ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರವೀಂದ್ರನಾಥ ದೊಡ್ಡಮೇಟಿ
ಇತ್ತೀಚಿನ ಬರಹಗಳು: ರವೀಂದ್ರನಾಥ ದೊಡ್ಡಮೇಟಿ (ಎಲ್ಲವನ್ನು ಓದಿ)

ಬಾಪೂಜಿ..
ನಡೆದು ಬಂದಿರಾ
ನಮ್ಮ ಮನೆಗೆ,
ನಡೆದು ಬಂದಿರಾ
ನಮ್ಮ ಮನದೊಳಗೆ..!

ಎಂದೂ ಮಾಸದ ನಗುವ ಮೊಗದಿ
ಕರುಣೆ ಸೂಸುವ ಕಣ್ಣುಗಳಲಿ
ನಿಮ್ಮ ಒಡಲೊ ತಾಯಿಯ ಮಡಿಲು
ತಂದೆಯ ಸ್ಪರ್ಶ ಪ್ರೀತಿ ಯ ಕಾವಲು..!!

ಎದುರಿಗೆ ಬಂದವರಾರನೂ
ಅವರಿವರೆನ್ನದೆ..ನಮ್ಮವರು..ನಮ್ಮವರೆಂದು
ಅಪ್ಪಿಕೊಂಡೆ.. ಕರುಳ ಕಕ್ಕುಲಾತೆಯ ತೋರಿದಿರಿ..!
ಮೈಗೆ ಬಟ್ಟೆ ಇಲ್ಲದವರ ನೋವುಗಳ ಅರಿತು
ನೀವು ನಿಮ್ಮ ಮೈ ಬಟ್ಟೆ ಗಳನೇ ತೊರೆದು
ಅವರ ನೋವು.. ಸಂಕಟಗಳಿಗೆ
ಜೋಳಿಗೆ ಒಡ್ಡಿ ಬೇಡುತಾ ನಡೆದಿರಿ.. !!

ಚಿಂದಿ ಉಟ್ಟ ಮಕ್ಕಳನು
ಎತ್ತಿ ಎದೆಗಪ್ಪಿ ಮುದ್ದಿಸಿ ನಡೆದು ನಡೆದು
ಅವರ ಕತ್ತಲು ದಾರಿಗಳಲಿ ಬೆಳಗುವ
ದೀಪಗಳನು ಹಚ್ಚುತಾ ಹೋದಿರಿ..!!

ನೀವು ಹೋದ ದಿಕ್ಕಿನತ್ತ
ನೋಡುತ್ತ ನಿಂತ ಮಕ್ಕಳು ಕೇಳುತಿಹವು..
ಈಗ ಹೋದ ಬಾಪೂಜಿ..!
ಮತ್ತೆ ಬರುವೆನೆಂದು..?..!!!..

ಶ್ರೀ ಕೃಷ್ಣ sculptor.. ಇವರ ಮಹಾತ್ಮ ಗಾಂಧೀಜಿಯವರ..ಸುಂದರಮೂರ್ತಿಯ ಕಂಡು ಬರೆದ ಕವನವಿದು..