ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಲಹರಿ

ಪೇಳುವೆನೀ ಕಥಾಮೃತವಾ… ಎಂಬ ಸಾಲಿನ ಹಿಂದೆಯೇ ಆರ್ಭಟದ ಚಂಡೆ ಮದ್ದಳೆಯ ಬಿಡ್ತಿಗೆ ಹೊಡೆದದ್ದು ಕೇಳಿದೊಡನೆ ಒಹೋ ಕತೆ ಶುರುವಾಯ್ತು ಅಂತಲೇ ಲೆಕ್ಕ……(ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ)

ಪ್ರೀತಿಯ ಚಡಪಡಿಕೆಯಲ್ಲಿ ಸಂದೇಶಗಳ ವಿನಿಮಯ.. ಇನ್ನೊಬ್ಬರು ಅದನ್ನು ಓದಿದಾಗ ಉಂಟಾಗಬಹುದಾದ ಭಾವಗಳ ಮೇಲಾಟಕ್ಕೆ ಪ್ರತಿ ಸಲವೂ ನಾಂದಿ ಹಾಡುವುದು ಅದೇ ಬ್ಲೂ ಟಿಕ್.. ಅವನು ಅಥವಾ ಅವಳು ಇದನ್ನು ಓದಿದ್ದಾಳೆ… ಪ್ರತಿಕ್ರಿಯೆ ಏನಿರಬಹುದು.. ಅದೇ ಬ್ಲೂ ಟಿಕ್ ನ ಸುತ್ತ ಲಹರಿಯನ್ನು ನವಿರಾಗಿ ಬರೆದವರು ನಂದಿನಿ ಹೆದ್ದುರ್ಗ.. ಓದಿದರೆ ಬ್ಲೂ ಟಿಕ್ ಖಂಡಿತ..✓✓

ಭಾರತದ ಇಂದಿನ ಪರಿಸ್ಥಿತಿಗೆ ಬೇಕಾಗಿರುವುದು ಸನಾತನ ಹಿಂದೂ ಧರ್ಮವೇ ? ಬುದ್ಧ ಮಹಾವೀರ ಚಿಂತನೆಗಳೇ ? ಆಚಾರ್ಯ ತ್ರಯರ ಆಚರಣೆಗಳೇ ? ಭಕ್ತಿ ದಾಸ ಪಂಥದ ನಂಬಿಕಗಳೇ ? ಬಸವಣ್ಣನವರ ಸಮಾನತೆಯೇ ? ವಿವೇಕಾನಂದರ ವಿಚಾರಗಳೇ ? ಗಾಂಧಿ ತತ್ವಗಳೇ ? ಅಂಬೇಡ್ಕರ್ ಸಂವಿಧಾನವೇ ? ಆರೆಸ್ಸೆಸ್ ಸಿದ್ದಾಂತವೇ ? ಕುವೆಂಪು – ಲೋಹಿಯವಾದವೇ ?

ಸಾಹಿತ್ಯ ಹಾಗೂ ಫಿಲಾಸಫಿಯನ್ನು ಆಳವಾಗಿ ಅಧ್ಯಯನ ಮಾಡಿದ ಜನಾರ್ದನ ತುಂಗ ಅವರು ಬರೆಯುವ ಡಾ.ಗೋವಿಂದ್ ಹೆಗಡೆಯವರ ಕವಿತಾ ಸರಣಿ ಮಾತು-೧ ರ ವಿಮರ್ಶೆ..

ಜೀವನಶೈಲಿ ತರಬೇತುದಾರ ಮತ್ತು ಬರಹಗಾರರಾದ ಪ್ರೊ.ಸಿದ್ದು ಯಾಪಲಪರವಿ. ಕಾರಟಗಿ ಅವರು ಪರೀಕ್ಷಾ ಫಲಿತಾಂಶದ ಹಿನ್ನೆಲೆಯಲ್ಲಿ ಹಿನ್ನಡೆಗೊಳಗಾದವರಿಗಾಗಿ ಅಷ್ಟೇ ಅಲ್ಲ ಎಲ್ಲ ವರ್ಗದವರಿಗೂ ಖಿನ್ನತೆಯನ್ನು ನಿಯಂತ್ರಿಸಿ ಬದುಕನ್ನು ಗೆಲ್ಲುವ ನಿಟ್ಟಿನಲ್ಲಿ ಎಲ್ಲರೂ ಓದಿ ಹಂಚಲೇಬೇಕಾದ ವಿಷಯದ ಬಗ್ಗೆ ಪ್ರಸ್ತುತ ಅಂಕಣದಲ್ಲಿ ಬರೆಯುತ್ತಾರೆ….

ಮನೆಯ ನಿರ್ವಹಣೆಯನ್ನು ಕೆಲವರು ಸೀಮಿತ ಚಟುವಟಿಕೆಯೆಂದು ಭಾವಿಸಿ ನಿಕೃಷ್ಟವಾಗಿ ಕಾಣುತ್ತಾರೆ ಹಾಗೂ ಕಡೆಗಣಿಸುತ್ತಾರೆ. ಆದರೆ ಮನೆ ಎನ್ನುವುದು ಹಲವಾರು ಸಾಮಾಜಿಕ ಸಮಸ್ಯೆಗಳ ಉಗಮಕ್ಕೆ ಅದೇ ರೀತಿ ನಿವಾರಣೆಗೆ ಮೂಲ ನೆಲೆಯಾಗಿರುತ್ತದೆ…….!…(ಮುಂದೆ ಓದಿ..)

