ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪೇಳುವೆನೀ ಕಥಾಮೃತವಾ… ಎಂಬ ಸಾಲಿನ ಹಿಂದೆಯೇ ಆರ್ಭಟದ ಚಂಡೆ ಮದ್ದಳೆಯ ಬಿಡ್ತಿಗೆ ಹೊಡೆದದ್ದು ಕೇಳಿದೊಡನೆ ಒಹೋ ಕತೆ ಶುರುವಾಯ್ತು ಅಂತಲೇ ಲೆಕ್ಕ……(ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ)

ಪ್ರೀತಿಯ ಚಡಪಡಿಕೆಯಲ್ಲಿ ಸಂದೇಶಗಳ ವಿನಿಮಯ.. ಇನ್ನೊಬ್ಬರು ಅದನ್ನು ಓದಿದಾಗ ಉಂಟಾಗಬಹುದಾದ ಭಾವಗಳ ಮೇಲಾಟಕ್ಕೆ ಪ್ರತಿ ಸಲವೂ ನಾಂದಿ ಹಾಡುವುದು ಅದೇ ಬ್ಲೂ ಟಿಕ್.. ಅವನು ಅಥವಾ ಅವಳು ಇದನ್ನು ಓದಿದ್ದಾಳೆ… ಪ್ರತಿಕ್ರಿಯೆ ಏನಿರಬಹುದು.. ಅದೇ ಬ್ಲೂ ಟಿಕ್ ನ ಸುತ್ತ ಲಹರಿಯನ್ನು ನವಿರಾಗಿ ಬರೆದವರು ನಂದಿನಿ ಹೆದ್ದುರ್ಗ.. ಓದಿದರೆ ಬ್ಲೂ ಟಿಕ್ ಖಂಡಿತ..✓✓

ಅಂದುಕೊಂಡ ನವರಾತ್ರಿ ಉತ್ಸವ ಬಂದೇ ಬಿಟ್ಟಿತು.ನವರಾತ್ರಿ ಯ ಮೊದಲ ದಿನ ಸಂಜೆ ‘ದೇವಿ ಮಾಹಾತ್ಮ’ ಹೇಳಲು ಸಜ್ಜಾದರು ಭಗವಂತಪ್ಪ.ಪುರಾಣ ಹೇಳುವುದಕ್ಕಾಗಿಯೇ ಮಾಡಿದ್ದ ಎತ್ತರದಲ್ಲಿ ಸ್ಥಳದಲ್ಲಿ ಆಸೀನಾರದರು,ಗಂಟಲನ್ನು ಸರಿಪಡಿಸಿಕೊಂಡು ಕುಳಿತಲ್ಲಿಂದಲೇ ಕಾಳಮ್ಮ ದೇವಿಗೆ ಮತ್ತೊಮ್ಮೆ ನಮಸ್ಕರಿಸಿ ದನಿ ತೆಗೆದು ಅನುಚಾನವಾಗಿ ಬಂದ ಪಧ್ಧತಿಯಂತೆ….

ಸುಮಾರು ಎಪ್ಪತ್ತು ಕನ್ನಡ ಮತ್ತು ಕೊಂಕಣಿ ನಾಟಕಗಳನ್ನು ರಚಿಸಿದ, ಮುಂಬಯಿಯ ಕನ್ನಡ ರಂಗಭೂಮಿಗೆ ನವಚೈತನ್ಯ ನೀಡಿದ ಒಬ್ಬ ವ್ಯಕ್ತಿಯ ಒಂದು ಫೋಟೋ ಕೂಡ ಗೂಗಲ್ಲಿನಲ್ಲಿ ಹುಡುಕಿದರೂ ಸಿಗೋದಿಲ್ಲ ಅನ್ನೋದು ಎಂಥ ಅನ್ಯಾಯವಲ್ಲವೇ!!

ಮಹಾರಾಷ್ಟ್ರದ ಪ್ರಸಿದ್ಧ ಕವಿ, ಸಾಹಿತಿ, ಸಮಾಜ ಸುಧಾರಕ ಶ್ರೀ ಲೋಕಶಾಹಿರ ಅಣ್ಣಾಭಾವು ಸಾಠೆ ಆಗಸ್ಟ್ ೧- ಅವರ ಜಯಂತಿ ಶತಮಾನೋತ್ಸವದ ಅಂಗವಾಗಿ ಗಡಿನಾಡ ಕನ್ನಡಿಗ ಮಲಿಕಜಾನ ಶೇಖ ಬರೆದ ವಿಶೇಷ ಲೇಖನ.

