾದಷ್ಟು ಕಡಿಮೆಮಾಡುವುದು ಒಳ್ಳೆಯದೆಂದು ಆಶ್ರಮದ ಅವರ ಹಿತೈಷಿಗಳು ಹೇಳುತ್ತಿದ್ದರು. ಧಾರ್ಮಿಕ ತಿಥಿಗಳಂದು ಮಾಡುವ ಉಪವಾಸಗಳಲ್ಲದೆ, ಸ್ವಾತಂತ್ರ್ಯದಿನೋತ್ಸವ, ರಾಷ್ಟ್ರೀಯ ದಿನಗಳ ಮೊದಲು ಮತ್ತು ಕೊನೆದಿನಗಳನ್ನು, ಹಾಗೆಯೇ ‘ಕ್ವಿಟ್ ಇಂಡಿಯಾ ದಿನ’, ತಪ್ಪದೆ ಉಪವಾಸ ಮಾಡುತ್ತಿದ್ದರು. ಸ್ವಲ್ಪದಿನಗಳ ಹಿಂದೆ ಹಾಸಿಗೆ ಹಿಡಿದು ಮಲಗಿದ್ದಾಗಲೂ ಏಕಾದಶಿ ವ್ರತ, ಸಂಕ್ರಾಂತಿ ಉಪವಾಸ ಬಿಡಲೇ ಇಲ್ಲ. ಮಕರ ಸಂಕ್ರಾಂತಿ ಹಬ್ಬದ ದಿನ, ಯಾರಿಗೋ ಹೇಳಿ ನಮಗೆಲ್ಲಾ ಎಳ್ಳಿನ ಲಡ್ಡು ಉಂಡೆಗಳನ್ನು ತರಿಸಿಕೊಟ್ಟರು. ಯರವಾಡ ಜೈಲಿನಲ್ಲಿದ್ದ ಜೈಲು ಬಂದಿಗಳು, ಆಗಾಖಾನ್ ಜೈಲಿನಲ್ಲಿ ಸೇವೆಮಾಡುತ್ತಿದ್ದ ಕೈದಿಗಳಿಗೂ ಎಳ್ಳಿನ ಉಂಡೆ ಮಾಡಿ ಹಂಚುತ್ತಿದ್ದರು. ಸಮಯ ಸಿಕ್ಕಾಗಲೆಲ್ಲ ಗಾಂಧೀಜಿಯವರು, ‘ಬಾ ನೀವು ಮಾಡುತ್ತಿರುವುದು ಸರಿಯಲ್ಲ ; ನಾವು ಇರೋದು ಜೈಲಿನಲ್ಲಿ, ಅನ್ನೋದನ್ನು ಮರೆಯಬಾರದು. ಮನೆಯಲ್ಲಿ ಇವೆಲ್ಲಾ ಮಾಡಬಹುದು ; ಜೈಲಿನಲ್ಲಲ್ಲ’. ಎಂದಾಗ, ಬಾ ರವರ ಉತ್ತರ, ‘ನಮಗೆ ಮನೆ ಅಂತ ಎಲ್ಲಿದೆ ‘? ಅಂತ ಪ್ರಶ್ನಿಸುತ್ತಿದ್ದರು.

ವೀಲ್ ಛೇರ್ ಮೇಲೆ ಕುಳಿತು ಬಾರವರು ಅಡುಗೆ ಮನೆಗೆ ಹೋಗಿ, ಅಲ್ಲಿಗೆ ಕೈದಿಗಳನ್ನು ಒಬ್ಬೊಬ್ಬರನ್ನಾಗಿ ಕರೆದು ತಮ್ಮ ಸ್ವಂತ ಕೈನಿಂದ ಅವರಿಗೆಲ್ಲ ಸಿಹಿ ಹಂಚುತ್ತಿದ್ದರು. ಬಾ ವಿದ್ಯಾವಂತೆಯಲ್ಲ. ಅಪಾರ ವ್ಯವಹಾರ ಜ್ಞಾನ, ಮತ್ತು ವಿವೇಕಗಳನ್ನು ಹೊಂದಿದ್ದರು. ಒಬ್ಬ ಮಾದರಿ ಹಿಂದೂ ಗೃಹಿಣಿ ತನ್ನ ಸರ್ವಸ್ವವನ್ನು ಪತಿಯ ಶ್ರೇಯಸ್ಸಿಗೆ ಮುಡುಪಾಗಿಟ್ಟು ಅದರಲ್ಲೇ ತಮ್ಮ ಜೀವನದ ಸಾಫಲ್ಯ ಕಾಣುವ ಸ್ವಭಾವದವರಾಗಿದ್ದರು. ಸ್ತ್ರೀಧರ್ಮವೆಂದರೆ ಪತಿಯ ಹೆಜ್ಜೆಯಲ್ಲಿ ಹೆಜ್ಜೆ ಮಿಲಾಯಿಸುವುದೇ ವಿವೇಕವೆಂದು ಅವರು ನಂಬಿದ್ದರು.

Page 41

ಮನು ಬೆನ್, ಗಾಂಧೀ ಅಜ್ಜನ ಜತೆ ವಾಕ್ ಹೋಗುವಾಗ, ‘ಯಾವುದಾದರೂ ಕತೆ ಹೇಳಿ’ ಎಂದು ಕೇಳುತ್ತಿದ್ದಳು. ಬಾಪು ಕೆಲವು ಸಣ್ಣ ನೀತಿ ಕತೆಗಳನ್ನು ಹೇಳುತ್ತಿದ್ದರು. ಒಂದು ದಿನ ನನಗೆ, ಅವರು ಏಕೆ ತಮ್ಮ ಸ್ವಂತ ಜೀವನದ ಘಟನೆಗಳನ್ನು ಕತೆಗಳ ರೂಪದಲ್ಲಿ ಹೇಳಬಾರದು ? ಎಂದು ಅನ್ನಿಸಿತು. ಆತ್ಮಕತೆಗಳನ್ನು ಬರೆದು ಪ್ರಕಟಿಸಿದ್ದರೂ, ಅವರ ಮುಖತಃ ಹೇಳುವುದನ್ನು ಕೇಳಲು ನಮಗೆಲ್ಲ ಕಾತುರ. ಪುಸ್ತಕದಲ್ಲಿ ದಾಖಲಿಸಿಲ್ಲದ ಅನೇಕ ವಿಷಯಗಳ ವಿವರಗಳು ನಮಗೆ ಅವರು ಕತೆ ಹೇಳಿದಾಗ ದೊರೆಯುತ್ತವೆ. ಬಾಪು ತಮ್ಮ ಬಾಲ್ಯದ ಚಟುವಟಿಕೆಗಳನ್ನು, ಮತ್ತು ಕಸ್ತೂರ್ ಬಾ ಜತೆ ಮದುವೆಯಾಗುವ ಮುನ್ನ ಆಡುತ್ತಿದ್ದ ತುಂಟ ಆಟಗಳ ವಿವರಗಳು, ನಂತರ, ಅವರ ಮದುವೆ ಸಂಭ್ರಮ, ಉನ್ನತ ವಿದ್ಯಾಭ್ಯಾಸಕ್ಕೆ ಇಂಗ್ಲೆಂಡಿಗೆ ಹೋಗಿದ್ದು, ವಾಪಸ್ ಬಂದಮೇಲೆ ನೌಕರಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೋದದ್ದು, ವಗೈರಾ, ವಗೈರ. ಕಸ್ತೂರ್ಬಾ ಹೇಗೆ ಹಳೆಯ ಸಂಪ್ರದಾಯಗಳ ಕಟ್ಟಿಗೆ ಸಿಕ್ಕಿಹಾಕಿಕೊಂಡು ಆಚರಣೆಗಳಲ್ಲಿ ಮುಳುಗಿದ್ದಾಗ, ಪತಿಯ ಪ್ರೇರಣೆಯಿಂದ ಅವರ ತತ್ವಗಳನ್ನು ಸ್ವೀಕರಿಸಿದ್ದನ್ನು ಬಹಳ ಸ್ವಾರಸ್ಯಕರವಾಗಿ ಹೇಳುತ್ತಿದ್ದರು. ಈ ವ್ಯಾಖ್ಯಾನವನ್ನು ನಾನೊಬ್ಬಳೆ ಅಲ್ಲದೆ, ಮನೆಯ ಮಹಿಳಾ ಸದಸ್ಯರೆಲ್ಲಾ ಕೇಳಲು ಉತ್ಸುಕರಾಗಿದ್ದರು.

ಕಸ್ತೂರ್ ಬಾರವರ ಗೆಳತಿಯರು ಕೆಲವು ಸುವಿಚಾರಗಳನ್ನು ಬಾರವರಿಗೆ ಮನದಟ್ಟುಮಾಡುತ್ತಿದ್ದರು. ನಾವೇನೋ ನಮ್ಮ ಹಳೆಯ ಸಿದ್ಧಾಂತಗಳಿಗೆ ಅಂಟಿಕೊಂಡಿದ್ದೇವೆ. ಹರಿಜನರನ್ನು ಮನೆಗೆ ಕರೆಯದಿರುವುದು, ಮುಸಲ್ಮಾನರು ಮುಟ್ಟಿದ ಪಾತ್ರೆಯಲ್ಲಿ ನೀರು ಕುಡಿಯದಿರುವುದು ಇತ್ಯಾದಿ. ಇದೆಲ್ಲ ನಿನಗಲ್ಲ. ನಿನ್ನ ಪತಿದೇವರು ಏನು ಉಪದೇಶಮಾಡುತ್ತಾರೋ, ಅದನ್ನು ನೀನು ಶಿರಸಾವಹಿಸಿ ಅನುಸರಿಸಬೇಕು. ಪತಿಯು ಹೇಳುವ ದಾರಿಯಲ್ಲಿ ನಡೆಯುವುದು ಪತ್ನಿಯ ಧರ್ಮ. ಅದರಲ್ಲಿ ತಪ್ಪೇನೂ ಇಲ್ಲ. ಒಂದು ವೇಳೆ ಪತಿ ತಪ್ಪು ಹೇಳಿದರೂ, ಅದು ನಿನ್ನ ಒಳ್ಳೆಯದಕ್ಕೆ ಎಂದು ಭಾವಿಸು. ಎಂದು ಗೆಳತಿಯರು, ಹಿರಿಯರು ಅವರಿಗೆ ಬೋಧಿಸುತ್ತಿದ್ದರು. ಈ ಉಪದೇಶಗಳನ್ನು ಬಾ ತಪ್ಪದೆ ಪಾಲಿಸುತ್ತಿದ್ದರು. ಆಕೆ ಆರಿಸಿಕೊಂಡ ಆದ್ಯತೆಗಳು ಮತ್ತು ಅದರಂತೆ ನಡೆಯುವ ನಿರ್ಧಾರಗಳು ನಾನು ಬೋಧಿಸಿದ್ದರಿಂದಲೇ ಆಯಿತು ಎಂದು ಹೇಳಲಾರೆ. ತನ್ನ ಆತ್ಮದ ಕೂಗಿಗೂ ಮಹತ್ವ ಕೊಡುವುದು ಒಳ್ಳೆಯದಲ್ಲವೇ ? ತಮಗೆ ಸರಿಕಂಡಿದ್ದನ್ನು ಅವರು ಮಾಡುತ್ತಾ ಹೋದರು.

ಬಾ ರವರು ಆರಾಮಾಗಿ, ೩೦೦-೫೦೦ rounds ದಾರವನ್ನು ಪ್ರತಿದಿನವೂ ಚರಖಾದಲ್ಲಿ ನೂಲುತ್ತಿದ್ದರು. ಅವರಿಗೆ ಈ ‘ಚರಖಾ ಸ್ಪಿನ್ನಿಂಗ್ ಕಾರ್ಯಕ್ರಮ’ ದ ಮಹತ್ವ ತಿಳಿದಿತ್ತು. ಆಗಾಖಾನ್ ಪ್ಯಾಲೇಸ್ ಬಂದಿಗೃಹದಲ್ಲಿ ಅವರಿಗೆ ಚರಖಾ ಬಳಸಲು ಕಷ್ಟವಾಗುತ್ತಿತ್ತು. ಮೊದಲ ಸಲ ಅವರಿಗೆ ಹೃದಯಾಘಾತವಾದಾಗ, ನಾನು ಸಾರಿಸಾರಿ, ‘ಪೂರ್ತಿಯಾಗಿ ರೆಸ್ಟ್ ತೊಗೊಳ್ಳಿ, ಆಯಾಸ ಮಾಡ್ಕೋಬೇಡಿ’ ಅಂತ ಹೇಳ್ತಾನೇ ಇದ್ದೆ. ‘ಚರಖಾ ಬಳಸಲೇ ಬೇಡಿ’ ಎಂದು ಹೇಳಿ ಒಪ್ಪಿಸುವುದು ಬಹಳ ಕಷ್ಟಸಾಧ್ಯವಾಗಿತ್ತು. ಚರಖಾದಲ್ಲಿ ದಾರ ನೂಲುವುದರಿಂದ Heart attack ಹೇಗೆ ಆಗುತ್ತೆ ? ಎಂದು ಅವರ ವಾದ. ಒಂದು ದಿನ ಐ. ಜಿ. ಪಿ.ಯವರು ಕಸ್ತೂರ್ಬಾರನ್ನು ಹೆದರಿಸಲು ಹೇಳಿದರು, ‘ನೀವು ಮಲಗಿ ಆರಾಮ್ ಮಾಡದಿದ್ದರೆ, ನಾವು ನಿಮ್ಮನ್ನು ಯರವಾಡ ಜೈಲಿಗೆ ಕಳಿಸಬೇಕಾಗಬಹುದು’. ಇದನ್ನು ಕೇಳಿದ ತಕ್ಷಣ ಅವರು ಮರು ಮಾತಾಡದೆ ಹೋಗಿ ತಮ್ಮ ಹಾಸಿಗೆಯ ಮೇಲೆ ಸುಮ್ಮನೆ ಮಲಗಿದರು. ಇದೊಂದು ಒಳ್ಳೆಯ ಪ್ರತಿಕ್ರಿಯೆಯಾಗಿತ್ತು, ಎಂದು ಎಲ್ಲರೂ ಸಮಾಧಾನ ಪಟ್ಟುಕೊಂಡರು. ೪-೫ ದಿನಗಳಲ್ಲಿ ಅವರು ಸ್ವಲ್ವ ಹುಷಾರಾದರು. ಚರಖ ಕೆಲಸದಿಂದ ಹೃದಯದಮೇಲೆ ಕೆಟ್ಟಪರಿಣಾಮ ಆಗುತ್ತದೆ ಎಂದು ನಾವು ಎಚ್ಚರಿಸಿದ ಮಾತುಗಳನ್ನು ಅವರು ಎಷ್ಟು ಗಂಭೀರವಾಗಿ ತೆಗೆದುಕೊಂಡರು ಅಂದರೆ, ಮುಂದೆ ಅವರಿಗೆ ಸಮಯ ಕಳೆಯಲು ಚರಖಾ ಉಪಯೋಗಿಸಬಹುದಲ್ಲ ? ಎಂದು ಯಾರಾದರೂ ಹೇಳಿದರೆ, ಆ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುತ್ತಲೇ ಇರಲಿಲ್ಲ. ಒಂದು ಚರಖಾ ಅವರ ಹತ್ತಿರದಲ್ಲೇ ಇತ್ತು. ಆದರೂ ಅದನ್ನು ಪೂರ್ತಿಯಾಗಿ ಬಳಸುತ್ತಿರಲಿಲ್ಲ.

