ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಮತಾ ಆರ್. ಆಂಗ್ಲಾನುವಾದದ ಮೂರು ಕವಿತೆಗಳು

ಸಮತಾ ಆರ್.
ಇತ್ತೀಚಿನ ಬರಹಗಳು: ಸಮತಾ ಆರ್. (ಎಲ್ಲವನ್ನು ಓದಿ)

ಆಂಗ್ಲ ಅನುವಾದಿತ ಕವಿತೆ –

It’s not easy to be at the brim…

Peacock on a saree border,
Flower at the verge of a fence,
Oil burning off in a lamp
on a worshipping plate.
It’s not easy to be at the brim..

Cherishing thread beading
soft Jasmine garland,
Mother cuddling, cherishing
in her lap quilt,
It’s not easy to be at the brim..

Love waves hands,
Sitting in the last row,
Beauty smiles with
a crystal clear mind.
It’s not easy to be at the brim.

It’s not easy to be at the brim
Of any country, language
Caste, religion or colour.

Translated by Samatha.R.

Source :Kannada by– Jayashri.B.Kadri.

ಜಯಶ್ರೀ ಬಿ ಕದ್ರಿ
ಜಯಶ್ರೀ ಬಿ ಕದ್ರಿ

ಮೂಲ ಕವಿತೆ :

ಅಂಚಿನಲ್ಲಿರುವುದು ಸುಲಭವಲ್ಲ

ಸೀರೆಯಂಚಿನ ನವಿಲು
ಬೇಲಿಯಂಚಿನ ಹೂವು
ಆರತಿಯ ತಟ್ಟೆಯಲಿ
ಉರಿದು ಹೋಗುವ ತೈಲ
ಅಂಚಿನಲ್ಲಿರುವುದು ಸುಲಭವಲ್ಲ

ಮೆತ್ತನೆಯ ಮಲ್ಲಿಗೆಯ
ಹಾರ ಪೊರೆಯುವ ದಾರ
ಮಡಿಲ ಕೌದಿಯಲವಚಿ ಮರಗುವ
ಪೊರೆಯುವ ಮಾತೆ
ಅಂಚಿನಲ್ಲಿರುವುದು ಸುಲಭವಲ್ಲ

ಕೊನೆಯ ಸಾಲಲಿ ಕುಳಿತು
ಕೈಯ ಬೀಸುವ ಒಲವು
ತಿಳಿಗೊಳದ ಮನದಲ್ಲಿ
ಮುಗುಳು ನಗುವಾ ಚೆಲುವು
ಅಂಚಿನಲ್ಲಿರುವುದು ಸುಲಭವಲ್ಲ

ದೇಶ ಭಾಷೆಯ ಗಡಿಯ
ಜಾತಿಮತ ಬಣ್ಣಗಳ
ಅಂಚಿನಲ್ಲಿರುವುದು
ಸುಲಭವಲ್ಲ.

– ಜಯಶ್ರೀ ಬಿ ಕದ್ರಿ

ಆಂಗ್ಲ ಅನುವಾದಿತ ಕವಿತೆ –

Quest is a disease…

What more can a vessel hold
than its volume,?
Only you can tell me.
Is there any cause and effect
For  filling and filling,
Again and again.

Poetry and science
can never  mate,
You are also aware of this fate.

The vessel is overflowing
by the speed of filling,
The spilt is evaporating.
A small, almost invisible crack
is now adhering to the bottom,

The heart, of a fistful size,
that throbs,
the blood that flows,
hold the life within,
You too had by hearted this,
Just like  us.
“Is life all about just dry facts of science?”
Your quest is also right.

This soft heart holds
so much agony as a boulder,
Yearns with every beat,
for unquenched desire,
Even after so much is said and done.

You, who believes beyond all,
have stupid expectations.
But  there is this longing
in all the love filled souls.

Look there,
A marvellous surprise
Is coming about.
While allowing to seep in,
the soil gets wet.
The blooming little blue flower
on the fence smiles,
Revealing unconditional love.

Is there really a heart vessel
As big as the earth,?
Which will not get emptied
even after pouring abound.?

There is no proof for everything,
Even if it’s there,
can’t question anything.
The list of those left for the quest,
begins with Akka atop,
It’s like that only,
A disease that affects,
till the life stops.

Translated by Samatha.R

Source- Kannada By Smitha Amrithraj. Sampaaje.

ಮೂಲ ಕವಿತೆ

    ಸ್ಮಿತಾ ಅಮೃತರಾಜ್. ಸಂಪಾಜೆ.

ಹುಡುಕಾಟವೆಂಬುದು ವ್ಯಾಧಿ
________________________

ಒಂದು ಪಾತ್ರೆಯ ಗಾತ್ರ
ತನ್ನ ಪಾತ್ರಕ್ಕಿಂತ ಹೆಚ್ಚಿಗೆ
ಇನ್ನೇನು ಭರಿಸಲು ಸಾಧ್ಯ
ನೀನೇ ಹೇಳು?
ಮೊಗೆದು ಮೊಗೆದು ಮತ್ತೂ ಮತ್ತೂ
ಸುರಿದು ತುಂಬಿದ್ದಕ್ಕೆ ಕಾರ್ಯ ಕಾರಣವುಂಟೇ?


