ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕತೆ-ಕವಿತೆ

ಕಥೆ ….

ತಿರುಪತಿ ಭಂಗಿ ಅವರ ಸುಲಲಿತವಾದ ನಿರೂಪಣೆ, ಪಾತ್ರ ಕಟ್ಟಿಕೊಡುವ ನೈಜತೆ ಜೊತೆಗೆ ಬಾಗಲಕೊಟೆಯ ಢಾಳಾದ ಭಾಷೆ, ಶೈಲಿ.. ಅವರ ಈ “ಇಜ್ಜೋಡು” ಕಥೆಯನ್ನೇ ನೋಡಿ.. ಕಥೆಯು ಸ್ಟಿರಿಯೋ ಟೈಪ್ ಆಗಿ ಇರದೇ ಹೊಸ ಆಯಾಮವನ್ನು ಕಂಡು ಕೊಳ್ಳುತ್ತದೆ.. ನಿಮ್ಮ ಓದಿಗಾಗಿ..

ಸಮಯದ ಪರಿವೆಯನ್ನೇ ಪ್ರಶ್ನಿಸುತ್ತಾ ಹಳೆಯ ಪೆಟ್ಟಿಗೆಯಲಿ
ಮರೆತಿರುವುದೇನೊ ಉಳಿದಿದೆ ಎಂದು ಬರೆದದ್ದು ಸಂವೇದನೆಗಳ ಕವಿ ರಾಮ್ ಕುಮಾರ್. ಸಂದರ್ಭ: A day with an Alzheimer patient. ಈ ವಿಶಿಷ್ಟ ಕವಿತೆ ನಿಮಗಾಗಿ..

“ಹಳೆಯದಾದಷ್ಟೂ ಪತ್ರಗಳ ಪರಿಮಳ ಹೆಚ್ಚುವುದು, ನೆನಪುಗಳು ಮಾಗುವವು….” ಎನ್ನುತ್ತಾ ತಲಗೇರಿಯವರು ಗೋಪಾಲ ಕೃಷ್ಣನ ಕೈಲಿಂದ ರಾಧೆಗೆ ಬರೆಸುವ ಪತ್ರ ಅಪ್ಯಾಯಮಾನ, ಚೇತೋಹಾರಿ… ಮಿಸ್ ಮಾಡದೇ ಓದಿ…

ನಿಧಿಮಾ ಎಂಬ ಹೆಣ್ಣನ್ನು ಹುಡುಕುತ್ತಾ ಹೋರಾಟ ಲೇಖಕರಿಗೆ ದೊರಕಿದ್ದೇನು? ಹುಬ್ಬಳ್ಳಿ ಭಾಷೆಯಲ್ಲಿ ಹೆಣೆದ ಒಂದು ಭಾವ ಲಹರಿ… ನಾಗರಾಜ ಬಸರಕೋಡ ಅವರ ಲೇಖನಿಯಲ್ಲಿ..

ಆಮಿನಾದಳಿಗೆ ಮಿಸ್ರಿ ಮಾಲೆಯ ಕನಸು… ಅದಕ್ಕಾಗೇ ಸಾವಿರಾರು ರೂಪಾಯಿ ಕಲೆ ಹಾಕುತ್ತಿದ್ದಾಳೆ… ಇನ್ನೇನು ಕೂಡಿ ಬಂತು ಅನ್ನುವಷ್ಟರಲ್ಲೇ ಏನಾಯ್ತು.. ಲೇಖಕ ಅನ್ಸಾರಿಯವರ ಹೃದಯ ಸ್ಪರ್ಶಿ ಕಥನ ವಿಥ್ ಪಾಸಿಟಿವ್ ವೈಬ್ಸ್…