Page 42

24

ಕೆಲವರು ಹೇಳಿದ ಪ್ರಕಾರ ಬಾ ಗೆ ಅಸ್ಪೃಶ್ಯತೆಯನ್ನು ತಡೆಯಲು, ಅಥವಾ ಪೂರ್ತಿಯಾಗಿ ಸಾಧಿಸಲು ಸಾಧ್ಯವಾಗಿಲ್ಲವೆಂದು. ಆದರೆ ನಾನು ನೋಡಿದಂತೆ ಬಾರವರಿಗೆ ಅಸ್ಪೃಶ್ಯತೆಯ ಬಗ್ಗೆ ಯಾವ ಕೆಟ್ಟ ಅಭಿಪ್ರಾಯವೂ ಇರಲಿಲ್ಲ.

೧೯೨೯ ರಲ್ಲಿ ಮೊದಲು ಆಶ್ರಮಕ್ಕೆ ಬಂದಾಗ ಲಕ್ಷ್ಮಿಎಂಬ ಒಬ್ಬ ಹುಡುಗಿಯನ್ನು ನೋಡಿದ್ದೆ. ಬಾ ಮತ್ತು ಬಾಪೂರವರ ಮಗಳಿನ ತರಹವೇ ಅವಳನ್ನು ಕಾಣುತ್ತಿದ್ದರು. ಕಸ್ತೂರ್ ಬಾ ಲಕ್ಷ್ಮಿಗೆ ತಾಯಿಯ ಪ್ರೀತಿಯನ್ನು ತೋರಿಸುತ್ತಿದ್ದರು ನಾನು ಆಶ್ರಮದಿಂದ ಹೊರಗೆ ಹೋದಮೇಲೆ ನನಗೆ ಒಬ್ಬರು, ‘ನೀನು ಭಂಗಿಯ ಮಗಳು ಲಕ್ಷ್ಮಿಯ ಜತೆ ಸ್ನೇಹ ಬೆಳಸಿದ್ದೀಯ ಆಲ್ವಾ ‘? ಎಂದು ಹೀಯಾಳಿಸಿದರು. ನನಗೆ ತಳಮಳವಾಯಿತು. ಆಶ್ರಮದಲ್ಲಿ ನನಗೆ ಭಂಗಿಯಾಗಲಿ ಅವರ ಮಕ್ಕಳಾಗಲಿ ಕಾಣಿಸಲಿಲ್ಲ. ಪುನಃ ಮತ್ತೋರ್ವ ಗೆಳತಿಯ ಪ್ರಶ್ನೆ, ಇದೇ ತರಹದ್ದು ; ಮಹಾತ್ಮಾ ಗಾಂಧಿಯವರು ಹೀನಜಾತಿಯ ಕಸಗುಡಿಸುವವನ ಮಗಳನ್ನು ತಮ್ಮ ಮಗಳಾಗಿ ಸ್ವೀಕರಿಸಿದ್ದು ನಿನಗೆ ಗೊತ್ತಿಲ್ಲವೇ ? ಆಗ ನನಗೆ ಅರಿವಾಗಿದ್ದು ಆಶ್ರಮದಲ್ಲಿ ನಾನು ಕಂಡ ಲಕ್ಷ್ಮಿ, ಬಾರವರ ಸಾಕುಮಗಳೆಂದು. ಸೇವಾಗ್ರಾಮ್ ಆಶ್ರಮದಲ್ಲಿ ಕೆಲಸಮಾಡುತ್ತಿದ್ದ ಹರಿಜನರ ಕೆಲಸಗಾರರನ್ನು ಬಾರವರು ತಮ್ಮ ಮನೆಯ ಸದಸ್ಯರ ತರಹವೇ ಪ್ರೀತಿಯಿಂದ ಕಾಣುತ್ತಿದ್ದರು. ಜೈಲಿನಲ್ಲಿದ್ದಾಗಲೂ ಅವರನ್ನು ನೆನೆಯುತ್ತಿದ್ದರು. ಮಾತು ಬಂದಾಗ, ದೇವರೇ ನಮ್ಮೆಲ್ಲರನ್ನೂ ಸೃಷ್ಟಿಸಿದ್ದಾನೆ ; ಅದರಲ್ಲಿ ಮೇಲು ಕೀಳು ಎನ್ನುವುದರಲ್ಲಿ ಅರ್ಥವಿಲ್ಲ. ಆತರಹದ ಹೀನ ಭಾವನೆ ಒಳ್ಳೆಯದಲ್ಲ. ಬಾ ಗೆ ಕೆಲವು ಹಳೆಯ ಸಂಪ್ರದಾಯಗಳಲ್ಲಿ ಆಸ್ಥೆ ಇತ್ತು. ಬ್ರಾಹ್ಮಣರನ್ನು ಕಂಡರೆ ತುಂಬಾ ಗೌರವ. ಆಗಾ ಖಾನ್ ಪ್ಯಾಲೇಸ್ ನಲ್ಲಿ ಸಿಪಾಯಿಗಳು ನಮಗೆ ಬೇಕಾದ ಕೆಲಸಗಳನ್ನೆಲ್ಲಾ ಮಾಡಿ ಸಹಾಯಮಾಡುತ್ತಿದ್ದರು. ಅವರಲ್ಲಿ ಒಬ್ಬ ಬ್ರಾಹ್ಮಣ ಸಿಪಾಯಿಗೆ ಅಡುಗೆ ಮಾಡಲು ಬರುತ್ತಿತ್ತು. ಅಡುಗೆ ಮನೆಯಲ್ಲಿ ಅವನನ್ನು ಬಾ ಸಹಾಯಕ್ಕೆ ಕರೆಯುತ್ತಿದ್ದರು. ಬಾರವರಿಗೆ ಅವನನ್ನು ಕಂಡರೆ ಪ್ರೀತಿ, ಗೌರವ. ಅವನಿಗೆ ಆಗಾಗ ಹಣ್ಣು-ಹಾಲು ಕೊಡುತ್ತಿದ್ದರು. ಅವನು ತಪ್ಪುಮಾಡಿದಾಗ್ಯೂ ದಂಡಿಸುತ್ತಿರಲಿಲ್ಲ. ಎಷ್ಟೇ ಆಗಲಿ ಅವನು ಬ್ರಾಹ್ಮಣರ ಹುಡುಗ. ಜೈಲಿನಲ್ಲಿ ಧರ್ಮಕಾರ್ಯಗಳನ್ನು ಮಾಡುವುದಂತೂ ಅಸಾಧ್ಯ. ಸಾಧ್ಯವಾದಾಗ ಅವನಿಗೆ ಏನಾದರೂ ಸ್ವಲ್ಪ ತಿನ್ನಲು ಕೊಡುವುದು ಒಳ್ಳೆಯದಲ್ಲವೇ ? ಇದು ಕಸ್ತೂರ್ ಬಾ ರವರ ನಿಲವು.

ಈ ತರಹದ ತಾರತಮ್ಯ ಸಿಪಾಯಿಗಳಿಗೆಲ್ಲ ತಿಳಿದು, ಬ್ರಾಹ್ಮಣ ಸಿಪಾಯಿಯ ಮೇಲೆ ಮಾಡಿದ ದೂರು ಮೇಲಧಿಕಾರಿಗಳ ಹತ್ತಿರದವರೆಗೂ ಹೋಯಿತು. ಕಾನೂನಿನ ಪ್ರಕಾರ ಎಲ್ಲರೂ ಕೆಲಸಮಾಡಿಕೊಡುತ್ತಾರೆ. ಕೆಲವರಿಗೆ ಏಕೆ ಹೆಚ್ಚು ಆದ್ಯತೆ ? ಅಧಿಕಾರಿಗಳು ಕಸ್ತೂರ್ ಬಾರವರಿಗೆ ಎಲ್ಲರನ್ನೂ ಒಂದೇ ತರಹ ಕಾಣಲು ಮನವಿ ಮಾಡಿದರು. ಬಾ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವ ಜಾಯಮಾನದವರಲ್ಲ. ಬ್ರಾಹ್ಮಣ ಸಿಪಾಯಿಗೆ ಗುಟ್ಟಾಗಿ ಏನನ್ನಾದರೂ ತಿನ್ನಲು ಕೊಡುತ್ತಿದ್ದರು. ನನ್ನ ಪಾಲಿನ ತಿಂಡಿಯನ್ನು ಆತನಿಗೆ ಕೊಟ್ಟರೆ ಬೇರೆಯವರು ಏಕೆ ಅಸೂಯೆ ಪಡಬೇಕು ? ಎನ್ನುವುದು ಅವರ ವಾದ.

Page 43

ಮಹಾರಾಜ್, ನೀವು ಒಬ್ಬ ಬ್ರಾಹ್ಮಣರು. ಹೇಳಿ, ಯಾವಾಗ ನಾವು ಮನೆಗೆ ಹೋಗೋಣ ? ಎಂದು ಬಾರವರು ಪ್ರಶ್ನಿಸಿದಾಗ, ಆತನಿಗೆ ಏನೂ ಹೇಳಲು ತೋಚುತ್ತಿರಲಿಲ್ಲ. ಸ್ವಲ್ಪ ಯೋಚಿಸಿ, ನಾನು ಶಾಸ್ತ್ರದ ಪುಸ್ತಕ ನೋಡಿ ಹೇಳುತ್ತೇನೆ. ಎಂದು ಹೇಳಿದ ನಂತರ ನಂತರ, ಅವರು ಏನಾದರೂ, ಹೇಳಿದರೋ ಇಲ್ಲವೋ ತಿಳಿಯದು. ಬೇರೆ ಧರ್ಮಗಳ ಬಗ್ಗೆ ಸಹಿಷ್ಣುತೆ ಇಲ್ಲವೆಂದಲ್ಲ. ಆಗಾಖಾನ್ ಪ್ಯಾಲೇಸ್ ಬಂದೀ ಗೃಹದಲ್ಲಿ ನಾವು ಇದ್ದಾಗ, ಒಂದಿಬ್ಬರು ಮುಸಲ್ಮಾನ್ ಸಿಪಾಯಿಗಳಿದ್ದರು. ಆಗ ಬಾ ಎಲ್ಲರ ಹತ್ತಿರವಿದ್ದಂತೆ ಅವರ ಬಳಿಯೂ ಸ್ನೇಹದಿಂದ ಇದ್ದರು. ಅಡುಗೆ ಮನೆಯಲ್ಲಿ ಕರೆದು ಅವರಿಗೆ ಏನಾದರೂ ಹೇಳಿ ಕೆಲಸ ಮಾಡಿಸುತ್ತಿದ್ದರು. ಹಿಂದೂ ಹಬ್ಬ-ಹರಿದಿನಗಳಲ್ಲಿ ಸಿಹಿ ಹಂಚಿದಂತೆ ಅವರಿಗೂ ಸಿಹಿ, ಹಣ್ಣು-ಹಂಪಲುಗಳನ್ನು ಕೊಡುತ್ತಿದ್ದರು. ಮುಸಲ್ಮಾನರ ಹಬ್ಬಗಳ ದಿನದಂದು ಸಹಿತ. ನಮ್ಮದೇಶದ ಮೇಲೆ ಆಕ್ರಮಿಸಿದ ವಲಸೆಗಾರರು, ಮುಖ್ಯವಾಗಿ ಮುಸಲ್ಮಾನರು ನಮ್ಮ ದೇಶದ ಜನರಮೇಲೆ ನಡೆಸಿದ ದೌರ್ಜನ್ಯದ ಇತಿಹಾಸದ ಕತೆಗಳನ್ನು ಕೇಳಿದಮೇಲೆ ಬಾ ಬಹಳ ನೊಂದುಕೊಳ್ಳುತ್ತಿದ್ದರು. ತಮ್ಮ ಜತೆಯಲ್ಲಿ ಆಶ್ರಮದಲ್ಲಿದ್ದ ಡಾ ಅನ್ಸಾರಿ, ಹಕೀಮ್ ಅಜ್ಮಲ್ ಖಾನ್, ಖಾನ್ ಅಬ್ದುಲ್ ಗಫಾರ್ ಖಾನ್, ಮತ್ತು ಅವರ ಸೋದರ ಡಾ ಖಾನ್ ಸಾಹಿಬ್ ಮೌಲಾನಾ ಅಬ್ದುಲ್ ಕಲಾಂ ಆಝದ್, ಮತ್ತಿತರ ಮುಸ್ಲಿಂ ಗೆಳೆಯರು, ಹಿಂದೂ ಧರ್ಮಿಯರಾದ ಸರ್ದಾರ್ ವಲ್ಲಭ್ ಭಾಯಿ ಪಟೇಲ್, ಸೇಠ್ ಜಮ್ನಾಲಾಲ್ ಬಜಾಜ್, ಮೊದಲಾದವರ ಒಟ್ಟಿಗೆ ಹೊಂದಿಕೊಂಡು ಇರುತ್ತಿದ್ದರು. ಕಸ್ತೂರ್ ಬಾ ಸಹಿತ ಅವರೆಲ್ಲರನ್ನೂ ಯಾವ ಭೇದಭಾವವಿಲ್ಲದೆ ನೋಡಿಕೊಳ್ಳುತ್ತಿದ್ದರು. ಆದರೆ ಆಶ್ಚರ್ಯವೆಂದರೆ, ಇತಿಹಾಸದಲ್ಲಿ ವಿವರಿಸುವ ವಿಷಯಗಳೇ ಬೇರೆಯಾಗಿತ್ತು. ಬಾರವರಿಗೆ ಮತ ಧರ್ಮಗಳ ಬಗ್ಗೆ ತಮ್ಮ ತಲೆಗೆ ಯಾವುದೇ ತರಹದ ಗೊಂದಲ, ತಮ್ಮ ಹಿಂದೂ ಸದಸ್ಯರ ಜತೆ ವ್ಯವಹರಿಸುವಾಗ ಬಂದಿರಲಿಲ್ಲ. ಬಾರವರು, ಬಹಳ ವಿಷಯಗಳನ್ನು ತಿಳಿದುಕೊಂಡಿದ್ದರು. ಯಾರು ತಮ್ಮನ್ನು ಮತ್ತು ಬಾಪುರವರನ್ನು ಒಲಿಸಲು ಧರ್ಮದ ಬಗ್ಗೆ ಅಪಪ್ರಚಾರ ಮಾಡಿದಾಗ, ಬೇಸರಪಟ್ಟುಕೊಂಡು, ಅವರನ್ನು ಕ್ಷಮಿಸುತ್ತಿರಲಿಲ್ಲ.

