ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಈಗೀಗ ಪೆಟ್ರೋಲ್ ಬೆಲೆ ಏರಿಕೆ, ಟೊಮೆಟೊ ಬೆಲೆ ಏರಿಕೆ, ಬಸ್ ದರ ಏರಿಕೆ, ಇತ್ಯಾದಿ ಬೆಲೆ ಏರಿಕೆ ಸುದ್ದಿಗಳು ಮಾಮೂಲಾಗಿದೆ. ಇದರ ಹಿಂದೆಯೇ, ವೇತನ ಏರಿಕೆ ಬಗ್ಗೆ ಕೂಗಾಟ, ತುಟ್ಟಿ ಭತ್ಯೆ ಏರಿಕೆಯ ಬಗ್ಗೆ ಸುದ್ದಿಗಳೂ ಮಾಮೂಲಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ರೂಪಾಯಿಯ ಬೆಲೆಯೂ ಕುಸಿಯುತ್ತಿದೆ. ಬೆಲೆ ಏರಿಕೆ ಏಕಾಗುತ್ತಿದೆ? ಬೆಲೆ ಏರಿಕೆ ನೀಗಿಸಲು, ರಿಸರ್ವ್ ಬ್ಯಾಂಕ್ ಹೆಚ್ಚು ಹೆಚ್ಚು ನೋಟುಗಳ ಮುದ್ರಣ ಯಾಕೆ ಮಾಡುತ್ತಿಲ್ಲ. ಇದು ಜನ ಸಾಮಾನ್ಯರ ಪ್ರಶ್ನೆ. ಇದಕ್ಕೆ ಸ್ವತಃ ರಿಸರ್ವ್ ಬ್ಯಾಂಕಿನಲ್ಲಿ ಕರ್ತವ್ಯ ವಹಿಸಿದ್ದ ತಳುಕು ಶ್ರೀನಿವಾಸ್ ಅವರು ಸವಿವರವಾಗಿ ಬರೆದಿದ್ದಾರೆ.

ಚೊಕ್ಕಾಡಿಯರಿಗೆ-ಎಂಬತ್ತಂತೆ… ಈ ಸಂಭ್ರಮದಲ್ಲಿ ಪತ್ರಿಕಾ ರಂಗದ ಉನ್ನತ ಸಾಧಕ , ನಿರೂಪಕ ,ಮಾಹಿತಿಗಳ ಕಣಜ ಎಂದೇ ಹೆಸರಾದ ಎನ್. ಎಸ್.ಶ್ರೀಧರಮೂರ್ತಿ ಅವರು ಬರೆದ ಲೇಖನ..

ಜಗತ್ತಿಗೆ ಹಲವು ಸಂಕಷ್ಟಗಳನ್ನು ತಂದೊಡ್ಡಿರುವ ಕೋವಿಡ್‌-19 ಹೊಸ ಸತ್ಯಗಳನ್ನೂ ನಮ್ಮೆದುರು ತೆರೆದಿಟ್ಟಿದೆ. ಓದು ಬರಹ ಕಲಿಯಲು ಶಾಲೆಯೊಂದೇ ತಾಣವಲ್ಲ ಎನ್ನುವುದೀಗ ಮನವರಿಕೆಯಾಗುತ್ತಿದೆ; ಕೆಲಸ ಮಾಡಲು ಕಚೇರಿಯೇನೂ ಅನಿವಾರ್ಯವಲ್ಲ ಎನ್ನುವುದೂ ಸಾಬೀತಾಗುತ್ತಿದೆ;

ಭಾರತದ ಇಂದಿನ ಪರಿಸ್ಥಿತಿಗೆ ಬೇಕಾಗಿರುವುದು ಸನಾತನ ಹಿಂದೂ ಧರ್ಮವೇ ? ಬುದ್ಧ ಮಹಾವೀರ ಚಿಂತನೆಗಳೇ ? ಆಚಾರ್ಯ ತ್ರಯರ ಆಚರಣೆಗಳೇ ? ಭಕ್ತಿ ದಾಸ ಪಂಥದ ನಂಬಿಕಗಳೇ ? ಬಸವಣ್ಣನವರ ಸಮಾನತೆಯೇ ? ವಿವೇಕಾನಂದರ ವಿಚಾರಗಳೇ ? ಗಾಂಧಿ ತತ್ವಗಳೇ ? ಅಂಬೇಡ್ಕರ್ ಸಂವಿಧಾನವೇ ? ಆರೆಸ್ಸೆಸ್ ಸಿದ್ದಾಂತವೇ ? ಕುವೆಂಪು – ಲೋಹಿಯವಾದವೇ ?

ಪ್ರೊ.ನಟರಾಜ ಅರಳಸುರಳಿ ಅವರಿಂದ ಚೊಕ್ಕಾಡಿ ಅವರಿಗೆ ಎಂಬತ್ತು ತುಂಬಿದ ಸಂಭ್ರಮದಲ್ಲಿ ಚಿತ್ರವಂದನೆ.

ಧೃಢವಾಗಿ ಬೆಳೆದ ಹುಣಸೆ ಮರಗಳು ನಡೆದು ಹೋದ ಕಾಲ ಘಟ್ಟಗಳನ್ನೆಲ್ಲ ದಾಖಲಿಸಿ ಕೊಂಡು ವರ್ತಮಾನದಲ್ಲೂ ನೆನಪುಗಳ ಲಹರಿಯನ್ನು ಮೂಡಿಸುವದಕ್ಕೆ ದೊಡ್ಡಮೇಟಿಯವರ ಈ ಚೆಂದದ ಕವಿತೆಯೇ ರುಜುವಾತು…!