ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರಚಲಿತ

ಈಗೀಗ ಪೆಟ್ರೋಲ್ ಬೆಲೆ ಏರಿಕೆ, ಟೊಮೆಟೊ ಬೆಲೆ ಏರಿಕೆ, ಬಸ್ ದರ ಏರಿಕೆ, ಇತ್ಯಾದಿ ಬೆಲೆ ಏರಿಕೆ ಸುದ್ದಿಗಳು ಮಾಮೂಲಾಗಿದೆ. ಇದರ ಹಿಂದೆಯೇ, ವೇತನ ಏರಿಕೆ ಬಗ್ಗೆ ಕೂಗಾಟ, ತುಟ್ಟಿ ಭತ್ಯೆ ಏರಿಕೆಯ ಬಗ್ಗೆ ಸುದ್ದಿಗಳೂ ಮಾಮೂಲಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ರೂಪಾಯಿಯ ಬೆಲೆಯೂ ಕುಸಿಯುತ್ತಿದೆ. ಬೆಲೆ ಏರಿಕೆ ಏಕಾಗುತ್ತಿದೆ? ಬೆಲೆ ಏರಿಕೆ ನೀಗಿಸಲು, ರಿಸರ್ವ್ ಬ್ಯಾಂಕ್ ಹೆಚ್ಚು ಹೆಚ್ಚು ನೋಟುಗಳ ಮುದ್ರಣ ಯಾಕೆ ಮಾಡುತ್ತಿಲ್ಲ. ಇದು ಜನ ಸಾಮಾನ್ಯರ ಪ್ರಶ್ನೆ. ಇದಕ್ಕೆ ಸ್ವತಃ ರಿಸರ್ವ್ ಬ್ಯಾಂಕಿನಲ್ಲಿ ಕರ್ತವ್ಯ ವಹಿಸಿದ್ದ ತಳುಕು ಶ್ರೀನಿವಾಸ್ ಅವರು ಸವಿವರವಾಗಿ ಬರೆದಿದ್ದಾರೆ.

ಇಟಲಿಯ ಹಿಮಾಚ್ಚಾದಿತ ಶಿಖರಗಳ ಮಂಜು ಕರಗಿದಾಗ ಮಾಡಿದ್ದೇನು? ಒಂದು ಅಪಾಯಕಾರೀ ಬೆಳವಣಿಗೆಯ ಬಗ್ಗೆ
ವೀರೇಂದ್ರ ನಾಯಕ್ ಬರೆಯುವ “ಮಂಜು ಕರಗುವ ಸಮಯ”.

ಒಂದು ಚೂರು ರೊಟ್ಟಿ ನೀಡಲು ಆಧಾರ್ ಕಾರ್ಡ್ ನ ಕೊನೆಯ ನಾಲ್ಕು ಸಂಖ್ಯೆಗಳು ಸಾಕೇ.? ಎಂದು ಪ್ರಶ್ನಿಸುವ ಲೇಖಕ ಅನಿಲ್ ಕುಮಾರ್ ಅವರು ಬರೆದ ಕೂಲಿ ಕಾರ್ಮಿಕನೊಬ್ಬನ ಸಾತ್ವಿಕ ಆಕ್ರೋಶದ ಸಾಲುಗಳು…!

ಆಷಾಢ ಮಾಸದ ಅಮಾವಾಸ್ಯೆಯ ದಿನದ ಮಾರನೆಯ ದಿನವೇ ಶ್ರಾವಣ ಪ್ರಾರಂಭವಾಗುವುದು. ಸಾಮಾನ್ಯವಾಗಿ ಎಲ್ಲರೂ ಶ್ರಾವಣವನ್ನು ಬರಮಾಡಿಕೊಳ್ಳಲು ಕಾಯುವುದು ಸಾಮಾನ್ಯದ ಸಂಗತಿ….

ಮನೆಯ ನಿರ್ವಹಣೆಯನ್ನು ಕೆಲವರು ಸೀಮಿತ ಚಟುವಟಿಕೆಯೆಂದು ಭಾವಿಸಿ ನಿಕೃಷ್ಟವಾಗಿ ಕಾಣುತ್ತಾರೆ ಹಾಗೂ ಕಡೆಗಣಿಸುತ್ತಾರೆ. ಆದರೆ ಮನೆ ಎನ್ನುವುದು ಹಲವಾರು ಸಾಮಾಜಿಕ ಸಮಸ್ಯೆಗಳ ಉಗಮಕ್ಕೆ ಅದೇ ರೀತಿ ನಿವಾರಣೆಗೆ ಮೂಲ ನೆಲೆಯಾಗಿರುತ್ತದೆ…….!…(ಮುಂದೆ ಓದಿ..)

“ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದ ಕಾಲ ಅದು. ಎಲ್ಲರಿಗೂ ಗೊತ್ತಿದ್ದ ಹಾಗೆ ಅಂಡಮಾನ್ ಜೈಲಿನಲ್ಲಿ ಕೈದಿಗಳ ಪರಿಸ್ಥಿತಿ ತುಂಬಾನೇ ಚಿಂತಾಜನಕವಾಗಿತ್ತು. ಜೊತೆಗೆ ಬ್ರಿಟೀಷರ ಚಿತ್ರಹಿಂಸೆ ಬೇರೆ…”. ವಿ.ಎಲ್.ಬಾಲು ಅವರು ಬರೆದದ್ದು ಸಾವರ್ಕರ್ ಬಗ್ಗೆ..

