ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಾರದಾ ಅಂಬೇಸಂಗೇ
ಇತ್ತೀಚಿನ ಬರಹಗಳು: ಶಾರದಾ ಅಂಬೇಸಂಗೇ (ಎಲ್ಲವನ್ನು ಓದಿ)

ಇಪ್ಪತ್ತು ಇಪ್ಪತ್ತು ಕೂಡಿತ್ತು
ಜಗಕೆ ತಂದಿತ್ತು ಆಪತ್ತು
ಎರಡರ ಮಧ್ಯೆ ಸೊನ್ನೆ ಇತ್ತು
ಇನ್ನು ಏನೇನು ಕಾದಿದೆ ಕುತ್ತು
ಜನರಲಿ ಹೆಚ್ಚಿನ ತಾಕತ್ತು
ಎದುರಿಸಲು ಎಲ್ಲಾ ವಿಪತ್ತು .

ಎಲ್ಲರ ಮನದಲ್ಲಿ ತಾಪವಿತ್ತು
ಅಂತೇ ಲಾಕ್ಡೌನ ಆಚರಿಸಿತ್ತು .
ಸಮಸ್ಯ ಕೈಮೀರಿತ್ತು ಹೊಟ್ಟೆ
ಹಸಿವು ಹೌಹಾರಿತ್ತು ಹುಟ್ಟು
ನೆಲ ಕೈ ಬೀಸಿ ಕರೆದಿತ್ತು
ಅರೆಬರೆ ಹೊಟ್ಟೆ ಕಟ್ಟಿ ಬಿಟ್ಟು
ನಡೆದರು ಕಷ್ಟದ ಹೊರೆಹೊತ್ತು

ಇದ್ದವರೆಲ್ಲ ಮಾನವೀಯತೆ
ಮರೆತುಬಿಟ್ರು ತಮ್ಮದೆಲ್ಲ
ಬಚ್ಚಿಟ್ರು ಇನ್ನು ಬೇಕೆಂದು
ಸರಕಾರಕ್ಕೆ ಬೇಡಿಕೆ ಇಟ್ಟು
ರಾಜಕೀಯ ಮಾಡಿಬಿಟ್ರು.
ಸಹಾಯ ಮಾಡಿ ಪೋಸ್ಟ್
ಹಾಕಿಬಿಟ್ರು ಬರೆಯುವವರೆಲ್ಲ
ಬಹುಮಾನ ಪಡೆದೆಬಿಟ್ರು..

ಹಸಿದವರಿಗೆ ಅನ್ನದ ಚಿಂತೆ
ಬಿಸಿಲಲ್ಲಿದ್ದವರಿಗೆ ನೆರಳಿನ
ನೆರವಿನ ಹಸ್ತವಂತೆ ಕೆಲವರಿಗೆ
ಪ್ರಚಾರದ ಸಂತೇ ಇದಕ್ಕೆಲ್ಲ
ಆನ್‌ಲೈನ್ ಮಾರ್ಕೆಟ್ಅಂತೆ.

ಅಂತುಕಂತೆಗಳ ಸಂತೆಯಲ್ಲಿ
ಸಹಿಸುವವರು ಬಡವರಂತೆ
ಬಲವುಳ್ಳವರದ್ದೆ ಲಾಭವಂತೆ
ಭಾರ ಹೊರುವವರು ಕೇವಲ
ಮಧ್ಯಮ ವರ್ಗದವರಂತೆ.. .

ಮಾರಿ

ಕಾಲನ ಹೇಗಲೆರಿ ಬಂದಳು ಮಾರಿ ಮರಳಿ ಹೊಂಟೆವು ತವರಿಗೆ ಸವಾರಿ ಕಣ್ಣಿಗೆ ಕಾಣದಿದ್ದರು ಬಹಳ ಕಿರಿಕಿರಿ ಜಗಕ ಮಾಡಿ ಸಾಕಾಯಿತು ಉಸಾಬರಿ ಒಗ್ಗಟ್ಟಿನಲಿ ಚಪ್ಪಾಳೆ ತಟ್ಟಿದೆವು ಹೋಗೆಂದು ದೀಪ ಬೆಳಗಿದೆವು ಸಾಕಿನ್ನು ಸೌಮ್ಯದಿಂದ ತೆರಳು ಕರೆಯುತಿದೆ ನಿನ್ನ ತವರ ನೆರಳು ತಪ್ಪುಮಾಡಿದವರು ಗಪ್ಪ್ ಅದಾರ ದುಡಿತ ಇಲ್ಲದ ಜನ ತೆಪ್ಪಗೆ ಕುಂತಾರ ಹೊಟ್ಟೆಗೆ ಇಲ್ಲದೆ ಹೊರಟ ನಿಂತಾರ ಉಸಿರು ನಿಂತರು ಹುಟ್ಟೂರಾಗಂದಾರ