ಕವಿತೆಗೂ ವಿಜ್ಞಾನಕ್ಕೂ ಕೂಡಿ
ಬರದು ಸಖ್ಯ
ಇದು ನಿನಗೂ ಗೊತ್ತಿರುವಂತ
ಸತ್ಯ.

ಸುರಿಯುವ ಓಘಕ್ಕೆ
ತುಂಬಿದ್ದೂ ಚೆಲ್ಲಿ ಆರಿ ಹೋಗುತ್ತಿದೆ
ಕಂಡೂ ಕಾಣದಂತಿರುವ ಸಣ್ಣದೊಂದು
ಬಿರುಕು ಪಾತ್ರದ ತಳಕ್ಕೀಗ
ಅಡರಿಕೊಂಡಿದೆ.

ಹಿಡಿ ಹೃದಯ ಮುಷ್ಟಿ ಗಾತ್ರ
ಎದೆ ಬಡಿತ ರಕ್ತ ಸಂಚಲನ
ಹಿಡಿ ಜೀವ ಇಲ್ಲೇ ಹಿಡಿದು ನಿಂತಿದೆಯೆನ್ನುವುದು
ಎಲ್ಲರಂತೆ ನೀನೂ ಓದಿ ಉರು ಹೊಡೆದವಳೆ.
ಬದುಕು ಬರೇ ಶುಷ್ಕ ವಿಜ್ಞಾನವೇ? ಅನ್ನುವ ನಿನ್ನ
ಮರು ತರ್ಕ ಕೂಡ ಸರಿಯೇ.

ಮಿದು ಹೃದಯದೊಳಗೆ
ಬಂಡೆ ಗಾತ್ರ ದುಗುಡ
ಪ್ರತೀ ಬಡಿತಕ್ಕೂ ಉಲಿವ ಧ್ಯಾನ
ಕೊಟ್ಟಷ್ಟೂ ಪಡೆದಷ್ಟೂ ತೀರದ
ಉಸಿರ ಸುಖದ ಕಂಪನ..

ಈ ಅತೀತಗಳಾಚೆಗೇ ನಂಬಿಕೆ ಇಡುವ
ನಿನಗೋ ಹುಂಬ ನಿರೀಕ್ಷೆ
ಒಲವಿಗೆ ಬಿದ್ದ ಜೀವಗಳದ್ದು ಬಿಡಿ,
ಇದು ಸಹಜ ತಹತಹಿಕೆ.

ಅಕೋ ಅಲ್ಲಿ..
ಅತೀತ ಅಚ್ಚರಿಯೊಂದು ಘಟಿಸುತ್ತಿದೆ.
ಇಂಗಿಸಿಕೊಳ್ಳುತ್ತಲೇ ತೇವಗೊಳ್ಳುವ ನೆಲ
ಅಕಾರಣ ಪ್ರೀತಿಗೆ ದ್ಯೋತಕವಾದ ಹಾಗೆ
ಬೇಲಿ ಸಾಲಿನ ಮೇಲೆ ಅರಳಿ ನಿಂತ
ಪುಟ್ಟ ನೀಲಿ ಹೂ ನಗೆ.

ಭೂಮಿಯಂತ  ಹೃದಯ ಪಾತ್ರೆ
ನಿಜಕ್ಕೂ ಇದ್ದೀತೇ?
ಧಾರೆ ಧಾರೆ ಸುರಿದರೂ ಬರಿದಾಗದೇ
ಹಾಗೇ ಉಳಿದೀತೇ?

ಎಲ್ಲವಕ್ಕೂ ಇಲ್ಲಿ ಸಾಕ್ಷ್ಯವಿಲ್ಲ
ಇದ್ದರೂ ಪ್ರಶ್ನಿಸುವ ಹಾಗಿಲ್ಲ
ಅಕ್ಕನಿಂದಲೇ ಶುರುಗೊಂಡಿದೆ ಯಾದಿ ಹುಡುಕಾಟವೆಂಬುದು ಹೀಗೆ..
ಅದು ಜನುಮಕ್ಕಂಟಿದ ವ್ಯಾಧಿ.

    ಸ್ಮಿತಾ ಅಮೃತರಾಜ್. ಸಂಪಾಜೆ.

ಆಂಗ್ಲ ಅನುವಾದಿತ ಕವಿತೆ – ೩

And…

I don’t feel like speaking Glück,
Resting my chin on the knee
Whenever  I see,
The world through the thin window grills,
Tree laden with greenary,the sky unbound.
Hear the sounds of the  birds chirping,
sitting hidden somewhere.

I open the door slowly,slowly,
The leftover light pounces on me,
like fighting bulls.
Frightened by the new form of embrace
by the trading words,
Fingers freeze without any movement.