“……ಭರಮ್ಯಾ ಆ ರಾತ್ರಿ ಎಂದೂ ಮುಗಿಲು ನೋಡಿಯೇ ಇಲ್ಲ, ಅನ್ನುವ ರೀತಿಯಲ್ಲಿ ನೋಡುತ್ತಲಿದ್ದ. ಮುಗಿಲ ತುಂಬ ಚುಕ್ಕಿಗಳು ಕಿಕ್ಕಿರಿದು ಪಳಗುಟ್ಟುತ್ತಿದ್ದವು. ಇವೆಲ್ಲ ಸತ್ತವರ ಕಣ್ಣುಗಳು..! ಇದರಲ್ಲಿ ನಮ್ಮವ್ವನ ಕಣ್ಣುಗಳಾವು? ನಮ್ಮ ಅಪ್ಪನ ಕಣ್ಣುಗಳಾವು? …..”
ಭರಮ್ಯಾ ಎಂಬ ಪಾತ್ರ, ಅದಕ್ಕೆ ತಕ್ಕಂತೆ ಗ್ರಾಮ್ಯತೆಯ ಸೊಗಸು, ಕಲಾತ್ಮಕ ನಿರೂಪಣಾ ಶೈಲಿಯ ಜತೆಗೆ ಎಲ್ಲಿಯೂ ಹಿಡಿತ ತಪ್ಪದೆ, ಭೇಷ್ ಅನ್ನುವಂತೆ ಬರೆಯುತ್ತಾರೆ ಕಥೆಗಾರ ತಿರುಪತಿ ಭಂಗಿಯವರು. ಪೂರ್ತಿಯಾಗಿ ಓದಿಸಿಕೊಂಡು ಹೋಗುವ ಈ ಕಥೆ ನಮ್ಮ ನಸುಕು ಓದುಗರಿಗಾಗಿ….

ಊರಿನಿಂದ ಹೊರಟು ಮುಂಬೈಗೆ ರೈಲು ಹಿಡಿಯುವಾಗ ನನ್ನ ತಲೆ ತುಂಬಾ ನವ್ಯ ಧಾಟಿಯ ಚಿತ್ರವೊಂದು ಮೈತಳೆದು ನನ್ನನ್ನೇ ಆವರಿಸತೊಡಗಿ, ಮಾದಿಯ ಮನಸ್ಸಿನಲ್ಲಿರುವುದಾದರೂ ಏನು? ಈ ರೀತಿ ಹುಚ್ಚು ಕೆರಳುವ ಕಾರಣವಾದರೂ ಏನು ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಲೇ ಇದ್ದವು. ಶೈಲಾಳ ಮದುವೆಗೆಂದು ಊರಿಗೆ ಹೋಗುವ ತನಕ ಉತ್ತರಿಸಲಾಗದ ಪ್ರಶ್ನೆಗಳಿಗೆ ಉತ್ತರವೆಂಬಂತೆ ಆಘಾತವನ್ನುಂಟು ಮಾಡುವ ಸತ್ಯ ಸಂಗತಿ ನನ್ನೆದುರಿಗಿತ್ತು.
ಮಾದಿಯದು ಕಥೆಯನ್ನಲೇ…. ಜಯಲಕ್ಷ್ಮಿ ಪಾಟೀಲ್ ರ ಕಥೆಯಿಂದ

ಪ್ರಾಚೀನ ಕುರುದೇಶದಲ್ಲಿ ಉಷಿಸ್ತಿ ಚಾಕ್ರಾಯಣ ಎನ್ನುವವನೊಬ್ಬನಿದ್ದ. ಆತನ ಮಡದಿ ಆಟಿಕಿ ಎನ್ನುವವಳು. ಈತ ದರಿದ್ರನಾಗಿದ್ದ. ಒಂದು ಹೊತ್ತಿನ ಊಟಕ್ಕೂ ಪರದಾಡುವಷ್ಟು…

ರಾಮಾಯಣ ಇವತ್ತಿನ ಪರಿಸ್ಥಿತಿಯಲ್ಲಿ ನಡೆದಿದ್ರೆ ಸಿಚುವೇಶನ್ ಹೀಗಿರ್ತಿತ್ತಾ?
ವಿಶ್ವಾಸ್ ಭಾರದ್ವಾಜ್ ಅವರ ಕಲ್ಪನೆಯಲ್ಲಿ ಮೂಡಿದ ಹಿಲೆರಿಯಸ್ ಹಾಸ್ಯ ಲೇಖನ…

” ಇಲ್ಲಿಂದ ಮುಂದೆ ನಿನಗೆ ಸಿಗುವ ಬಹುತೇಕ ಜನರು ಭಾರತವನ್ನು ದ್ವೇಷಿಸುವಂತವರು.. ಹಾಗಾಗಿ ಅಲ್ಲೆಲ್ಲೂ ಒಬ್ಬ ಮುಸ್ಲಿಂ ಮನೆಯಲ್ಲಿ ವಾಸ್ತವ…

ತುಂಬಾ ಕಾಲದ ಹಿಂದೆ ಟಿಬೆಟ್ ನಲ್ಲಿ ಜೀವಿಸಿದ್ದ ನುಯೇನ್ ಎಂಬ ಮಹಿಳೆ ಬುದ್ಧ ಅಮಿತಾಭನ ಪರಮ ಭಕ್ತಳಾಗಿದ್ದಳು. ದಿನಕ್ಕೊಮ್ಮೆ ಹಲವು…