25

ಕಸ್ತೂರ್ ಬಾ ಮೊದಲಬಾರಿಗೆ ತಮ್ಮ ಅಂತರಾಳದಲ್ಲಾಗುತ್ತಿದ್ದ ತುಮುಲಗಳನ್ನು ವ್ಯಕ್ತಪಡಿಸಿದರು. ಜೈಲಿನಿಂದ ಬಿಡುಗಡೆಯಾದಮೇಲೆ ಎಲ್ಲರೂ ಏನುಮಾಡಬೇಕೆಂಬ ಮಾತು ಬಂತು. ಬಾರವರು, ‘ಯಾರಿಗೆ ಗೊತ್ತು ನಾನು ಬಿಡುಗಡೆಯಾಗಿ ಜೀವಸಹಿತ ಹೊರಗೆ ಹೋಗುವೆನೆಂಬ ಭರವಸೆಯಿಲ್ಲ. ಈಗೇನೋ ನಾನು ನಿಮ್ಮ ಜತೆ ಇದ್ದೇನೆ. ಆದರೆ, ಸಾಯಂಕಾಲ ನಿಮ್ಮಜತೆ ಇರುವೆನೆಂಬ ನಂಬಿಕೆ ನನಗೆ ಇಲ್ಲವಾಗಿದೆ’, ಎನ್ನುವ ಮಾತನ್ನು ಬಾಪು ಹೇಗೋ ಕೇಳಿಸಿಕೊಂಡು, ‘ಯಾಕೆ ಹಾಗೆ ಮಾತಾಡುವಿರಿ ಬಾ ? ಒಂದು ವಿಧದಲ್ಲಿ ಆಲೋಚಿಸಿದರೆ, ನೀವು ಹೇಳುವುದು ಸರಿಯಾಗಿದೆ. ಹಾಗು ಅದು ನಮ್ಮೆಲ್ಲರಿಗೂ ಅನ್ವಯಿಸುತ್ತದೆ. ನೋಡಿ, ಇಲ್ಲಿ ಸುಶೀಲ ಇದ್ದಾಳೆ. ಅವಳು ಈಗತಾನೇ ಎಂ.ಡಿ.ಪದವಿಯನ್ನು ಗಳಿಸಿದ ಯುವ ಡಾಕ್ಟರ್ ಆಗಿದ್ದಾಳೆ. ಆಕೆ ನಮ್ಮ ಜತೆ ಕುಳಿತುಕೊಂಡು ಮಾತಾಡುತ್ತಿದ್ದಾಳೆ. ಬಹುಶಃ ಸಾಯಂಕಾಲ ಅವಳು ನಮ್ಮ ಜತೆ ಇರದಿರಬಹುದು. ಅದೇ ತರಹವೇ ನಮ್ಮ ಪ್ರೀತಿಯ ಗೆಳೆಯ, ಮಹದೇವ್ ನಮ್ಮನ್ನು ಆಗಲಿ ಹೊರಟುಹೋದರು. ನಾವಿಬ್ಬರು ವಯಸ್ಸಾಗಿ ಹಲವು ವರ್ಷಗಳಿಂದ ಕೈಲಿ ಕೆಲಸಮಾಡಲು ಅಶಕ್ತರಾಗಿಯೂ ಇನ್ನೂ ಬದುಕಿದ್ದೇವೆ ; ಆದ್ದರಿಂದ ನೀವು ಅಧೀರತೆಯ ಭಾವನೆಗಳನ್ನು ನಿಮ್ಮ ಮನಸ್ಸಿನಿಂದ ಹೊರಗೆ ಕಿತ್ತೊಗೆಯಬೇಕು. ಸಾಧ್ಯವಾದಷ್ಟು ಧನಾತ್ಮಕವಾಗಿ ಚಿಂತಿಸಿ, ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬೇಕು’. ಈ ತರಹದ ಯೋಜನೆ ಹೇಳಿದಷ್ಟು ಸುಲಭವಾಗಿರಲಿಲ್ಲ. ಹಿಂದೆ ಸರ್ಕಾರ ಬಾರವರನ್ನು ಜೈಲಿನಲ್ಲಿ ಬಂಧನದಲ್ಲಿಟ್ಟಿದ್ದಾಗ, ಅವರ ಜತೆ ಅನೇಕ ಬಂಧಿಗಳಿದ್ದರು. ಆಗ ಅವರು ಅವರೆಲ್ಲರ ಜತೆ ಮಾತುಕತೆಯಾಡುತ್ತಾ ವಿಷಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅವರಲ್ಲಿನ ಕೆಲವು ಅನಾರೋಗ್ಯಪೀಡಿತರು, ಪೋಲೀಸರ ಧೂರ್ತತೆಯಿಂದ ಗಾಯಗೊಂಡವರು, ಮೊದಲಾದವರ ಜತೆ ಒಟ್ಟಾಗಿ ಸೇರಿ, ದೇವರನಾಮ ಹಾಡುತ್ತಾ ಚರಖಾದಲ್ಲಿ ಹತ್ತಿ ದಾರವನ್ನು ನೂಲುತ್ತಾ ಕಾಲ ಹಾಕುತ್ತಿದ್ದರು. ಆಗ ಸಂವಾದಗಳು ಇರುತ್ತಿದ್ದವು. ಜೈಲು ಶಿಕ್ಷೆಗೆ ಕಾಲದ ಒಂದು ಮಿತಿ ಇರುತ್ತಿತ್ತು. ಈ ಸಲ ಬಾರವರ ಜತೆಯಲ್ಲಿ ಇದ್ದ ಕೈದಿಗಳು ಬಹಳ ಕಡಿಮೆ ಜನ. ನಾವೆಲ್ಲಾ ಏನು ಅಗತ್ಯವೋ ಆ ಕೆಲಸಗಳನ್ನು ಮಾಡಲು ಸಹಕರಿಸುತ್ತಿದ್ದೆವು. ನಂತರ ನಮ್ಮ ನಮ್ಮ ಕೆಲಸಗಳಲ್ಲಿ ವ್ಯಸ್ತರಾಗಿರುತ್ತಿದ್ದೆವು. ಆಶ್ರಮದಲ್ಲಿ ಕಸ್ತೂರ್ ಬಾ ರವರ ಗೆಳತಿಯರು ಬಾ ಜತೆ ಮಾತಾಡಲು, ಸಾಯಂಕಾಲ ವಾಕಿಂಗ್ ಹೋಗುವಾಗ ಅವರ ಜತೆ ಸದಾ ಇರುತ್ತಿದ್ದರು. ಈಗ ಅವರಿಲ್ಲದೆ ಬಾರವರಿಗೆ ವಿಪರೀತ ಬೇಸರವಾಗುತ್ತಿತ್ತು. ತಮ್ಮನ್ನು ಬ್ಯುಸಿಯಾಗಿಡಲು ಓದುವುದಕ್ಕೆ, ಬರೆಯಲು ಪ್ರಯತ್ನಮಾಡಿದರೂ, ಬಹಳ ಹೊತ್ತು ಕಳೆಯುವುದು ಕಷ್ಟವಾಗಿ ತೋರುತ್ತಿತ್ತು. ಒಬ್ಬಂಟಿಗರಾದರಂತೂ ತಲೆಯಲ್ಲಿ ಅನೇಕ ವಿಷಯಗಳನ್ನು ತುಂಬಿಕೊಂಡು ದಿಗ್ಭ್ರಾಂತರಾಗುತ್ತಿದ್ದರು.

ಕಸ್ತೂರ್ ಬಾ ರವರಿಗೆ, ಈ ಬಾರಿಯ ಜೈಲು ಬಂಧನ ಮನಸ್ಸಿಗೆ ಬೇಸರ ತಂದಷ್ಟು, ಬೇರೆ ಯಾವ ಸಮಯದಲ್ಲೂ ಆಗಿರಲಿಲ್ಲ. ಸರಕಾರ ವಿನಾ ಕಾರಣ ಎಲ್ಲರನ್ನೂ ಜೈಲಿನಲ್ಲಿ ಬಂಧನಕ್ಕೀಡುಮಾಡಿದ್ದಾರೆ, ಎಂದು ಅವರಿಗೆ ಅನ್ನಿಸಿತ್ತು. ನಿಯತ ಕಾಲಿಕೆಗಳಲ್ಲಿ ಬಾಪೂರವರ ಮೇಲೆ ಸುಳ್ಳು ಪುರಾವೆಗಳನ್ನು ಹೇರಿ ಅದನ್ನು ಪ್ರಕಟಿಸುತ್ತಾರೆ. ಅದೂ ಅಲ್ಲದೆ ಅಷ್ಟೊಂದು ಸಮಯ, ಜೈಲುವಾಸ ಅವರಿಗೆ ಬೇಸರತಂದಿತ್ತು. ಮಹದೇವ್ ದೇಸಾಯ್ ರವರ ನಿಧನದನಂತರ ಅವರಿಗೆ ತಾವೂ ಜೀವಂತವಾಗಿ ಜೈಲಿನಿಂದ ಬಿಡುಗಡೆ ಹೊಂದುವುದು ಅಸಾಧ್ಯವೆಂಬ ನಂಬಿಕೆ ಬಂದಿತ್ತು.

Page 44

ಹಿಂದೆ ಜೈಲಿನಲ್ಲಿದ್ದಾಗ, ಅವರ ಜತೆ ಬಹಳ ಬಂದಿಗಳಿದ್ದರು. ಆ ಕೈದಿಗಳ ಜತೆಗೆ ಸಮಾಲೋಚಿಸಬಹುದಿತ್ತು. ಯಾರಾದರೂ ಅನಾರೋಗ್ಯ ಪೀಡಿತರಾಗಿದ್ದರೆ ಅವರಿಗೆ ಸಹಾಯಮಾಡಬಹುದಿತ್ತು. ಚರಖಾದಲ್ಲಿ ದಾರ ನೂಲಬಹುದಿತ್ತು. ಹಾಡು, ಪ್ರಾರ್ಥನೆಗಳು, ಆಗಾಗ ಇಂಟರ್ವ್ಯೂ ಗಳು ಜರುಗುತ್ತಿದ್ದವು. ಚಿಕ್ಕ ಗ್ರೂಪ್ ಗಳ ನಡುವೆ ಯಾವುದಕ್ಕೂ ಒಂದು ಸಮಯದ ಎಲ್ಲೆ ಇರುತ್ತಿತ್ತು. ಯಾವ ಸೇವೆಯ ಅಗತ್ಯವಿದೆಯೋ ಅದನ್ನು ಮಾಡಿ, ನಮಗೆ ಹೇಗೆ ಬೇಕೋ ಹಾಗೆ ನಡೆದುಕೊಳ್ಳುತ್ತಿದ್ದೆವು. ಬಾಗೆ ಆಶ್ರಮದಲ್ಲಿ ಬೆಳಿಗ್ಯೆ ಸಾಯಂಕಾಲ ಸಿಗುತ್ತಿದ್ದ ಅವರ ಪ್ರೀತಿಯ ಸಹೇಲಿಗಳ ಸಹವಾಸ ಇಲ್ಲದಾಯಿತು. ಏನಾದರೂ ಓದು ಬರಹ ಮಾಡುತ್ತಾ ಹೇಗೋ ಕಾಲ ಕಳೆಯಲು ನಿರ್ಧರಿಸಿದರು. ಅದನ್ನು ಬಹಳ ಸಮಯ ಮಾಡಲಿಕ್ಕಾಗಲಿಲ್ಲ.

ಒಂದು ದಿನ ಬಾಪುರವರ ಮೇಲೆ ಸಿಟ್ಟಿನಿಂದ ಹೇಳಿದರು. ‘ಯಾಕೆ ಇವರು ಬಲಿಷ್ಠ ಬ್ರಿಟಿಷ್ ಸರಕಾರವನ್ನು ಎದುರುಹಾಕಿಕೊಂಡಿದ್ದಾರೆ ? ಎಲ್ಲ ವಿಧಗಳಿಂದಲೂ ಅವರು ಬಲಶಾಲಿಗಳೆಂದು ವಿಶ್ವದಲ್ಲೇ ಹೆಸರುಗಳಿಸಿದ್ದಾರೆ. ಅವರ ವಿರುದ್ಧ ಬಾಪು ಗೆಲ್ಲಬಲ್ಲರೇ’ ? ನಾನು ಬಾಪು ಗೆ ಮಾನವರ ಸಹಾಯ ಅನಗತ್ಯ. ಏನೇ ಆದರೂ ದೇವರೂ ಅಂತ ಒಬ್ಬಾತ ಇದಾನಲ್ಲವೇ ? ಅವರು ದೇವರನ್ನು ಮಾತ್ರ ನಂಬುವವರು. ಆ ದಯಾಮಯ, ಹೇಗೋ ಅವರನ್ನು ಕಾಪಾಡುತ್ತಾನೆ. ಅಯ್ಯೋ, ಆ ದೇವರೂ ಸದ್ಯಕ್ಕೆ ಅವರಿಗೆ ವಿರೋಧವಾಗಿದ್ದಾನೆ. ಇಲ್ಲದಿದ್ದರೆ ಆ ದೇವರು, ಮಹದೇವ್ ಅವರನ್ನು ಕಿತ್ತುಕೊಂಡಿದ್ದೇಕೆ ? ಅಲ್ಲೇ ಇದ್ದ ಗಾಂಧೀಜಿಯವರು ಮಾತು-ಕತೆಯ ಕೊನೆಯ ಭಾಗವನ್ನು ಕೇಳಿಸಿಕೊಂಡರು. ಮಹದೇವ್ ಅವರ ಮರಣ ಮಾತ್ರ ನನಗೆ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಪರ್ವದಲ್ಲಾದ ಒಂದು ನೈಜ ಬಲಿದಾನವೆಂದು ನನ್ನ ಭಾವನೆಯೆಂದು ಹೇಳಿದರು. ಅಂತಹ ಶ್ರೇಷ್ಟ ಬಲಿದಾನಗಳು ಖಂಡಿತ ಫಲಪ್ರದವಾಗುವುದರಲ್ಲಿ ಸಂದೇಹವಿಲ್ಲ. ಬಾ ಮಾತ್ರ ಇಂತಹ ಮಾತುಗಳಿಂದ ಪ್ರಭಾವಿತರಾಗುತ್ತಿರಲಿಲ್ಲ. ಒಂದು ದಿನ ಈಗಿರುವುದಕ್ಕಿಂತ ಹೆಚ್ಚು ನಿರುತ್ಸಾಹದಿಂದಿದ್ದರು. ಬಾಪುರವರಮೇಲೆ ಅವರಿಗೆ ಕೆಟ್ಟ ಕೋಪ ಬಂದಿತ್ತು. “ನಾನು ನಿಮಗೆ ಎಷ್ಟು ಸಲ ಹೇಳಿದ್ದೇನೆ, ಸರ್ಕಾರದ ಜತೆಗೆ ಜಗಳವಾಡಬೇಡಿ ಎಂದು “ ನನ್ನ ಮಾತನ್ನು ನೀವು ಕೇಳುತ್ತಲೇ ಇಲ್ಲ. ಈಗ ನಾವೆಲ್ಲರೂ ಅದಕ್ಕೆ ದಂಡ ಸಲ್ಲಿಸಬೇಕಾಗಿದೆ. ಸರ್ಕಾರಕ್ಕೆ ಇರುವ ದೈತ್ಯ ಶಕ್ತಿಯನ್ನು ಬಳಸಿ ನಾಗರೀಕರನ್ನೆಲ್ಲ ಕತ್ತರಿಸಿ ಹಾಕುತ್ತಾರೆ.”