“ಹಲವು ವರ್ಷಗಳ ಕಾಲ ನಾನು ಓದುತ್ತಾ ಬಂದಿರುವ ಚೊಕ್ಕಾಡಿಯವರ ಯಾವ ಪದ್ಯವು ನನಗೆ ಕಳಪೆ ಎನ್ನಿಸಿದ್ದಿಲ್ಲ . ಅವರಿಂದ ನಾನು ಹಿಗ್ಗುತ್ತಲೇ ಬೆಳೆದಿದ್ದೇನೆ. ಚೊಕ್ಕಾಡಿಯವರ ಎಲ್ಲ ಪದ್ಯಗಳಲ್ಲೂ ಸ್ಪಷ್ಟತೆಗಾಗಿ ಕೆಲಸ ಮಾಡುವ ಕಸುಬುಗಾರಿಕೆ ಇರುತ್ತದೆ. ತಾನು ಹೇಳಿದ್ದು ಕೊನೆಯ ಪಕ್ಷ ತನಗಾದರೂ ಸ್ಪಷ್ಟವಾಗಿ ಇರಬೇಕೆಂದು ಬಯಸುವುದು ಶಿಷ್ಟಾಚಾರದ ಒಂದು ಅಗತ್ಯ ನಡವಳಿಕೆ ಎಂದು ನಾನು ತಿಳಿದಿದ್ದೇನೆ. ಚೊಕ್ಕಾಡಿ ಈ ಶಿಷ್ಟಾಚಾರವನ್ನು ಎಲ್ಲಿಯೂ ಬಿಡುವುದಿಲ್ಲ. ಇದಕ್ಕೆ ಕಾರಣ ಅವರಲ್ಲಿ ನಾವು ಕಾಣುವ ಎರಡು ದೊಡ್ಡ ಗುಣಗಳು: ಅವು ವಿನಯ ಮತ್ತು ಪ್ರಾಮಾಣಿಕತೆ. ಈ ಎರಡು ಗುಣಗಳು ಇವೆ ಎಂದು ಗ್ಯಾರಂಟಿ ಆದಮೇಲೆಯೇ ನಾವು ಕವಿಯನ್ನು ನಮ್ಮ ಒಳಗಿನಿಂದ ಆಲಿಸಲು ತಯಾರಾಗುತ್ತೇವೆ. ಹೀಗೆ ನಾವು ಆಲಿಸಬಹುದಾದ ನಮ್ಮ ನಡುವಿನ ಕವಿ ಚೊಕ್ಕಾಡಿಯವರು. ಅಡಿಗರ ನಂತರ ಬರೆಯುತ್ತಿರುವ ಮುಖ್ಯ ಕವಿಗಳಲ್ಲಿ ಒಬ್ಬರೆಂದು ಈ ಟಿಪ್ಪಣಿಗಳ ಮುಖಾಂತರ ಗುರುತಿಸಲು ನನಗೆ ಸಂತೋಷವಾಗುತ್ತದೆ.
– ಪ್ರೊ. ಯು ಆರ್ ಅನಂತಮೂರ್ತಿ
“ಚೊಕ್ಕಾಡಿಯ ಹಕ್ಕಿಗಳು”
ಸಮಗ್ರ ಕವಿತೆಗಳ ಸಂಕಲನ ದ ಬೆನ್ನು ಪುಟದಿಂದ.

ಈಗೀಗ ಪೆಟ್ರೋಲ್ ಬೆಲೆ ಏರಿಕೆ, ಟೊಮೆಟೊ ಬೆಲೆ ಏರಿಕೆ, ಬಸ್ ದರ ಏರಿಕೆ, ಇತ್ಯಾದಿ ಬೆಲೆ ಏರಿಕೆ ಸುದ್ದಿಗಳು ಮಾಮೂಲಾಗಿದೆ. ಇದರ ಹಿಂದೆಯೇ, ವೇತನ ಏರಿಕೆ ಬಗ್ಗೆ ಕೂಗಾಟ, ತುಟ್ಟಿ ಭತ್ಯೆ ಏರಿಕೆಯ ಬಗ್ಗೆ ಸುದ್ದಿಗಳೂ ಮಾಮೂಲಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ರೂಪಾಯಿಯ ಬೆಲೆಯೂ ಕುಸಿಯುತ್ತಿದೆ. ಬೆಲೆ ಏರಿಕೆ ಏಕಾಗುತ್ತಿದೆ? ಬೆಲೆ ಏರಿಕೆ ನೀಗಿಸಲು, ರಿಸರ್ವ್ ಬ್ಯಾಂಕ್ ಹೆಚ್ಚು ಹೆಚ್ಚು ನೋಟುಗಳ ಮುದ್ರಣ ಯಾಕೆ ಮಾಡುತ್ತಿಲ್ಲ. ಇದು ಜನ ಸಾಮಾನ್ಯರ ಪ್ರಶ್ನೆ. ಇದಕ್ಕೆ ಸ್ವತಃ ರಿಸರ್ವ್ ಬ್ಯಾಂಕಿನಲ್ಲಿ ಕರ್ತವ್ಯ ವಹಿಸಿದ್ದ ತಳುಕು ಶ್ರೀನಿವಾಸ್ ಅವರು ಸವಿವರವಾಗಿ ಬರೆದಿದ್ದಾರೆ.