ಹೀಗೊಂದು ಹಸೀ ಪ್ರೇಮದ ಕಾವಿಗೆ ಉತ್ತರವಾಗಿ ಧಾರಾಕಾರ ಭಾವಗಳ ಮಳೆ ಸುರಿಸುವಂತೆ ಬರೆಯುತ್ತಾರೆ ಶಿವಲೀಲಾ ಹುಣಸಗಿ ಅವರು.. ಇಲ್ಲಿ ಕಲ್ಪನೆಗಳೂ ವಾಸ್ತವವೇ, ಕನವರಿಕೆಗಳೂ ಮನವರಿಕೆಗಳೇ ಎಂಬಷ್ಟು ನೈಜವಾಗಿ ಚಿತ್ರಿತವಾಗಿದೆ.. ಪ್ರೀತಿಸಿದವರು ಹಾಗೂ ಪ್ರೀತಿಸದೇ ಇರುವವರು ಮಿಸ್ ಮಾಡಿ ಕೊಳ್ಳದೆ ಓದಬೇಕಾದ ನೈಸರ್ಗಿಕ ಒಲವಿನ ಚಿಲುಮೆ ಈ ಲಹರಿ…!

ಮಹಾಭಾರತದ ಕರ್ಣ ಯಾವತ್ತಿಗೂ ವಿಮರ್ಶೆಗೆ ಒಳಪಟ್ಟ, ಹಲವು ಆಯಾಮಗಳಲ್ಲಿ ಅಳೆಯಲ್ಪಟ್ಟ ಪಾತ್ರ. AB Pachchu ಅವರು ಬರೆದ ಈ ಲೇಖನದಲ್ಲಿ ಕರ್ಣನ ಬಗ್ಗೆ ತಮ್ಮ ವಿಚಾರ ಲಹರಿಯನ್ನು ಹರಿಬಿಡುವುದನ್ನು ಸವಿಯಬಹುದು..

ಕೂಸೊತ್ತ ಆನೆ ಬಾಯಿಯಲ್ಲಿ ಮದ್ದು ಸಿಡಿದು ಸತ್ತಾಗ, ಹಾವಿಗೆ ಕಡ್ಡಿಯಲ್ಲಿ ಬಡಿದು ಜಿಂಕೆ ಬಿಡಿಸಿದಾಗ, ಕಾಡಾನೆಗೆ ರಕ್ಷಕರೇ ಗುಂಡು ಹಾರಿಸಿದಾಗ…

“…ಅರ್ಧಂಬರ್ಧ ಕಾಣುವ ಕಿಟಕಿ ಗಾಜುಗಳ ಮೇಲೆ ಮಳೆಹನಿಗಳು ಜಾರುವಾಗಲೆಲ್ಲಾ ನಿನ್ನ ಹಣೆಯ ಮೇಲೆ ಪರೇಡಿಗೆ ಹೊರಡುವವರಂತೆ ಶಿಸ್ತಾಗಿ ಕೂರುವ ಬೆವರ ಹನಿಗಳನ್ನ ಕೆಣಕಬೇಕೆಂದಿದ್ದೇನೆ…” ಎಂದು ಬರೆಯುವ ಶ್ರೀ ತಲಗೇರಿಯವರ ಭಾವ ಲಹರಿಗೆ ಸಿಲುಕಿ ತೇಲುವುದೊಂದೇ ಚಂದ…!

“ಹೊತ್ತು ಕಂತಿದ ಮೇಲೆ ದಿಕ್ಕುಗಳ ಗುರುತಿಸಲಾಗುವುದಿಲ್ಲ… “ಎಂದು ಆರಂಭಿಸುವ ಕವಿ ಮಧುಸೂದನ ರಂಗೇನಹಳ್ಳಿ ಅವರ ಈ ಕವಿತೆಯಲ್ಲಿ “ನಡುವಿನವ” ಸಂಕಟವನ್ನು ಇಷ್ಟು ಶಕ್ತವಾಗಿ ಚಿತ್ರಿಸಿದ್ದು ಓದಿಯೆ ಸವಿಯಬೇಕು.. ಈ ಕ್ಲಾಸ್ಸಿಕ್ ಕವಿತೆ ನಿಮಗಾಗಿ..

“ಹಳೆಯದಾದಷ್ಟೂ ಪತ್ರಗಳ ಪರಿಮಳ ಹೆಚ್ಚುವುದು, ನೆನಪುಗಳು ಮಾಗುವವು….” ಎನ್ನುತ್ತಾ ತಲಗೇರಿಯವರು ಗೋಪಾಲ ಕೃಷ್ಣನ ಕೈಲಿಂದ ರಾಧೆಗೆ ಬರೆಸುವ ಪತ್ರ ಅಪ್ಯಾಯಮಾನ, ಚೇತೋಹಾರಿ… ಮಿಸ್ ಮಾಡದೇ ಓದಿ…

ನಿಧಿಮಾ ಎಂಬ ಹೆಣ್ಣನ್ನು ಹುಡುಕುತ್ತಾ ಹೋರಾಟ ಲೇಖಕರಿಗೆ ದೊರಕಿದ್ದೇನು? ಹುಬ್ಬಳ್ಳಿ ಭಾಷೆಯಲ್ಲಿ ಹೆಣೆದ ಒಂದು ಭಾವ ಲಹರಿ… ನಾಗರಾಜ ಬಸರಕೋಡ ಅವರ ಲೇಖನಿಯಲ್ಲಿ..