Page 45

‘ಎಷ್ಟು ದಿನ ಅಂತಾ ಅವರ ಕೈಲಿ ಯೇಗಕ್ಕಾಗುತ್ತೆ ನೀವೇ ಹೇಳಿ ? ಇದಕ್ಕೆಲ್ಲ ಕೊನೆ ಎಲ್ಲಿದೆ ‘? ಎಂದು ಕಸ್ತೂರ್ಬಾ ಕೇಳಿದ ಪ್ರಶ್ನೆಗೆ, ಬಾಪು ಏನೋ ಸಮಝಾಯಿಷಿ ಹೇಳಲು ಪ್ರಯತ್ನಿಸಿದರು. ಆದರೆ ಯಾವುದನ್ನೂ ಬಾ ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಗಾಂಧೀಜಿಯವರೇ ತಮ್ಮ ದನಿಯನು ತಗ್ಗಿಸಿ, ‘ಈಗ ನಾನು ಏನ್ಮಾಡ್ಬೇಕು ಅನ್ನೋದನ್ನ ಹೇಳು. ನಾವಿಬ್ಬರೂ ಸರ್ಕಾರಕ್ಕೆ ನಮ್ಮನ್ನು ಕ್ಷಮಿಸಿ, ಎಂದು ಕ್ಷಮಾಪಣೆ ಕೇಳಬೇಕೆನ್ನುವೆಯಾ’ ? ಇದನ್ನು ಕೇಳಿಸಿಕೊಂಡ ಬಾ ಇನ್ನೂ ವ್ಯಗ್ರರಾದರು. ‘ನಾನ್ಯಾಕೆ ಯಾರನ್ನಾದರೂ ಕ್ಷಮಾಪಣೆ ಕೇಳ್ಲಿ ? ನೀನು ಒಪ್ಪಿಗೆ ಕೊಟ್ಟರೆ, ನಾನೊಬ್ಬನೇ ತಪ್ಪೊಪ್ಪಿಗೆ ಒಪ್ಪಿಸುತ್ತೇನೆ’. ಇಂತಹ ಮಾತುಗಳು ಬಾರವರಿಗೆ ತಡೆದುಕೊಳ್ಳಲು ಆಗುತ್ತಿರಲಿಲ್ಲ. ಇನ್ನೂ ಕೋಪ ಆರಿರಲಿಲ್ಲ. ‘ನೋಡಿ, ಮುಗ್ದ ಎಳೆಯ ಹುಡುಗಿಯರು ಜೈಲಿನಲ್ಲಿ ಒದ್ದಾಡುತ್ತಿದ್ದಾರೆ. ಅವರ್ಯಾರೂ ಕ್ಷಮೆ ಕೇಳುತ್ತಿಲ್ಲ. ನೀವೇ ಹೇಳಿ ? ಈಗ ಏನೂ ಮಾಡೋ ಹಾಗಿಲ್ಲ. ನೀವು ಮಾಡ್ತಿರೋದನ್ನು ಅನುಭವಿಸದೇ ವಿಧಿಯಿಲ್ಲ ! ಆಗ್ಲಿ. ಕಷ್ಟ ಅನ್ಭವಿಸೋಣ. ಮಹದೇವ್ ಅಂತೂ ಈಗಿಲ್ಲ. ಮುಂದಿನದು ನನ್ನ ಸರದಿ’. ಗಾಂಧೀಜಿಯವರು ಏನೂ ಮಾತಾಡನೆ ಮೌನವಾಗಿ ಕಸ್ತೂರ್ ಬಾ ರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಬಾ ಹೀಗೆ ರೇಗಿದಾಗ ಬಾಪು ‘ಕಿಸಕ್’ ಅನ್ನದೆ ಸುಮ್ನೆ ಇರ್ತಿದ್ರು.

ಕೆಲವು ದಿನಗಳು ಕಳೆದ ನಂತರ ಬಾ ತಮ್ಮ ಪತಿಯ ಹತ್ತಿರ ಹೋಗಿ ತಮ್ಮ ಹಳೆಯ ವಿಚಾರವನ್ನು ಚರ್ಚಿಸಿದರು. ಬಾಪು, ಇಂಗ್ಲಿಷ್ನೋರ್ನ್ನು ನೀವು ಯಾಕೆ ತೊಲಗಿ, ಎಂದು ಕಟುವಾಗಿ ಹೇಳ್ತೀರಿ ? ನಮ್ಮ ದೇಶದಲ್ಲಿ ಜಾಗಕ್ಕೇನು ಕಡಿಮೆಯೇ ? ನಾವೆಲ್ಲಾ ಒಟ್ಗೆ ಯಾಕ್ಇರ್ಬಾರ್ದು ? ಇಲ್ಲೇ ಇರಕ್ಇಷ್ಟ ಇದ್ರೆ ಇರ್ಲಿ ಬಿಡಿ. ನಮ್ಮ ಅಣ್ಣತಮ್ಮಂದಿರಂತೆ ಇರಲಿ. ಇದನ್ನು ಕೇಳಿಸಿಕೊಂಡ ಬಾಪೂರವರು, ನಾನ್ಬೇರೆ ಏನ್ಹೇಳ್ದೆ ? ಬಾಪು ಉತ್ತರಿಸಿದರು. ಅವರು ಒಡೆಯರ ತರಹ ಇರೋದ್ಬೇಡ ; ಬೇಕಾದ್ರೆ ಹೋಗ್ಲಿ. ನಮ್ಮ ಮೇಲೆ ದಬ್ಬಾಳಿಕೆ ನಡೆಸೋದ್ಬಿಟ್ರೆ, ಅವರ್ಮೇಲೆ ನಮ್ಗೇನೂ ವೈಮಸ್ಯವಿಲ್ಲ’.
ಓ ಹೌದು. ಅವರು ನಮ್ಮನ್ನು ಆಳಬಾರದಲ್ವ ? ಬಾ ವ್ಯಂಗ್ಯವಾಗಿ ನುಡಿದರು. ‘ಅವರಿಗೆ ಇಷ್ಟವಾದ್ರೇ ನಮ್ಜತೆ ಸಂತೋಷವಾಗಿ ನಮ್ಅಣ್ಣ ತಮ್ಮಂದಿರ ತರಹ ಇರ್ಬೋದು’.

ಬಾ ತಮ್ಮ ಪತಿ ಏನಾದರೂ ಹೊಸವಿಚಾರ ಹೇಳಿದರೆ, ತಕ್ಷಣ ಮಾರನೆಯ ದಿನ,ನನ್ನ ಜತೆ ಅವರಿಗೆ ನಾನು ಮಸಾಜ್ ಮಾಡುತ್ತಿರುವ ಸಮಯದಲ್ಲಿ ಹಂಚಿಕೊಳ್ಳುತ್ತಿದ್ದರು. ಅದೇ ತರಹ, ಏನಾದರೂ ಹೊಸ ಸಮಾಚಾರ ಗೊತ್ತಾದರೆ, ನಮ್ಮೆಲ್ಲರಿಗೂ ಹೇಳುತ್ತಿದ್ದರು. ಒಂದು ದಿನ ಬಾರವರಿಗೆ ಪಾರ್ಸಿ ಜನ ಭಾರತಕ್ಕೆ ಹೇಗೆ ವಲಸೆ ಬಂದರು ಎನ್ನುವ ವಿಚಾರ ತಿಳಿಯಿತು. ಸಾಯಂಕಾಲ ಪಾರ್ಸಿ Superintendent ಮಿ. ಕಟೇಲಿ ವಿಸಿಟ್ ಮಾಡಲು ಬಂದಾಗ, ಕಟೇಲಿ ಸಾಬ್, ನಿಮಗೆ ಗೊತ್ತೇ, ಇಂಡಿಯಾಕ್ಕೆ ಪಾರ್ಸಿಗಳು ಹೇಗೆ ಬಂದರು ಅನ್ನೋ ವಿಚಾರ ? ಪುಸ್ತಕದಲ್ಲಿ ಎಲ್ಲ ವಿಚಾರಗಳನ್ನೂ ವಿವರವಾಗಿ ಕೊಟ್ಟಿದಾರೆ ! ಕಟೇಲಿಯವರು ಒಬ್ಬ ಸದ್ಗೃಹಸ್ಥರು. ಬಾರನ್ನು ನೋಡಿದಮೇಲೆ ಅವರಿಗೆ ತಮ್ಮ ವಯಸ್ಸಾದ ಪ್ರೀತಿಯ ತಾಯಿಯ ನೆನಪಾಯಿತು. ಬುದ್ಧಿವಂತರಾದ ಅವರು, ಬಾ ಮನಸ್ಸಿಗೆ ನೋವಾಗದಂತೆ ಅವರು ಹೇಳಿದ ಪ್ರಸಂಗವನ್ನು ಮನಸ್ಸಿಟ್ಟು ಕೇಳಿ ತಲೆತೂಗಿದರು.

ಮಾರನೆಯ ದಿನ ಮಸಾಜ್ ಮಾಡುತ್ತಿದ್ದಾಗ ಬಾ ನನ್ನನ್ನುದ್ದೇಶಿಸಿ, ‘ಸುಶೀಲಾ, ಈ ಬ್ರಿಟಿಷ್ ಜನ ಬಹಳ ಕೇಡಿ ಬುದ್ಧಿಯವರು. ಬಾಪು ಅವರಿಗೆ ನಮ್ಮಗಳ ಜತೆ ಸೋದರರಂತೆ ಇರಲು ಬೇಡಿದರಂತೆ. ಅವರಿಗೆ ಅದು ಇಷ್ಟವಿಲ್ಲವಂತೆ. ನಮ್ಮನ್ನು ಆಳುವ ಮನಸ್ಸು ಅವರದು. ನಮ್ಮ ದೇಶದ ಸಂಪತ್ತನ್ನು ಲೂಟಿಮಾಡಿ, ತಮ್ಮ ದೇಶಕ್ಕೆ ಸಾಗಿಸುವುದು ಅವರ ಮುಖ್ಯ ಉದ್ದೇಶವಂತೆ. ಅದಕ್ಕಾಗಿಯೇ ಬಾಪು ಮತ್ತು ದೇಶಭಕ್ತರನ್ನೆಲ್ಲಾ ಜೈಲಿನಲ್ಲಿ ಬಂಧನದಲ್ಲಿ ಇಟ್ಟಿದ್ದಾರೆ’. ಕೋಟ್ಯಾಂತರ ಜನ ಹಿಂಸೆಯನ್ನು ಅನುಭವಿಸುವಂತಾಗಿದೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Page 46

26

ಯಾವ ಸ್ಥಳದಲ್ಲಿ ಉಪವಾಸ ಮಾಡಬೇನ್ನುವುದನ್ನು ಆಗಸ್ಟ್ ತಿಂಗಳಿನಲ್ಲಿ ಅರೆಸ್ಟ್ ಮಾಡುವ ಮೊದಲೇ ಎಲ್ಲರಿಗೂ ಹೇಳಿದ್ದರು. ಇನ್ನೂ ಅರೆಸ್ಟ್ ಆಗುತ್ತಿದ್ದಂತೆಯೇ ಗಾಂಧೀಜಿಯವರು ಉಪವಾಸ ಪ್ರಾರಂಭಿಸಬಹುದೆಂದು ಕೆಲವರು ಗಾಭರಿಯಾಗಿದ್ದರು. ಮಹದೇವ್ ದೇಸಾಯ್ ರವರು ಜೈಲಿಗೆ ಸೇರಿದಮೇಲೂ ೬ ದಿನ ಜೀವಿಸಿದ್ದರು. ತಮಗಿಂತ ಬಾಪು ಈ ಉಪವಾಸವನ್ನು ಹೇಗೆ ಸಹಿಸುವರು ಎನ್ನುವುದು ಅವರಿಗೆ ಚಿಂತೆಯಾಗಿತ್ತು.

ಮಹದೇವ್ ನಿಧನದ ಬಳಿಕ, ಮುಂದೆ ಗಾಂಧೀಜಿಯವರ ಉಪವಾಸ ಮಾಡುವ ಕ್ರಮವನ್ನು ಬದಲಿಸಬೇಕಾಯಿತು. ಮಹದೇವ್ ರ ಮರಣ ಸ್ವಾತಂತ್ರ್ಯ ಸಂಗ್ರಾಮದ ಅಧ್ಯಾಯದಲ್ಲಿ ಒಂದು ಮಹತ್ವದ ತ್ಯಾಗವಾಗಿತ್ತು. ಅದರ ಪರಿಣಾಮ ರಾಷ್ಟ್ರವನ್ನು ಸ್ವರಾಜ್ಯದೆಡೆಗೆ ಮುಂದಕ್ಕೆ ಹೋರಡುವ ನಿಟ್ಟಿನಲ್ಲಿ ಹುಡುಕಾಡುವ ಮಾರ್ಗವಾಗಿತ್ತು. ಸಮಯ ಕಳೆದಂತೆ, ಜನರು ಅನುಭವಿಸುವ ಕಷ್ಟ ಕಾರ್ಪಣ್ಯಗಳು, ರಾಷ್ಟ್ರ ಎದುರಿಸುತ್ತಿರುವ ಬರಗಾಲದ ನ್ಯೂಸ್, ಸರ್ಕಾರದ ದಬ್ಬಾಳಿಕೆ, ಬಾಪೂರವರಿಗೆ ತಲೆಭಾರವಾಗಿ ಪರಿಣಮಿಸಿತ್ತು. ಮೊದಲಿನ ನಗು, ಹಾಸ್ಯ, ಅವರ ಮುಖದಲ್ಲಿ ಕಾಣಿಸುತ್ತಿರಲಿಲ್ಲ. ಯಾವಾಗಲೂ ಯೋಚನೆ, ಆತ್ಮ ವಿಶ್ಲೇಷಣೆ ನಡೆಸುತ್ತಿರುವುದನ್ನು ಕಾಣುತ್ತಿದ್ದೆವು. ಹೊರಗೆ ಆಗುತ್ತಿರುವ ಅನ್ಯಾಯ ಮತ್ತು ಕಗ್ಗೊಲೆಗಳನ್ನು ನೋಡಿಕೊಂಡು ಸುಮ್ಮನೆ ಇರಲು ಹೇಗೆ ಸಾಧ್ಯ ? ಜೈಲಿನ ಸಲಾಕೆಗಳ ಹಿಂದೆ ತಮ್ಮ ಜೀವನವನ್ನೆಲ್ಲ ಕಳೆಯುತ್ತಿರುವ ಸ್ವಾತಂತ್ರ್ಯ ಸೇನಾನಿಗಳಿಗೆ ನ್ಯಾಯ ಒದಗಿಸಬೇಡವೇ ? ಸರಕಾರಕ್ಕೆ ಅವರು ದೇಶವಾಸಿಗಳ ವಿರುದ್ಧ ಮಾಡುತ್ತಿರುವ ಅನ್ಯಾಯ ಮೊದಲಾದವುಗಳನ್ನು ಮನದಟ್ಟು ಮಾಡುವುದಾದರೂ ಹೇಗೆ ? ಇವುಗಳಿಗೇನಾದರೂ ಪರಿಹಾರ ಒದಗಿಸಬೇಕಾದರೆ, ತಮಗೆ ದಿಗಂತದಲ್ಲಿ ಕಾಣಿಸುತ್ತಿರುವುದು, ಕೇವಲ ಉಪವಾಸ ಸತ್ಯಾಗ್ರಹವೊಂದೇ !