ಸ್ನೇಹಿತರ ಜೊತೆ ಸಾವರ್ಕರ್ ಬಗ್ಗೆ ಮಾತನಾಡುವಾಗ, ಪದೇ ಪದೇ ಪ್ರಸ್ತಾಪವಾಗುವ ಈ ಮೂರು ವಿಷಯದ ಬಗ್ಗೆ ಕೆಲವು ಮಾಹಿತಿಯನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳಲಿದ್ದಾರೆ ಪ್ರಶಾಂತ್ ಪದ್ಮನಾಭ್ ಈ ಲೇಖನದಲ್ಲಿ..

ಕೃಷ್ಣ ಸ್ವಾಮಿ ಕಂಡರೆ ಕೈ ಮುಗಿದು ಬಿಡಿ… ಎಂದು ಮಿಡತೆ ಯ ಬಗ್ಗೆ ಕತೆ ಬರೆದವರು ನಿಸರ್ಗದ ಸೃಷ್ಟಿಯ ಬಗ್ಗೆ ಕುತೂಹಲ ಇಟ್ಟುಕೊಂಡ ಲೇಖಕ ಪುಟ್ಟಾರಾಧ್ಯ ಎಸ್.

ರಂಜಾನ್ ತಿಂಗಳು ಮತ್ತು ಈದ್ ಹಬ್ಬದ ಹಿನ್ನೆಲೆಯಲ್ಲಿ ತಮ್ಮ
ಬಾಲ್ಯದ ದಿನಗಳ ಒಂದು ಮೆಲುಕು ಹಾಕಿಕೊಂಡು ಬರುತ್ತಾರೆ ನಮ್ಮ ನಸುಕು.ಕಾಮ್ ನ ಲೇಖಕರಾದ ಅನ್ಸಾರಿ ಯವರು…
ಅಂದ ಹಾಗೆ ಎಲ್ಲ ಮುಸ್ಲಿಂ ಬಾಂಧವರಿಗೂ ಈದ್ ಹಬ್ಬದ ಶುಭಾಶಯಗಳು..

“ಸರಾಗವಾಗಿ ಹರಿಯುತ್ತಿದ್ದ ಬದುಕಿನ ಬಂಡಿ ಕನಸಿನಲ್ಲಿಯೂ ನೆನೆಸದಂತೆ ನಿಂತು ಬಿಟ್ಟಿತು..” ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಪ್ರಭಾವಿತ ಜೀವನದ ಬಗ್ಗೆ ವಸ್ತು ಸ್ಥಿತಿ ಚಿತ್ರಣ ನೀಡಿದ್ದು ಲೇಖಕಿ ಶೈಲಜಾ ಎನ್ ಅವರು…

ಈ ‘ಏಕಾಕಿ’ಯಾದ ಸಾಧನೆ ಹೊಸ ಹೊಸ ಭರವಸೆಗಳನ್ನು ಹುಟ್ಟಿಸಿದ್ದು ದಿಟವೇ… ಕೋವಿಡ್-೧೯ ತರುವಾತದ ಜಗತ್ತು, ಅದರ ಜೊತೆಗೆ ಎರವಲು ಬಂದ ಕೊರತೆಗಳು, ಅನಿರ್ದಿಷ್ಟತೆಗಳು ಯಾವುದೇ ಕಲೆಯ ಸೃಷ್ಟಿಗೆ, ಅಭಿವ್ಯಕ್ತಿ ಮಾಧ್ಯಮಗಳ ಕ್ರಿಯಾಶೀಲತೆಗೆ ಯಾವತ್ತೂ ಅಡ್ಡಿಯಾಗಲಾರವು ಅಂಬುದನ್ನು ಈ ಅರ್ಜುನ್ ಸುಬ್ರಮಣ್ಯ ಎಂಬ ಒಬ್ಬ ಪ್ರತಿಭೆ ಸಾರಿ ಸಾರಿ ಹೇಳುತ್ತಿರುವುದು ಬಹು ಮುಖ್ಯ ಅಲ್ಲವೇ.. ?

“ನಿನ್ನ ರೂಪವ ಮರೆತು ಹೊಸ ಚಿತ್ರ ಬರೆಯುತ್ತೇನೆ” ಎಂದು ಡೈರೆಕ್ಟ್ ಆಗಿ ದೇವರಿಗೆ ಪತ್ರ ಬರೆವ ಮೂಲಕ, ಲೇಖಕಿ ಅಂಜನಾ ಹೆಗಡೆ ಯವರು ಬಂಧಗಳ ತೊರೆವ ಕ್ಷಿಪ್ರ ಕ್ರಾಂತಿಗೆ ನಾಂದಿ ಹಾಡುತ್ತಾರೆ ಈ ಕವಿತೆಯ ಮೂಲಕ….