ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೈದರಾಬಾದ್ ಕರ್ನಾಟಕ ಸಾಹಿತ್ಯ ಮಂದಿರ ಕಾರ್ಯಕ್ರಮದ ಒಂದು ವರದಿ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)


ಇಂದು ಸಂಜೆ ಸ್ಥಳೀಯ ಕರ್ನಾಟಕ ಸಾಹಿತ್ಯ ಮಂದಿರದಲ್ಲಿ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇಶದಾದ್ಯಂತ ಕರೋನಾದ ಉಪಟಳ ಈ ಹತ್ತು ದಿನಗಳಲ್ಲಿ ಜಾಸ್ತಿ ಆಗುತ್ತಿದ್ದ ಸಂಕಷ್ಟದ ಸಮಯವಿದ್ದರೂ, ಕಾರ್ಯಕ್ರಮವನ್ನು ಮುಂಚಿತವಾಗಿ ಪ್ರಕಟಿಸಿದ್ದಕ್ಕಾಗಿ ಕಾರ್ಯಕ್ರಮವನ್ನು ಮುಂದುವರಿಸಲಾಗಿತ್ತು. ಸಭಿಕರ ಹಾಜರಿ ತುಂಬಾ ಕಮ್ಮಿ ಇದ್ದರೂ ಆಸಕ್ತರೆಲ್ಲ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಉದಯೋನ್ಮುಖ ಹೈದರಾಬಾದಿನ ಕವಿಯಾದ ಶ್ರೀಪ್ರವೀಣ್ ಚಿತ್ತಾಪುರ್ ಅವರ ಹನಿಗವನ ಸಂಕಲನ “ರೈಲು ಹನಿ” ಮತ್ತು ಸಾಹಿತ್ಯ ಮಂದಿರದ ಪತ್ರಿಕೆಯಾದ “ ಪರಿಚಯ” ದ ಮೂರನೆ ಸಂಚಿಕೆ ಬಿಡುಗಡೆ ಮಾಡುವುದಿತ್ತು. ಕಾರ್ಯಕ್ರಮಕ್ಕೆ ಮಂದಿರದ ಹಿರಿಯ ಸದಸ್ಯರು ಮತ್ತು ಮಾಜೀ ಉಪಾಧ್ಯಕ್ಷರು ಆದ ಶ್ರೀ ಸಂಪತ್ ಸುಳಿಭಾವಿ ಅವರು ಅತಿಥಿಗಳಾಗಿ ಆಗಮಿಸಿದ್ದರು. ಮಂದಿರದ ಅಧ್ಯಕ್ಷರಾದ ಶ್ರೀ ಸುರೇಂದ್ರ ಕಟಗೇರಿಯವರು ಆಹ್ವಾನಿತರಿಗೆ ಸ್ವಾಗತ ಕೋರುತ್ತ ಏರುತ್ತಿರುವ ಕರೋನಾ ರೋಗಿಗಳ ಸಂಖ್ಯೆಯ ಬಗ್ಗೆ ಕಳವಳ ತೋರಿದರು. ಮತ್ತು ಬಿಡುಗಡೆಯಾಗಲಿರುವ ಪುಸ್ತಕಗಳ ಬಗ್ಗೆ ಮಾತನಾಡಿದರು. ನಂತರ ಎರಡೂ ಪುಸ್ತಕಗಳನ್ನು ಸಂಪತ್ ಸೂಳಿಭಾವಿಯವರು ಬಿಡುಗಡೆ ಮಾಡಿದರು. “ರೈಲು ಹನಿ” ಕವನ ಸಂಕಲನದ ಪುಸ್ತಕ ಪರಿಚಯ ಶ್ರೀ ರಮೇಶ ಬಾಬು ಅವರು ಮಾಡಿದರು. ಹಾಗೇ ಪರಿಚಯ ಪತ್ರಿಕೆಯ ಈ ಸಲದ ಸುಧಾರಣೆಗಳ ಬಗ್ಗೆ ಸದಸ್ಯರಿಗೆ ಹೇಳಿದರು. ನಂತರ ಸದಸ್ಯರಾದ ಶ್ರೀಮತಿ ಮೀರಾ ಜೋಶಿ ಮತ್ತು ಶ್ರೀ ಗೋಪಾಲ್ ಅಶ್ರಿತ್ ಅವರು ಪ್ರವೀಣ್ ಚಿತ್ತಾಪುರ್ ಅವರಿಗೆ ಶುಭಕೋರುತ್ತ ಮಾತನಾಡಿದರು.

ನಂತರ ಮಾತನಾಡಿದ ಕೃತಿಕರ್ತರಾದ ಪ್ರವೀಣ್ ಚಿತ್ತಾಪುರ್ ಅವರು ತಮ್ಮ ಸಾಹಿತ್ಯ ಮಂದಿರದ ಒಡನಾಟದ ಬಗ್ಗೆ, ತಮ್ಮ ಸಾಹಿತ್ಯ ಯಾತ್ರೆಯ ಬಗ್ಗೆ, ತಮಗೆ ರೈಲು ಹನಿಗಳನ್ನು ಬರೆಯಬೇಕೆಂಬ ಪ್ರೇರಣೆ ಹುಟ್ಟಿದ ಬಗ್ಗೆ ಸಭಿಕರಿಗೆ ತಿಳಿಸಿ ಈ ಯಾನದಲ್ಲಿ ತಮಗೆ ನೆರವು ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ ಶ್ರೀ ಸಂಪತ್ ಸೂಳಿಭಾವಿಯವರು ತಮ್ಮ ಮುಕ್ತಾಯದ ಭಾಷಣದಲ್ಲಿ ಪ್ರವೀಣ್ ಚಿತ್ತಾಪೂರ್ ಅವರ ಅಜ್ಜರ ಸಾಹಿತ್ಯ ಸೇವೆಯನ್ನು ಕೊಂಡಾಡುತ್ತ ಅವರ ಜೊತೆ ತಮಗಿದ್ದ ಬಾಂಧವ್ಯವನ್ನು ನೆನೆದರು ಮತ್ತು ಪ್ರವೀಣ್ ಗೆ ಶುಭ ಕೋರಿದರು. ಮಂದಿರದ ಕಾರ್ಯದರ್ಶಿಗಳಾದ ಶ್ರೀ ನರಸಿಂಹ ಮೂರ್ತಿ ಜೋಯಿಸ್ ಅವರು ವಂದನಾರ್ಪಣೆ ಮಾಡಿದರು.