೧೯೪೨ ಡಿಸೆಂಬರ್ ೨೮ ಬಾಪೂರವರ ಮೌನದಿನ ಆಚರಣೆಯ ದಿನವಾಗಿತ್ತು. ವೈಸ್ ರಾಯ್ ರಿಗೆ ಒಂದು ಕಾಗದ ಬರೆದರು. ಬಾರವರಿಗೆ ಮಾರನೆಯದಿನ ತಮ್ಮ ಪತಿ ಬರೆದಿರುವ ಕಾಗದದ ಬಗ್ಗೆ ವಿಷಯ ತಿಳಿಯಿತು. ಏನು ವಿಷಯ ಎನ್ನುವುದು ಅವರಿಗೆ ಹೇಗೆ ತಿಳಿಯಬೇಕು ? ಬಾಪು ಹಾಗೆ ಪತ್ರಬರೆಯುವ ಹಿಂದೆ ಏನೋ ನಿಗೂಢತೆ ಅಡಗಿದೆ, ಎನ್ನುವ ವಿಷಯ ಅವರು ಮನಗಂಡಿದ್ದರು. ‘ಏನ್ಬೇಕಾದರೂ ಬರೀರಿ ನನಗೆ ಆಪತ್ತಿಯಿಲ್ಲ. ಆದರೆ ಮತ್ತೆ ಉಪವಾಸ ಮಾಡ್ತೀನಿ, ಅನ್ನೋ ವಿಷಯ ಮಾತ್ರ ಬರೀಬೇಡಿ’. ಗಾಂಧೀಜಿಯವರಿಗೆ ನಗು ಬಂತು. (ನಿಜವಾಗಿ ಅವರು ಉಪವಾಸದ ವಿಷಯವನ್ನೇ ಮುಖ್ಯ ಮುದ್ದೆಯಾಗಿ ತಿಳಿಸಿ ಬರೆದಿದ್ದರು) ನಾವೆಲ್ಲ ಆ ವಾಕ್ಯಗಳನ್ನು ಹೊಡೆದುಹಾಕಿ, ಎಂದು ಬೇಡಿಕೆ ಸಲ್ಲಿಸಿದೆವು. ಯಾರಿಗೆ ಗೊತ್ತು ನಿಮ್ಮ ಲೆಟರ್ ನೋಡಿದಕೂಡಲೇ ಸರಕಾರಕ್ಕೆ ತಮ್ಮ ತಪ್ಪಿನ ಅರಿವಾಗಿ ಅದನ್ನು ಸುಧಾರಿಸಲೂ ಬಹುದು. ಏನೇ ಆಗಲಿ, ಸರಕಾರದ ಮುಂದೆ ಯಾವಾಗಲೂ ಉಪವಾಸದ ಹೆದರಿಕೆ ಒಡ್ಡಿ, ನೀವೇನೋ ಸಾಧಿಸುತ್ತಿದ್ದೀರಿ, ಎಂದು ಹೇಳಲು ಅವಕಾಶ ಕೊಡದಂತೆ, ಸ್ವಲ್ಪ ಬುದ್ಧಿ ಉಪಯೋಗಿಸಿ ಬರೆಯಿರಿ’. ಗಾಂಧೀಜಿಯವರಿಗೆ ಈ ಸಲಹೆ ಒಳ್ಳೆಯದೆಂದು ಅನ್ನಿಸಿತು. ಹೊಸವರ್ಷದ ಸಂಭ್ರಮವನ್ನು ಆಚರಿಸುವ ಹಿನ್ನೆಲೆಯಲ್ಲಿ, ತಮ್ಮ ಸ್ವಂತ ಕೈಬರಹದಲ್ಲಿ ಆ ಪತ್ರ ಬರೆದು ಪೋಸ್ಟ್ ಮಾಡಲು ಕೊಟ್ಟರು. ಈ ನಿರ್ಣಯಕ್ಕೆ ಬರುವ ಮೊದಲು ಬಹಳ ಸಮಯ ಧ್ಯಾನ, ಆತ್ಮಾವಲೋಕನದಲ್ಲಿ ಕಳೆದರು. ಈ ಸಮಯದಲ್ಲಿ ಮೀರಾಬೆನ್ ಬಂದು ಬಾಪುಗೆ ಮಾನಸಿಕವಾಗಿ ಬಹಳ ಅಸ್ಥಿರತೆ ಆಗಿದೆ. ಶಾಂತಿ, ನೆಮ್ಮದಿ, ಸಿಗಲು ಉದ್ಯಾನದಲ್ಲಿನ ಮಾವಿನ ಮರದ ಕೆಳಗೆ ಒಂದು ಕುಟೀರವನ್ನು ಅವರಿಗಾಗಿ ಕಟ್ಟಿಕೊಡೋಣವೆಂದು ಸಲಹೆ ಮಾಡಿದರು.

Page 47

ಆ ಸಮಯಕ್ಕೆ ಎಲ್ಲಿಂದಲೋ ಅಲ್ಲಿಗೆ ಬಂದ ಬಾ ಅವರಿಗೆ ಬೇರೆ ಕುಟೀರವೇಕೆ ಬೇಕು ? ಅವರು ಎಲ್ಲಿದ್ದರೂ ಶಾಂತಿ ಸಮಾಧಾನಗಳನ್ನು ಅನುಭೂತಿ ಮಾಡಿಕೊಳ್ಳಬಲ್ಲರು. ಬಾಪು, ನಾನು ಅಪೇಕ್ಷಿಸುವ ಮೌನ ವಾತಾವರಣ ಎಲ್ಲದಕ್ಕಿಂತ ಭಿನ್ನವಾದದ್ದು. ಏನೇ ಆದರೂ ಬಾ ರವರಿಂದ ನಾನು ದೂರವಿರಲಾರೆ. ಹಾಗೆ ನಾನು ಇಚ್ಛಿಸುವವನೂ ಅಲ್ಲ. ನನ್ನ ರೂಮಿನಲ್ಲೇ ನಾನು ಇರುತ್ತೇನೆ.

ವೈಸ್ರಾಯ್ ಜತೆ ಮಹಾತ್ಮಾಗಾಂಧಿಯವರ ಪತ್ರ-ವ್ಯವಹಾರ ಮುಂದುವರೆಯುತ್ತಿದ್ದಂತೆ, ಉಪವಾಸದ ದಿನಗಳು ಹತ್ತಿರ ಬರುತ್ತಿದ್ದವು. ಸರಕಾರ ಅಧಿಕಾರದ ಅಮಲಿನಲ್ಲಿತ್ತು. ಗಾಂಧಿಯವರ ಯಾವ ವಿಚಾರಗಳನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಉಪವಾಸದ ಮಾತು ಬಂದಾಗಲೆಲ್ಲ ನಮ್ಮೆಲ್ಲರಿಗೆ ಬಹಳ ಆತಂಕವಾಗುತ್ತಿತ್ತು. ಈಗ ಮೊದಲಿನ ತರಹ ಬಾಪೂರವರ ದೇಹಸ್ಥಿತಿ ಉಪವಾಸಗಳನ್ನು ತಡೆದುಕೊಳ್ಳುವ ಶಕ್ತಿಯಲ್ಲಿರಲಿಲ್ಲ. ಅಣ್ಣ ಪ್ಯಾರೇಲಾಲ್ ನನ್ನ ಬಳಿಗೆ ಬಂದು, ಇಂದಿನ ಅವರ ಸ್ಥಿತಿಯಲ್ಲಿ ಬಾಪು ಎಷ್ಟು ದಿನ ಉಪವಾಸ ಸಹಿಸಬಲ್ಲರು ? ಎಂದು ಪ್ರಶ್ನಿಸಿದ. ಯಾವುದನ್ನೂ ನಿಖರವಾಗಿ ಹೇಳುವುದು ಕಷ್ಟ. ೧೯೩೮ ರಲ್ಲಿ ರಾಜಕೋಟ್ ನಲ್ಲಿ ಮಾಡಿದ ಉಪವಾಸದ ಸಮಯದಲ್ಲಿ ಐದನೆಯ ದಿನವೇ ಅವರಿಗೆ ಬಹಳ ಕಷ್ಟವಾಗಿತ್ತು. ಅದನ್ನು ನೋಡಿದಮೇಲೆ, ಅವರಿಗೆ ಹೆಚ್ಚು ಸಮಯ ಉಪವಾಸ ವ್ರತ ಒಳ್ಳೆಯದಲ್ಲ ಎನ್ನುವ ಮಾತನ್ನು ಒತ್ತಿಹೇಳುತ್ತಾ ಸರೋಜಿನಿ ನಾಯಿಡುರವರು, ಇನ್ನುಮೇಲೆ ಬಾಪು ಉಪವಾಸಗಳನ್ನು ನಿಲ್ಲಿಸಬೇಕೆಂದು ಸಲಹೆ ಮಾಡಿದರು. ಈಗ ಬಾಪೂರವರಿಗೆ ವಯಸ್ಸೇನು ಕಡಿಮೆಯಾಗಿದೆಯೇ ? ದೇಹದಲ್ಲಿ ತಡೆದುಕೊಳ್ಳುವ ಶಕ್ತಿ ಕುಗ್ಗಿದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುವ ಸಮಯವಿದಲ್ಲವೆಂದು ಹೇಳುವಾಗ ಅವರ ಮುಖದಲ್ಲಿ ಆತಂಕ ಮತ್ತು ಉದ್ವೇಗ ಕಾಣಿಸುತ್ತಿತ್ತು.

ಇವೆಲ್ಲವನ್ನೂ ಗಮನಿಸುತ್ತಿದ್ದ ಬಾರವರು, ಚಿಂತಿತರಾದರು. ಸರೋಜಿನಿ ನಾಯಿಡು ಅವರನ್ನು ಪ್ರೀತಿಯಿಂದ ಸಂತೈಸುತ್ತಾ ಬಾಪುರವರಿಗೆ ಒಂದುವೇಳೆ ದೈವಾದೇಶವೇನಾದರೂ ಬಂದರೆ ಮಾತ್ರ ಉಪವಾಸವನ್ನು ಮಾಡುವುದಾಗಿ ಹೇಳಿದ್ದಾರೆ. ಇಲ್ಲಿಯವರೆಗೆ ಇನ್ನೂ ಅಂತಹ ಆದೇಶವೇನೂ ಬಂದಿಲ್ಲವೆಂದು ನನಗೆ ತಿಳಿಯಿತು. ಒಂದುವೇಳೆ ಬಾಪುನೇ ಆ ತರಹದ ಆಜ್ಞೆ ಬಂದಿದೆ, ಅದು ನನ್ನಿಂದಲೇ ಆಗಬೇಕು ಎಂದು ಪ್ರತಿಪಾದಿಸಿದರೆ, ಎನ್ನುವುದು ನನ್ನ ಪ್ರಶ್ನೆ, ನಮ್ಮನ್ನೆಲ್ಲಾ ಕಾಡುತ್ತಿತ್ತು.

ಬಾಪು ಪ್ರತಿದಿನವೂ ಮದ್ಯಾನ್ಹ ಅರ್ಧ ಗಂಟೆ ಧ್ಯಾನ ಮಾಡುತ್ತಿದ್ದರು. ಕಸ್ತೂರ್ ಬಾ ಸಹಿತ ಬೆಳಿಗ್ಯೆ ಸ್ನಾನದ ನಂತರ ತುಳಸಿ ಗಿಡದ ಮುಂದೆ ಕುಳಿತು ಪೂಜಿಸುತ್ತಿದ್ದರು. ಪತಿಯ ದೀರ್ಘಾಯುಸ್ಸು ಮತ್ತು ಯಶಸ್ಸಿಗೆ ದೇವರಲ್ಲಿ ಮೊರೆಯಿಡುತ್ತಿದ್ದರು.
ಹೀಗೆ ನಿರಂತರವಾದ ಚಿಂತೆಯಿಂದ ಬಾರವರ ಮಾನಸಿಕ ಸ್ಥಿತಿ ಕುಗ್ಗಿತು. ಅವರು ಮೀರಾಬೆನ್, ಸರೋಜಿನಿ ನಾಯಿಡುರ ಜತೆಯಲ್ಲಿ ಪ್ರತಿ ಶನಿವಾರವೂ ಜೊತೆಗೂಡಿ ಮಹದೇವ್ ದೇಸಾಯ್ ರವರ ಸಮಾಧಿ ಸ್ಥಳಕ್ಕೆ ಹೋಗಿ ಪುಷ್ಪಾಂಜಲಿ ಸಲ್ಲಿಸಿ ಬರುತ್ತಿದ್ದರು. ಇದನ್ನು ಕೆಲವು ಸಲ ಮಾಡಲು ಆಗುತ್ತಿರಲಿಲ್ಲ. ಬಾರವರಿಗೆ ಸ್ವಲ್ಪ ದೂರ ನಡೆಯುವುದೂ ಕಷ್ಟವಾಗುತ್ತಿತ್ತು. ಹೀಗಿರುವಾಗ ಉಪವಾಸದ ಸಮಯದಲ್ಲಿ ಹೇಗೆ ನಿಭಾಯಿಸುವರೆಂದು, ನನಗೆ ಆತಂಕವಾಗುತ್ತಿತ್ತು. ಇನ್ನು ಮೇಲೆ ದೇಹದಂಡನೆಯ ಕ್ರಮಗಳನ್ನು ಬಿಟ್ಟುಬಿಡಿ, ಎಂದು ಹೇಳಿದೆವು. ನಾವೆಲ್ಲ ಒಟ್ಟಿಗೆ ಸೇರಿ, ಬಾಪು ಹತ್ತಿರ ಹೋಗಿ, ‘ನೋಡಿ ನಿಮ್ಮ ಉಪವಾಸ ನಿಮ್ಮ ಪತ್ನಿಗೆ ಹೊರೆಯಾಗಿದೆ ಅವರನ್ನು ನೀವು ಸಾಯಿಸುತ್ತಿದ್ದೀರಿ’, ಎಂದು ಕಟುವಾಗಿ ಹೇಳಿದೆವು. ಅದಕ್ಕೆ ಬಾಪು ನಗುತ್ತಾ, ‘ನಾನು ಆಕೆಯನ್ನು ಬಲ್ಲೆ ; ನಿಮಗಿಂತ ಚೆನ್ನಾಗಿ’, ಎಂದು ಸಮರ್ಥಿಸಿಕೊಂಡರು.

Page 48

‘ಬಹುಶಃ ನಿಮಗೆ ಆಕೆಯ ಕಷ್ಟ ಸಹಿಷ್ಣುತೆ ಹಾಗೂ ಧರ್ಯ, ಗೊತ್ತಿಲ್ಲ. ನಿಜವಾಗಿ ಆಕೆಯ ಸಾಮರ್ಥ್ಯ ನನಗೆ ಚೆನ್ನಾಗಿ ಗೊತ್ತು. ೬೨ ವರ್ಷ ಜೊತೆಯಲ್ಲಿ ಸಂಸಾರ ಮಾಡಿದ ನನಗೆ ಚೆನ್ನಾಗಿ ಅರ್ಥವಾಗಿದೆ. ನಿಜವಾಗಿ ಹೇಳಬೇಕೆಂದರೆ ನಿಮ್ಮೆಲ್ಲರಿಗಿಂತ ಆಕೆಯ ಕಷ್ಟಸಹಿಷ್ಣುತೆ ಹೆಚ್ಚು’. ‘ಹರಿಜನ್ ಉಪವಾಸ ಸತ್ಯಾಗ್ರಹ ಮಾಡಿದಾಗ ಬಾನೂ ನನ್ನ ಜೊತೆಯಲ್ಲಿ ಇದ್ದರಲ್ಲ. ನನಗೆ ಬದುಕುವ ನಂಬಿಕೆಯನ್ನೇ ಕಳೆದುಕೊಂಡಾಗ, ಇನ್ನೇನು ನನ್ನ ಕೆಲವು ವಸ್ತುಗಳನ್ನು ಆಸ್ಪತ್ರೆಯ ನೌಕರರಿಗೆ ದಾನಮಾಡಲು ನಿರ್ಧರಿಸಿದಾಗ, ಬಾನೇ ಮುಂದೆ ಬಂದು ಎಲ್ಲರಿಗೂ ದಾನಮಾಡಿದರು. ನಿಜ ಹೇಳಬೇಕೆಂದರೆ, ಆಗ ಅವರ ಕಣ್ಣಿನಲ್ಲಿ ಒಂದು ಹನಿ ಸಹಿತ ನೀರಿರಲಿಲ್ಲ’.