“Why are you so much detached from the light”she screams from inside…
“No,no,at nights
whenever he slept turning his back,
I really searched for
the little streaks of light
Fixing my gaze on the blades
of the rotating ceiling fan..”

Whenever the attacking gilt worms,
felling off their wings,
smear the body of the nights,
again and again,
the words are lost somewhere.
I speak something other than to be said,
The unsaid dies,
at the threshold of the heart,
Arising a deep mourning…

“Yuck” closing the door with a thud,
I came running inside.
Leaving the tree,that bird, and
the same sky outside.
Felt relieved,
And,
Now for me ,truly,
Speaking feels like adultery….

Translated by Samatha.R

Source : Kannada by Deepthi Bhadravathi.

ದೀಪ್ತಿ ಭದ್ರಾವತಿ.

ಮತ್ತೂ…

ಮಾತು ಬೇಕೆನ್ನಿಸುವುದಿಲ್ಲ ಗ್ಲಿಕ್‌
ಮೊಣಕಾಲಿಗೆ ಗದ್ದ ಊರಿ
ಸಣ್ಣ ಕಿಟಕಿಯ ಸರಳಿನಿಂದ
ಜಗತ್ತು ನೋಡುವಾಗಲೆಲ್ಲ
ಹಸಿರು ತುಂಬಿದ ಮರ
ಸ್ಪಚ್ಛಂಧ ಆಗಸ ಮತ್ತು
ಎಲ್ಲೋ ಕೂತು
ಚಿಂವ್‌ ಗುಡುವ ಹಕ್ಕಿಗಳ
ಸದ್ದು ಕೇಳಿಸುತ್ತದೆ..
ಬಾಗಿಲು ತೆರೆಯುತ್ತೇನೆ
ನಿಧಾನಕ್ಕೆ ನಿಧಾನಕ್ಕೆ
ಅಳಿದುಳಿದ ಬೆಳಕೆಲ್ಲ
ಕಾಳಗಕ್ಕಿಳಿದ ಗೂಳಿಗಳ
ಹಾಗೆ ಮೇಲೆರಗುತ್ತವೆ.
ತಬ್ಬುವ ಹೊಸ ಪರಿಯ ಶಬ್ಧ ಸಂತೆಗೆ
ಬೆದರಿ
ಬೆರಳುಗಳು ಹಾಗೆಯೇ ಚಲಿಸದೆ
ನಿಲ್ಲುತ್ತವೆ..
“ಬೆಳಕೆಂದರೆ ಅಷ್ಟು ಅಸಡ್ಡೆಯೆ ನಿನಗೆ”
ಒಳಗಿನ ಅವಳು ಜೋರು ಕೂಗುತ್ತಾಳೆ..
“ಇಲ್ಲ, ಇಲ್ಲ, ರಾತ್ರಿಗಳಲ್ಲಿ
ಅವ ಬೆನ್ನು ತಿರುಗಿಸಿ ಮಲಗಿದಾಗಲೆಲ್ಲ
ಸುತ್ತುವ ಸೀಲಿಂಗ್‌ ಫ್ಯಾನಿನಲಿ
ಕಣ್ಣು ನೆಟ್ಟು
ಬೆಳಕಿನ ಪುಟ್ಟ ಪುಟ್ಟ ಗರಿಗಳ ಹುಡುಕಿದ್ದು ಸುಳ್ಳಲ್ಲ”
ಮೇಲೆರಗಿದ ಗಿಲೀಟು ಹುಳುಗಳು
ರೆಕ್ಕೆ ಕಳಚಿ
ಮತ್ತೆ ಮತ್ತೆ ಇರುಳುಗಳ
ಮೈ ಮೆತ್ತಿದಾಗಲೆಲ್ಲ ಮಾತುಗಳು
ಎಲ್ಲೆಲ್ಲೋ ಕಳೆದು
ಏನೋ ಆಡಲು ಹೋಗಿ ಮತ್ತೇನೋ
ಆಡಿ
ಆಡದೇ ಉಳಿದದ್ದು ಎದೆಯ ಬಾಗಿಲಲ್ಲೆ
ಸತ್ತು ರೋಧನೆ ಎಬ್ಬಿಸಿ..
“ಥತ್”‌ ಬಾಗಿಲು ದಢಾರನೆ ಮುಚ್ಚಿ
ಒಳಕ್ಕೆ ಓಡಿ ಬರುತ್ತೇನೆ..
ಕಿಟಕಿಯಾಚೆಗಿನ ಮರ
ಆ ಹಕ್ಕಿ ಮತ್ತು ಅದೇ
ಆಗಸ …
ನಿರಾಳವೆನ್ನಿಸುತ್ತದೆ..
ಮತ್ತು
ನಿಜಕ್ಕೂ  ನನಗೀಗ ಮಾತು
ಹಾದರವೆನ್ನಿಸುತ್ತದೆ.

ದೀಪ್ತಿ ಭದ್ರಾವತಿ

English translations by Samata R.

ಸಮತಾ ಆರ್.
ಸಮತಾ ಆರ್.