೧೯೩೩ ರ ಬಾರವರ ದಿನಚರಿಯಲ್ಲಿ ಒಂದು ವಾಕ್ಯವನ್ನು ಬರೆದಿದ್ದರು ಅದು ಹೀಗಿದೆ. ‘ನಾನು ಸ್ನಾನಮಾಡಿದ ಬಳಿಕ ಬಾಪು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಹೋದೆ. ನನ್ನ ಜತೆ ಮಧುರಾ ದಾಸ್ ಸಹ ಇದ್ದರು. ನನ್ನ ಬಾಸ್ಕೆಟ್ ನಲ್ಲಿ ಕೆಲವು ಮುಖ್ಯ ಸಾಮಾನುಗಳನ್ನು ಇಟ್ಟುಕೊಂಡೆ. ಆಗ ಬಾಪು ಎಲ್ಲವನ್ನು ಆಸ್ಪತ್ರೆಗೆ ದಾನಮಾಡು, ಎಂದು ಹೇಳಿದಾಗ, ವಿರೋಧಿಸದೆ ಕೊಟ್ಟುಬಿಟ್ಟೆ. ಇದಾದ ಮೇಲೆ ಬಾಪು ಹೇಳಿದ್ದೇನು ? “ಈ ಸಲ ಬಹುಶಃ ನಾನು ಬದುಕುವುದಿಲ್ಲ. ನೀನು ಮಾತ್ರ ಧೃತಿಗೆಡಬಾರದು”. ಆ ಸಮಯದಲ್ಲೇ ನನಗೆ ತೋರಿದ ಉಪಾಯವೆಂದರೆ, ಈಶ್ವರನನ್ನು ಧ್ಯಾನಿಸತೊಡಗಿದೆ. ಭಗವಂತ ದಯಾಮಯನಲ್ಲವೇ ? ಎಂದಿಗೂ ಅವನನ್ನು ನಂಬಿದವರ ಕೈಬಿಡನು. ಹಾಗೆಯೇ ಆಯಿತು ನೋಡು.

ದೇವರದಯದಿಂದ ಬಾ ರವರ ನಂಬಿಕೆ ನಿಜವಾಯಿತು. ಅವತ್ತಿನ ಸಾಯಂಕಾಲವೇ ಸರ್ಕಾರ ಗಾಂಧೀಜಿಯವರನ್ನು ಜೈಲಿನಿಂದ ಬಿಡುಗಡೆ ಮಾಡಲು ನಿರ್ಧರಿಸಿತು. ಹರಿಜನ್ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿತು. ಬಾಪು, ತಮ್ಮ ಪತ್ನಿಯ ದೇವರಲ್ಲಿನ ಅಚಲ ನಂಬಿಕೆ, ಶ್ರದ್ಧೆ ಮತ್ತು ಕಷ್ಟಗಳನ್ನು ಸಹಿಸುವ ಶಕ್ತಿ ಸರಿಯೆನಿಸಿತು. ಸಾಮಾನ್ಯವಾದ ಮಾತುಕತೆಯ ಸಮಯದಲ್ಲಿ ಬಾಪು ತಮ್ಮ ಪತ್ನಿಗೆ ಒಂದು ಸಾಯಂಕಾಲ ಉಪವಾಸಮಾಡುವ ಆವಶ್ಯಕತೆಯ ಬಗ್ಗೆ ಮಾತಾಡಿದರು. ಮಾರನೆಯ ದಿನವೇ, ಬಾ ಬ್ರಿಟಿಷ್ ಸರಕಾರ, ನಮ್ಮ ಮೇಲೆ ಎಲ್ಲ ಕಡೆ ಸುಳ್ಳು ಸುದ್ದಿಗಳನ್ನು ಹರಡಿ, ವಂಚನೆ ಮಾಡುತ್ತಿರುವಾಗ ಬಾಪು ಅವುಗಳೆಲ್ಲವನ್ನೂ ನೋಡಿಕೊಂಡು ಹೇಗೆ ತಾನೆ ಸುಮ್ಮನಿರಬಲ್ಲರು ? ಸರಕಾರ ಸೃಷ್ಟಿಸಿರುವ ಆತಂಕಿ-ಗತಿವಿಧಿಗಳನ್ನು ವಿರೋಧ ಮಾಡುವುದು ಉಪವಾಸವೊಂದರಿಂದಲೇ ಸಾಧ್ಯವಲ್ಲವೇ ? ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬಾರವರ ಈ ಅತ್ಯುತ್ಸಾಹಕ್ಕೆ ನಾವು ತಲೆಬಾಗಿದೆವು. ಈ ಎಲ್ಲಾ ಮಾತುಕತೆಗಳ ತಾತ್ಪರ್ಯವೆಂದರೆ, ಮಹಾತ್ಮಗಾಂಧಿಯವರ ಮತ್ತೊಂದು ಉಪವಾಸ ಖಚಿತವಾದಂತನ್ನಿಸಿತು.

27

೧೦ ಆಗಸ್ಟ್ ಫೆಬ್ರವರಿ ೧೯೪೩ ಗಾಂಧೀಜಿಯವರು ಬೆಳಗಿನ ‘ನಾಸ್ತಾ’ ಮುಗಿಸಿದ ನಂತರ ಒಂದು ಚಿಕ್ಕ ಪ್ರಾರ್ಥನೆ ಇತ್ತು. ೨೧ ದಿನಗಳ ಉಪವಾಸ ಆಮೇಲೆ ಶುರುವಾಯಿತು. ಪ್ರತಿದಿನದ ತರಹ ಬಾಪು ಬೆಳಿಗ್ಯೆ ಮದ್ಯಾನ್ಹ ವಾಕ್ ಮಾಡಿದರು. ಪ್ರಾರ್ಥನೆ ಮಾಡಿದರು. ಎಂದಿನಂತೆ ಮಹದೇವ್ ಭಾಯಿಯವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ವಾಕ್ ಮಾಡುವಾಗ ಬಾ ಸಹಿತ ಜತೆಯಲ್ಲಿದ್ದರು. ಈಗ ಬಾ ಊಟಮಾಡುವುದನ್ನು ನಿಲ್ಲಿಸಿ, ಹಣ್ಣು ಹಾಲನ್ನು ಮಾತ್ರ ಸೇವಿಸುತ್ತಿದ್ದರು. ಇದು ಗಾಂಧೀಜಿಯವರು ಆಚರಿಸುತ್ತಿದ್ದ ಉಪವಾಸಗಳ ಸಮಯದಲ್ಲಿ ಬಾ ಆಚರಿಸುತ್ತಿದ್ದ ಕ್ರಮವಾಗಿತ್ತು. ಹಿಂದಿನ ಉಪವಾಸದ ದಿನಗಳಲ್ಲಿ ದಿನಕ್ಕೊಮ್ಮೆ ಮಾತ್ರ ಹಣ್ಣು ಹಾಲು ಸೇವಿಸುತ್ತಿದ್ದರು. ಬಾ ರವರ ನಿಶ್ಯಕ್ತಿ ಹಾಗೂ ಅನಾರೋಗ್ಯಗಳನ್ನು ಗಮನಿಸಿದ ಆಶ್ರಮವಾಸಿಗಳು ಉಪವಾಸ ಮಾಡಲೇಬಾರದೆಂದು ಆಗ್ರಹಿಸಿದರು. ಮನಸ್ಸಿಲ್ಲದೆ ತಮ್ಮ ವಿರುದ್ಧವಾಗಿ ೨೪ ಗಂಟೆಗಳಲ್ಲಿ ಎರಡು ಬಾರಿ ಹಣ್ಣು ಹಾಲು ತೆಗೆದುಕೊಳ್ಳಲು ಕೊನೆಗೆ ಒಪ್ಪಿಕೊಂಡರು.

Page 49

ದಿನದಲ್ಲಿ ೨-೩ ಸಲ ಒಂದು ಕಪ್ ಬಿಸಿನೀರಿಗೆ ಜೇನುತುಪ್ಪ ಬೆರೆಸಿ ಕುಡಿಯುತ್ತಿದ್ದರು. ಗಾಂಧೀಜಿವರು ಉಪವಾಸ ಸತ್ಯಾಗ್ರಹ ಮಾಡುವಾಗ, ಕಸ್ತೂರ್ ಬಾ ರವರು, ಅವರ ಹಾಸಿಗೆ ಬದಿಯಲ್ಲಿ ಪತಿಯ ಪಕ್ಕದಲ್ಲಿ ಬಹಳಷ್ಟು ಸಮಯ ಕೈನಲ್ಲಿ ಒಂದು ಬಟ್ಟಲನ್ನು ಹಿಡಿದು ಕುಳಿತುಕೊಳ್ಳುತ್ತಿದ್ದರು. ಏನಾದರೂ ಮಾಡಬೇಕಾದರೆ, ಅದನ್ನು ಅವರ ಟೇಬಲ್ ಮೇಲೆ ಇಡುತ್ತಿದ್ದರು. ಕೆಲಸ ಮುಗಿದಮೇಲೆ ಬಂದು ತಮ್ಮ ಪೇಯವನ್ನು ಕುಡಿಯುತ್ತಿದ್ದರು. ಒಂದು ದಿನ ಡಾ ಗಿಲ್ಡರ್ ಹೇಳಿದರು. ‘ನೀವು ಮಾಡುತ್ತಿರುವುದು ಸರಿಯಲ್ಲ. ಇಲ್ಲಿನ ಅಧಿಕಾರಿಗಳು ನಿಮ್ಮ ವರ್ತನೆಯನ್ನು ತಪ್ಪಾಗಿ ತಿಳಿಯಬಹುದು. ಅವರ ಹಾಸಿಗೆಯ ಸುತ್ತಲೂ ಬಿಸಿನೀರು ಮತ್ತು ಜೇನುತುಪ್ಪ ಒಂದು ಬಟ್ಟಲನ್ನು ಹಿಡಿದು ಸುತ್ತುತ್ತಿದ್ದೀರಿ. ರಹಸ್ಯವಾಗಿ ಗಾಂಧೀಜಿಯವರಿಗೆ ಏನನ್ನಾದರೂ ಕುಡಿಸಿ ಜಾದು ಮಾಡಲು ಪ್ರಯತ್ನಿಸುತ್ತಿರಬಹುದೆಂದು ಯಾರಿಗಾದರೂ ಅನ್ನಿಸಬಹುದು’. ಇದೇ ವಿಷಯವನ್ನು ಕಸ್ತೂರ್ ಬಾ ರ ಜತೆ ಚರ್ಚಿಸಿದಾಗ, ‘ಬಾಪೂ ಇವೆಲ್ಲಾ, ಯಾವುದನ್ನೂ ನಂಬುವುದಿಲ್ಲ. ನಿಶ್ಚಿಂತರಾಗಿರಿ’, ಎಂದು ಅವರ ಮಾತನ್ನು ತಳ್ಳಿಹಾಕಿದರು.

ಉಪವಾಸ ಪ್ರಾರಂಭಿಸಿದ ಮೂರನೆಯ ದಿನ ಗಾಂಧೀಜಿಯವರಿಗೆ ವಾಂತಿಶುರುವಾಯಿತು. ನೀರುಕುಡಿಯಲು ಆಗುತ್ತಿರಲಿಲ್ಲ. ನಿಂಬೆಹಣ್ಣಿನ ರಸ ಸೇರಿಸಿ ನೀರು ಕುಡಿಯಲು ಬಾ ಹೇಳಿದರು. ಗಾಂಧಿಯವರು ಕುಡಿಯಲಿಲ್ಲ. ನಿಂಬೆ ಹಣ್ಣಿನ ರಸ ಸೇರಿಸಿದ ನೀರು ನನಗೆ ಇಷ್ಟವಾಗುವುದಿಲ್ಲ. ನನಗೆ ಸಾದಾ ನೀರು ಕುಡಿಯಲು ಅಸಾಧ್ಯವಾದರೆ ಮಾತ್ರ ನಿಂಬೆಹಣ್ಣಿನ ರಸ ಸೇರಿಸಿ, ಎಂದು ಅವರು ಹೇಳುತ್ತಿದ್ದರು. ಬಾಪೂರವರಿಗೆ ವಾಂತಿ ಬರುವ ತರಹ ಆಗುತ್ತಿತ್ತು. ನೀರು ಕುಡಿಯಲು ಅಸಾಧ್ಯವಾಗಿತ್ತು. ರಕ್ತ ಹೆಪ್ಪುಗಟ್ಟಿದಂತೆ ಅನ್ನಿಸುತ್ತಿತ್ತು. ಅವರ ಮೂತ್ರಪಿಂಡ ಕೆಲಸಮಾಡುತ್ತಿರಲಿಲ್ಲ. ಈಗ ಬಾ ಅವರು ಸಲಹೆಮಾಡುವುದನ್ನು ಬಿಟ್ಟರು. ಬಾಪು ತಮಗೆ ಸರಿ ಎನಿಸಿದ್ದನ್ನು ಮಾತ್ರ ಮಾಡುವ ಸ್ವಭಾವದರು. ಅವರ ಹತ್ತಿರ ವಾದ ಮಾಡಿ, ಅವರ ಶಕ್ತಿಯನ್ನು ಏಕೆ ಕಡಿಮೆ ಮಾಡಬೇಕು ? ಎಂದು ತಮ್ಮ ಮನಸ್ಸಿನಲ್ಲೇ ಹೇಳಿಕೊಂಡರು. ಉಪವಾಸ ಮುಂದುವರೆಯುತ್ತಿದ್ದಂತೆ, ಬಾ ರವರು ತಮ್ಮ ಹೆಚ್ಜಿನ ಸಮಯವನ್ನು ತುಳಸಿಗಿಡದ ಮುಂದೆ, ಬಾಲಕೃಷ್ಣ ವಿಗ್ರಹದ ಮುಂದೆ ಕುಳಿತು ಪ್ರಾರ್ಥನೆ ಮಾಡುವುದರಲ್ಲಿಯೇ ಕಳೆಯುತ್ತಿದ್ದರು.

ಬಾಪೂಜಿಯವರ ಆರೋಗ್ಯ ೨೨ ಫೆಬ್ರವರಿಯಂದು ಬಹಳ ಚಿಂತಾಜನಕವಾಗಿತ್ತು. ಜೀವನ ಮರಣಗಳ ಹೋರಾಟದಲ್ಲಿತ್ತು. ನಾನು ಅವರ ಹಾಸಿಗೆ ಬಳಿ ಇದ್ದೆ. ಮೀರಾಬೆನ್ ಬಂದು ಕೈಹಿಡಿದು ವರಾಂಡಕ್ಕೆ ಕರೆದುಕೊಂಡು ಹೋದರು. ನಾವು ನೋಡಿದಾಗ, ಬಾರವರು ಕಣ್ಣು ಮುಚ್ಚಿ, ಚಕ್ಕಳು-ಮಕ್ಕಳು ಹಾಕಿಕೊಂಡು ತುಳಸಿಗಿಡದ ಮುಂದೆ ಕೈಮುಗಿದು ಕುಳಿತು ಧ್ಯಾನಿಸುತ್ತಿದ್ದರು. ಅವರ ಮೌನ, ದುಖಃತಪ್ತವಾದ ಮುಖವನ್ನು ನೋಡಿದವರ ಕಣ್ಣುಗಳಲ್ಲಿ ನೀರು ಬರುತ್ತಿತ್ತು. ಒಂದು ನಿಮಿಷ ಅವರನ್ನು ಆ ಸ್ಥಿತಿಯಲ್ಲಿ ಅವರನ್ನು ಕಂಡು, ನಾನು ಹೊರಗೆ ಬಂದೆ. ಬಾರವರಿಗೆ ಯಾರು ಬಂದರು, ಹೋದರು ಎನ್ನುವ ಪರಿಜ್ಞಾನವಿರಲಿಲ್ಲ. ಮನಸ್ಸಿನಲ್ಲೇ ಅವರು ದೇವರನ್ನು ಪ್ರಾರ್ಥಿಸುತ್ತಿದ್ದರು.

೨೨, ಫೆಬ್ರವರಿ ಯಂದು, ಬಾಪೂರವರ ಉಪವಾಸ ೧೩ ನೆಯ ದಿನವನ್ನು ತಲುಪಿತ್ತು. ನಿಶ್ಯಕ್ತಿ ಬಹಳ ಹೆಚ್ಚಿದ್ದು, ಒಂದು ಔನ್ಸ್ ನೀರನ್ನು ‘siphon tube’ ನಲ್ಲಿ ಕುಡಿಯಲೂ ತ್ರಾಣವಿರಲ್ಲ. ಎದ್ದು ಕುಳಿತುಕೊಳ್ಳಲಾಗದೆ ಮತ್ತೆ ಒರಗಿದರು. ಅರ್ಧ ಎಚ್ಚರಿಕೆಯ ಸ್ಥಿತಿಯಲ್ಲಿದ್ದರು. ಪಲ್ಸ್, ಫೀಬಲ್ ಆಗಿತ್ತು. ಮೈ ಸ್ವಲ್ಪ ಬೆವರುತ್ತಿತ್ತು. ಏನೂ ಹೇಳಲು ತ್ರಾಣವಿರಲಿಲ್ಲ.

Page 50

ಬಾ ತುಳಸಿ ಗಿಡದಮುಂದೆ ಕುಳಿತು ಪ್ರಾರ್ಥಿಸುತ್ತಿದ್ದಾಗ, ನಾನೊಬ್ಬಳೇ ಬಾಪೂರವರ ರೂಮಿನಲ್ಲಿದ್ದೆ. ಇನ್ನೇನು ಗಾಂಧೀಜಿಯವರ ಕತೆ ಮುಗಿಯಿತು ಎಂದು ಅನ್ನಿಸಿದಾಗ, ನನಗೆ ಮೈ-ನಡುಕ ವುಂಟಾಯಿತು. ಧರ್ಯ ಮಾಡಿ ಬಾಪುಗೇ ಹೇಳಿದೆ. ನೀವು ಕುಡಿಯುವ ನೀರಿಗೆ ನಿಂಬೆಹಣ್ಣಿನ ರಸ ಸೇರಿಸಲು ಹೇಳಿದ್ದಾರಲ್ಲವೇ ? ಬಾಪುರವರಿಂದ ಯಾವ ಉತ್ತರವೂ ದೊರೆಯಲಿಲ್ಲ. ಅವರನ್ನೇ ಹತ್ತಿರದಿಂದ ನೋಡುತ್ತಿದ್ದೆ. ತಲೆ ಸ್ವಲ್ಪ ಅಲುಗಿದ ತರಹ ಅನ್ನಿಸಿತ್ತು. ನೀರಿಗೆ ನಿಂಬೆಹಣ್ಣಿನ ರಸ ಸೇರಿಸಿ ಕೊಡು, ಎನ್ನುವ ಅರ್ಥವಾಗುತ್ತಿತ್ತು. ೨ ಔನ್ಸ್ ತಾಜಾ ಮೋಸಂಬಿ ರಸವನ್ನು ೨ ಔನ್ಸ್ ನೀರಿಗೆ ಸೇರಿಸಿ, ಚಮಚದಲ್ಲಿ ಬಾಯಿಗೆ ತೊಟ್ಟು ತೊಟ್ಟಾಗಿ ಗಂಟಲಿನೊಳಗೆ ಹೋಗುವಂತೆ ಹಾಕಿದೆ. ದ್ರವರೂಪದ ಸಕ್ಕರೆ ನೀರು ಶರೀರಕ್ಕೆ ಬಿದ್ದಮೇಲೆ ಮುಖದಲ್ಲಿ ಸ್ವಲ್ಪ ಚೇತರಿಕೆ ಕಾಣಿಸತೊಡಗಿತು. ಅವರು ನಿಧಾನವಾಗಿ ಕಣ್ಣು ತೆರೆದರು. ಭಗವಂತ ನಮ್ಮ ಮೊರೆಯನ್ನು ಆಲಿಸಿದನೆಂದು ನಾವೆಲ್ಲಾ ಭರವಸೆಯ ನಿಟ್ಟುಸಿರು ಬಿಟ್ಟೆವು.

ಗಾಂಧೀಜಿವರ ಉಪವಾಸಸತ್ಯಾಗ್ರಹದ ವೇಳೆಯಲ್ಲಿ ಆಗಾಖಾನ್ ಪ್ಯಾಲೇಸ್ ಬಂದಿಗೃಹದ ಹೊರಗಿನ ಬಾಗಿಲುಗಳು ದಿನವಿಡೀ ತೆರೆದೇ ಇದ್ದವು. ಬಾಪುರವರನ್ನು ನೋಡಲು ಜನಗಳ ಗುಂಪೇ ಬರುತ್ತಿತ್ತು. ಅವರಿಗೆ ಯಾರ ಜತೆಯೂ ಮಾತಾಡುವಷ್ಟು ಶಕ್ತಿಯಿರಲಿಲ್ಲ. ಬಹಳಷ್ಟು ಜನರು ಮೌನವಾಗಿ ರೂಮಿನೊಳಗೆ ಬಂದು, ನಿಂತು ವಂದಿಸಿ, ಮಾತಾಡದೆ ಹಿಂದಿರುಗುತ್ತಿದ್ದರು. ಅಲ್ಲಿಂದ ಹೊರಗೆ ಹೋದವರು ಬಾ ರವರ ಹತ್ತಿರ ಹೋಗಿ ಬಾಪೂಜಿಯವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು. ಬಾ ಮಾತ್ರ ಧರ್ಯವಾಗಿದ್ದರು. ಎಲ್ಲರ ಪ್ರಶ್ನೆಗಳಿಗೂ ಸಮಾಧಾನದಿಂದ ಉತ್ತರಕೊಡುತ್ತಿದ್ದರು. ದಿನವಿಡೀ ಅವರಿಗೆ ಆರಾಮು ಸಿಗುತ್ತಿರಲಿಲ್ಲ. ಪತಿಗೆ ಔಷಧಕೊಡುವಾಗಲೂ, ಬಂದ ಜನರ ಜತೆ ಮಾತಾಡುವಾಗಲೂ ನಗುಮುಖದಿಂದ ವರ್ತಿಸುತ್ತಿದ್ದರು. ಬಾ ರವರ ಮಕ್ಕಳೂ, ಮೊಮ್ಮಕ್ಕಳೂ ಬಾಪೂಜಿಯವರನ್ನು ಕಾಣಲು ಬಂದಿದ್ದು ಅವರಿಗೆ ನೆಮ್ಮದಿ,ಹಾಗೂ ಸಮಾಧಾನ ತಂದಿತ್ತು. ಪತಿಯ ತರಹ ಅವರು ವಿಶ್ವದ ಜನರೆಲ್ಲಾ ತನ್ನ ಪರಿವಾರದ ತರಹವೆಂದು ನಂಬಿದ್ದರು. ಹಾಗೆಂದ ಮಾತ್ರಕ್ಕೆ ತಮ್ಮ ಮಕ್ಕಳ ಮೇಲೆ ಎಳ್ಳಷ್ಟೂ ಪ್ರೀತಿ ಕಡಿಮೆಯಾಗಿರಲಿಲ್ಲ. ಅವರು ಬಾ ರ ಹೃದಯದ ಕುಡಿಗಳಾಗಿದ್ದರು. ನಿರಶನ ವ್ರತದ ಸಮಯದಲ್ಲಿ ಯಾವ ವಿಸಿಟರ್ ಗೂ ಉಪಹಾರ ಕೊಡಲು ಮನಾಮಾಡಿದ್ದರು. ಬಾ ರವರಿಗೆ ಈ ವಿಚಾರದಲ್ಲಿ ಒಮ್ಮತವಿರಲಿಲ್ಲ. ಮೊಮ್ಮಕ್ಕಳಿಗೆ ಏನಾದರೂ ತಿನ್ನಲು ಕೊಡದಿದ್ದರೆ ಅವರಿಗೆ ಬೇಸರವಾಗುತ್ತಿತ್ತು. ಮನಸ್ಸಿಲ್ಲದಿದ್ದರೂ, ಹೇಗೋ ಬಲವಂತದಿಂದ ಪಾಲಿಸುತ್ತಿದ್ದರು.

೨೧ ದಿನಗಳ ಉಪವಾಸ ಸತ್ಯಾಗ್ರಹ ಬಹಳ ಕಷ್ಟದಿಂದ ಕೊನೆಗೊಂಡಿತು. ಸತ್ಯಾಗ್ರಹವನ್ನು ಕೊನೆಗೊಳಸುವಾಗ ಸರಕಾರದವರು, ಕೇವಲ ಬಾಪೂರವರ ಮಕ್ಕಳನ್ನು ಮಾತ್ರ ಅವರ ಹತ್ತಿರ ಬಂದಿರಲು ಅನುಮತಿ ಕೊಡುತ್ತಿದ್ದರು. ಸ್ನೇಹಿತರನ್ನೂ ಸಹಾ ಒಳಗೆ ಬರಲು ಬಿಡುವುದಿಲ್ಲ. ಗಾಂಧೀಜಿಯವರಿಗೆ ಹಲವು ವರ್ಷಗಳಿಂದ ಹೊರಗಿನವರು, ನಮ್ಮವರು ಎನ್ನುವ ಬಗ್ಗೆ ಯಾವ ವ್ಯತ್ಯಾಸವೂ ಇರಲಿಲ್ಲ. ಹಾಗಾಗಿ ಮಕ್ಕಳನ್ನೂ ಬರುವುದು ಬೇಡವೆಂದು ಸ್ಪಷ್ಟ ಪಡಿಸಿದರು.

೨ ಮಾರ್ಚ್ ಉಪವಾಸ ಮುಗಿಸಲು ಅಂತಿಮದಿನವಾಗಿತ್ತು. ನೋಡಲು ಬರುವ visitors ಗೂ ಕೊನೆಯ ದಿನವಾಗಿತ್ತು. ಅವರೆಲ್ಲ ನಮಸ್ಕಾರ ಹೇಳಿ ಹೊರಟಾಗ ಬಾ ಕಣ್ಣುಗಳು ತೇವಗೊಂಡಿದ್ದವು. ಸಾಬರ್ಮತಿ ಆಶ್ರಮದ ಲಕ್ಷ್ಮೀಬೆನ್ ಖರೆ, ಮತ್ತಿತರ ಮಹಿಳಾ ಗೆಳತಿಯರ ಮುಂದೆ ಹೇಳುತ್ತಾ, “ಇದೇ ನನ್ನ ಕೊನೆಯ ಗುಡ್ ಬೈ, ನನ್ನ ಪ್ರೀತಿಯ ಗೆಳತಿಯರಿರಾ “ಎಂದಿದ್ದರು. ನಾನು ಅವರ ಮಾತನ್ನು ಸರಿಪಡಿಸುತ್ತಾ,

Page 51

‘ಬಾ ನೀವು ಹಾಗೆಲ್ಲ ನುಡಿಯಬಾರದು. ನಾವೂ ಒಂದಲ್ಲ ಒಂದು ದಿನ ಹೋಗುವವರೇ ಅಲ್ಲವೇ’ ? ಎಂದು ನಾನು ಹೇಳಿದಾಗ, ಅವರು, ‘ಹೌದು. ನೀವೆಲ್ಲ ಹೊರಗೆ ಹೋಗುವಿರಿ’ ಎಂದು ಮೆಲುದನಿಯಲ್ಲಿ ಮನಸ್ಸಿನಲ್ಲೇ ಹೇಳಿಕೊಂಡರು.

28

ಗಾಂಧೀಜಿಯವರ ಉಪವಾಸ ವ್ರತ ೩ ಮಾರ್ಚ್ ೧೯೪೩ ರಂದು ಮುಗಿಯಿತು. ಮೂರುನಾಲ್ಕು ದಿನಗಳ ನಂತರ, ಸರ್ಕಾರ ರಾಮದಾಸ್ ಹಾಗೂ ದೇವದಾಸ್ ಗಾಂಧಿಯವರಿಗೆ ಅವರ ತಂದೆಯವರನ್ನು ಕಾಣಲು ಬಿಡಲಿಲ್ಲ. ತಂದೆಯವರು ಈಗ ಹುಷಾರಾಗಿದ್ದರೆಂದು ಅವರಿಗೆ ಮನವರಿಕೆಯಾಯಿತು. ಈಗ ಕಳವಳಕ್ಕೆ ಕಾರಣವಿಲ್ಲ. ಮಕ್ಕಳು ಬಂದು ವಿಚಾರಿಸಿಕೊಂಡು ಹೋಗುವುದು, ತಾಯಿಯಾದ ಬಾರವರಿಗೆ ಬಹಳ ತೃಪ್ತಿ ತಂದಿತ್ತು. ಜೈಲಿನ ಬಾಗಿಲುಗಳನ್ನು ಹಾಕಿದಮೇಲೆ ಅವರ ಧರ್ಯ ಸ್ವಲ್ಪ ಕುಗ್ಗಿತು. ಬಾಪು ಉಪವಾಸ ಮಾಡುತ್ತಿದ್ದಾಗ ಆಗುತ್ತಿದ್ದ ಮಾನಸಿಕ ಅಶಾಂತಿ ಮತ್ತು ದೈಹಿಕ ಶ್ರಮಗಳನ್ನು ಸಹಿಸುವ ಶಕ್ತಿಯನ್ನು ಬಾ ತಮ್ಮ ಆತ್ಮ-ವಿಶ್ವಾಸದಿಂದ ಕಷ್ಟಪಟ್ಟು ಸಾಧಿಸಿದ್ದರು. ಬಾರಿಗೆ ಅದರ ಪರಿಣಾಮ ಈಗ ಕಾಣಿಸಿಕೊಳ್ಳಲು ಶುರುವಾಯಿತು. ಸ್ವಲ್ಪ ವಿಷಯಗಳಿಗೂ ತಕ್ಷಣ ಸುಸ್ತಾಗುತ್ತಿದ್ದರು. ಮುಖದಮೇಲೆ ಆತಂಕ, ದುಃಖ, ಸ್ಪಷ್ಟವಾಗಿ ಕಾಣಿಸುತ್ತಿತ್ತು. ೧೬, ಮಾರ್ಚ್ ರಂದು ಅವರಿಗೆ ಸುಮಾರು ೨ ಗಂಟೆಗಳ ಕಾಲ ‘paroxysmal tachycardia’ ಅಟ್ಯಾಕ್ ಆಯಿತು. ಪುನಃ ೨೫ ಮಾರ್ಚ್ ಸುಮಾರು ೪ ಗಂಟೆಗಳ ಕಾಲ, ಮತ್ತೊಂದು ಅಟ್ಯಾಕ್ ಆಯಿತು. ಇದಾದನಂತರ ಅವರ ಅನಾರೋಗ್ಯ ಹೆಚ್ಚುತ್ತಲೇ ಹೋಯಿತು. ಸರಿಹೋಗಲೇ ಇಲ್ಲ. ಉಪವಾಸಕ್ಕೆ ಮೊದಲು ಬಾಪು ಇನ್ನು ೬ ತಿಂಗಳಿನಲ್ಲಿ ಎಲ್ಲ ಬದಲಾಗುವುದೆಂದು ಹೇಳುತ್ತಿದ್ದರು. ಸರ್ಕಾರ ಟ್ರಯಲ್ ಮಾಡದೆಯೇ ಜೈಲಿನಲ್ಲಿ ಅನಿರ್ದಿಷ್ಟಕಾಲ ಕೈದಿಗಳನ್ನು ಇಡುವಂತಿಲ್ಲ. ೬ ತಿಂಗಳ ಬಳಿಕ ಎಲ್ಲರನ್ನು ಬಿಡಲೇಬೇಕಾಗುತ್ತದೆ. ಈ ಅಭಿಯಾನ ಸಫಲವಾದರೆ ಸರಕಾರಕ್ಕೆ ಕೈದಿಗಳನ್ನು ಬಿಡುಗಡೆ ಮಾಡದೆ ವಿಧಿಯಿರಲ್ಲ ; ಅಥವಾ ಕೈದಿಗಳನ್ನು ಬಂಧಿಸಿಡುವ ಅವಶ್ಯಕತೆಯೇ ಇರುವುದಿಲ್ಲ. ಉಪವಾಸ ಸತ್ಯಾಗ್ರಹದ ನಂತರ ಗಾಂಧೀಜಿಯವರ ಅಭಿಪ್ರಾಯ ಬೇರೆಯೇ ಆಗಿತ್ತು. ಬಹುಶಃ ಇನ್ನೂ ೭ ವರ್ಷಗಳ ಕಾಲ ನಾವು ಬಂದೀಖಾನೆಯಲ್ಲಿಯೇ ಕಳೆಯಬೇಕಾಗಬಹುದೇನೋ ! ಈ ತರಹದ ಮಾತುಗಳನ್ನು ಕೇಳಿಸಿಕೊಂಡಮೇಲೆ ಬಾರವರ ಮನಸ್ಸು ಅಧರ್ಯದಿಂದ ತಲ್ಲಣಿಸಿತು. ‘ನಾನೂ ಮಹದೇವ್ ರವರ ಸಮಾಧಿಯ ಬದಿಯಲ್ಲಿ ಹೋಗುವ ಕಾಲ ಬಂತು. ಇನ್ನೂ ೨ ವರ್ಷ ಬದುಕುವ ಕಲ್ಪನೆ ನನಗಿಲ್ಲ’ ಎಂದು ಯಾವಾಗಲೂ ಹೇಳುತ್ತಿದ್ದರು. ‘ಎಲ್ಲರ ಜತೆ ನಾನೂ ಹೋಗಿಬಿಡುವೆ’.

ಇಷ್ಟಾದರೂ ಅವರ ಮಗುವಿನ ತರಹದ ಮುಗ್ದ ಮನಸ್ಸು, ಸರಳತೆ, ದೇವರಲ್ಲಿ ನಂಬುಗೆ, ಹಾಗೂ ಅವ್ಯಾಜ ವಿಶ್ವಾಸ, ಅವರನ್ನು ಸುಲಭವಾಗಿ ಬಿಡಲೊಲ್ಲದು. ಬಾಲಕೃಷ್ಣ ಮೂರ್ತಿಯಮುಂದೆ ಕುಳಿತು ಭಕ್ತಿಶ್ರದ್ಧೆಗಳಿಂದ ‘ಎಲ್ಲರನ್ನು ಬಿಡುಗಡೆ ಮಾಡಿಸು ದೇವಾ’ ಎಂದು ಬೇಡುತ್ತಿದ್ದರು.

ಇವತ್ತು ಚಲನಚಿತ್ರಗಳ ಬಗ್ಗೆ ಮಾತುಕತೆ ಬಂತು. ‘ಭರತ್ ಮಿಲಾಪ್’ ಎಂಬ ಚಿತ್ರದ ಬಗ್ಗೆ ‘ರೆವ್ಯೂ’ ವೃತ್ತಪತ್ರಿಕೆಯಲ್ಲಿ ಬಂದಿತ್ತು. ಬಾರವರಿಗೆ ಈ ಭಾಗದ ರಾಮಾಯಣ ಕತೆಯ ವರದಿ, ಬಹಳ ಮುದಕೊಟ್ಟಿತು.

Page 52

ನಾನು ಅವರಿಗೆ ಹೇಳಿದೆ. ‘ಮುಂದೆ ನೀವು ದೆಹಲಿಗೆ ಬಂದಾಗ ನಿಮ್ಮನ್ನು ‘ಭರತ್ ಮಿಲಾಪ್’ ಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ’. ಇದನ್ನು ಕೇಳಿ ಬಾಗೆ ಬಹಳ ಸಂತೋಷವಾಯಿತು. ಒಂದು ಕ್ಷಣ ಅವರ ಮುಖ ಅರಳಿತು. ನಾವು ಜೈಲಿನಲ್ಲಿರುವುದು ಮತ್ತು ದೆಹಲಿಯಿಂದ ಸಾವಿರಾರು ಮೈಲಿ ದೂರವಿರುವುದೂ ಅವರಿಗೆ ಏನೂ ಅನ್ನಿಸಲೇ ಇಲ್ಲ. ಬಾಪು ಇಂತಹ ವಿಷಯಗಳಲ್ಲಿ ಆಸಕ್ತಿಯನ್ನೇ ತೋರಿಸದಿರುವಾಗ, ನಾವು ಹೇಗೆ ತಾನೇ ಹೋಗಲು ಸಾಧ್ಯ ? ಎಂದರು. ನಾನು ಅವರನ್ನು ಸಂತೈಸುತ್ತ. ‘ಇಲ್ಲ ಬಾ ಇದು ಸಾಮಾನ್ಯ ಚಿತ್ರದ ತರಹವಲ್ಲ. ಇದು ರಾಮಾಯಣವನ್ನು ಪೂರ್ತಿಯಾಗಿ ತೋರಿಸುತ್ತದೆ. ರಾಮಾಯಣ ಧಾರ್ಮಿಕ ಚಿತ್ರವಲ್ಲವೇ ? ಬಾಪು ತಾವೊಬ್ಬರೇ ಹೋಗದಿರಬಹುದು; ನಿಮ್ಮನ್ನು ನೋಡಲು ಅಡ್ಡಿಬರುವುದಿಲ್ಲ’. ನಾವು ತಾರಾ, ಮೋಹನ್, ರಾಮು ಎಲ್ಲರನ್ನೂ ಕರೆದುಕೊಂಡು ಹೋಗೋಣ. ಮೊಮ್ಮೊಕ್ಕಳ ಹೆಸರು ಹೇಳುತ್ತಿದ್ದಂತೆಯೇ ಬಾ ರವರ ಕಳೆಗುಂದಿದ ಮುಖದಲ್ಲಿ ಮಂದಹಾಸ ಮಿನುಗಿತು. ‘ಸರಿ ಹಾಗಾದರೆ’, ಎಂದು ಸಂತೋಷಗೊಂಡರು. ನಾವು ಆ ವಿಷಯದಿಂದ ಜಾರಿಕೊಂಡು ಬೇರೆವಿಷಯ ಮಾತಾಡಲು ಪ್ರಾರಂಭಿಸಿದೆವು.

ಬಾಪು ಉಪವಾಸದಲ್ಲಿದ್ದಾಗ, ಜಯ್ಸುಖ್ಲಾಲ್ ಗಾಂಧಿಯವರು ಅವರನ್ನು ಕಾಣಲು ಬಂದರು. ಅವರು ತಮ್ಮ ಮಗಳು ಮನುಬೆನ್ ರನ್ನು ಸೇವಾಗ್ರಾಮದ ಆಶ್ರಮದಲ್ಲಿದ್ದಾಗ ಕಸ್ತೂರ್ ಬಾ ಆಶ್ರಯದಲ್ಲಿ ಬಿಟ್ಟಿದ್ದರು. ಮನುಬೆನ್ ೧೯೪೨ ರಲ್ಲಿ ಬಾಪು ಜತೆಗೆ ಸೇರಿ, ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಸೆರೆವಾಸವನ್ನೂ ಅನುಭವಿಸಿದ್ದರು. ಆಗ ಅವರನ್ನು ನಾಗ್ಪುರ್ ಕಾರಾವಾಸದಲ್ಲಿ ಬಂಧಿಸಲಾಗಿತ್ತು. ಜಯ್ಸುಖ್ಲಾಲ್ ಗಾಂಧಿಯವರು, ಬಾ ರನ್ನುದ್ದೇಶಿಸಿ ಮಾತಾಡುತ್ತಾ, ‘ಮನು ಕಣ್ಣಿನ ಸಮಸ್ಯೆ ಆಕೆಗೆ ಬಹಳ ತೊಂದರೆಕೊಡುತ್ತಿದೆ’. ಎಂದು ಹೇಳಿದರು. ನಿಮ್ಮ ಜತೆ ಇದ್ದರೆ ಅವಳಿಗೆ ಅವಳ ಕಣ್ಣುಗಳು ಖಂಡಿತವಾಗಿ ಸರಿಹೋಗುತ್ತವೆ. ಅದೂ ಅಲ್ಲದೆ, ನಿಮ್ಮ ಸೇವೆಮಾಡುವ ಸೌಭಾಗ್ಯ ಅವಳಿಗೆ ದೊರೆಯುತ್ತದೆ. ಇದನ್ನು ಆಲಿಸಿದ ಬಾ ರ ಹೃದಯ ತುಂಬಿ ಬಂತು. ಹೇಗಾದರೂ ಮಾಡಿ ಈ ಮಗುವಿನ ಕಣ್ಣಿನ ದೃಷ್ಠಿಮಾಂದ್ಯತೆಯನ್ನು ಹೋಗಲಾಡಿಸಬೇಕು; ಹೆಚ್ಚಾಗಲು ಬಿಡಬಾರದು, ಎಂದು ತಮ್ಮಲ್ಲೇ ಹೇಳಿಕೊಂಡರು. ಬಾ ತಮ್ಮ ಪತಿಯವರ ಹತ್ತಿರ ಹೋಗಿ, ಇದರಬಗ್ಗೆ ವಿವರಿಸಿ, ನನಗೆ ನಿಮ್ಮ ಸಲಹೆ, ಸಹಾಯಬೇಕು ಎಂದು ಬೇಡಿದರು. ಮನುಬೆನ್ ರನ್ನು ಕರೆಸಬಾರದೇಕೆ ? ಎಂದಾಗ ಬಾಪು ಅದರ ಬಗ್ಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಸರಕಾರಕ್ಕೆ ಅದರ ಬಗ್ಗೆ ಬರೆಯಬೇಕು. ಅವರು ರಿಕ್ವೆಸ್ಟ್ ಮಾಡಲು ಇಷ್ಟಪಡಲಿಲ್ಲ. ಸರ್ಕಾರಕ್ಕೆ ಇಲ್ಲ ಎಂದು ಹೇಳಲು ಅವಕಾಶ ಕೊಡಬಾರದೆಂದು ಬಾ ಫರ್ಮ್ ಆಗಿದ್ದರು. ಕರ್ನಲ್ ಭಂಡಾರಿ, ಮತ್ತು ಕರ್ನಲ್ ಶಾಗೆ ಸ್ವತಃ ತಾವೇ ಹೇಳಿದರು. ತಮಗೆ ಒಬ್ಬ ನರ್ಸ್ ನ ಆವಶ್ಯಕತೆ ಇದೆ. ಈ ಸಮಯದಲ್ಲೇ ಬಾರವರಿಗೆ ಆಗಾಗ ಹೃದಯಾಘಾತ ಆಗುತ್ತಲೇ ಇತ್ತು. ನಾನು ಮತ್ತು ಡಾ ಗಿಲ್ಡರ್ ನಮ್ಮ ವರದಿಯನ್ನು ಸರ್ಕಾರಕ್ಕೆ ಕಳಿಸಿದೆವು. ಅದರಲ್ಲಿ ‘ಒಬ್ಬ ನರ್ಸ್ ನ್ನು ದಯಮಾಡಿ ಬೇಗ ಕಳಿಸಿಕೊಡಿ’ ಎಂದೂ ಸೇರಿಸಿದೆವು. ಬಾ ಗೆ ಪಕ್ಕದ ರಾಜ್ಯದ ಜೈಲಿನಲ್ಲಿದ್ದ ಮನುಬೆನ್ ಬರಲಿ ಎಂದಿತ್ತು. ಇದಲ್ಲದೆ ಬೇರೇನಾದರೂ ವಿಕಲ್ಪ ವಿದೆಯೇ ? ಎಂದು ಯೋಚಿಸಿದಾಗ, ಮಣಿಬೆನ್ ಪಟೇಲ್, ಅಥವಾ ಪ್ರೇಮಬೆನ್ ಕಂಟಕ್, ರನ್ನಾದರೂ ಕಳಿಸಿಕೊಡಿ ಎಂದು. ಬಾಂಬೆ ಸರ್ಕಾರ ಎರಡನ್ನೂ ಒಪ್ಪಲಿಲ್ಲ. ಈ ವಿಷಯವನ್ನು ಸೆಂಟ್ರೆಲ್ ಪ್ರಾವಿನ್ಸ್ ಸರ್ಕಾರಕ್ಕೆ ಬರೆದು, ಮನುಬೆನ್ ರನ್ನು ತಕ್ಷಣ ಪುಣೆಗೆ ಕಳಿಸಿಕೊಡಿ ಎಂದು.

೨೩

ಮಾರ್ಚ್, ಮನುಬೆನ್ ಪುಣೆಯ ‘ಆಗಾ ಖಾನ್ ಪ್ಯಾಲೇಸ್ ಬಂದಿಗೃಹ’ ಕ್ಕೆ ಬಂದಳು. ಅದೇ ದಿನ ಮಲೇರಿಯಾ ಜ್ವರದಿಂದ ನರಳುತ್ತಿದ್ದ ಸರೋಜಿನಿ ನಾಯಿಡುರವರು ಆಸ್ಪತ್ರೆಯಿಂದ ಬಿಡುಗಡೆಮಾಡಲ್ಪಟ್ಟರು.