ಮಾಗಿಯ ಕೋಗಿಲೆ ಇದು ಎದೆ ತೆರೆದು ಹಾಡಿದೆಇನ್ನೊಂದು ಬೆಳಗಿಗೆ ಮನವ ಮಿಡಿದು ಹಾಡಿದೆ ಈ ಹೊಳೆವ ಕಂಗಳಲಿ ಅದೋ ಬಂದಿದೆ…
‘ಬಂಗಾರ ಬಾಬ’ ಯಾರು..ಅವನ ಕಥೆ ಏನು..? ‘ಬಂಗಾರ ಬಾಬ’ ನ ರಸ ವಿದ್ಯೆಯ ಬಗ್ಗೆ ರಸವತ್ತಾಗಿ ಬರೆದವರು ಕಥೆಗಾರ ಧೀರೇಂದ್ರ ನಾಗರಹಳ್ಳಿ ಯವರು.
ಮಹಾಭಾರತದ ಕರ್ಣ ಯಾವತ್ತಿಗೂ ವಿಮರ್ಶೆಗೆ ಒಳಪಟ್ಟ, ಹಲವು ಆಯಾಮಗಳಲ್ಲಿ ಅಳೆಯಲ್ಪಟ್ಟ ಪಾತ್ರ. AB Pachchu ಅವರು ಬರೆದ ಈ ಲೇಖನದಲ್ಲಿ ಕರ್ಣನ ಬಗ್ಗೆ ತಮ್ಮ ವಿಚಾರ ಲಹರಿಯನ್ನು ಹರಿಬಿಡುವುದನ್ನು ಸವಿಯಬಹುದು..
ಕೂಸೊತ್ತ ಆನೆ ಬಾಯಿಯಲ್ಲಿ ಮದ್ದು ಸಿಡಿದು ಸತ್ತಾಗ, ಹಾವಿಗೆ ಕಡ್ಡಿಯಲ್ಲಿ ಬಡಿದು ಜಿಂಕೆ ಬಿಡಿಸಿದಾಗ, ಕಾಡಾನೆಗೆ ರಕ್ಷಕರೇ ಗುಂಡು ಹಾರಿಸಿದಾಗ…
“ನಗೆಯ ಒಲುಮೆಯ ನಾಚಿಕೆಯ ಉನ್ಮಾದದ ಸಂಚಲನದ ಉದ್ರೇಕ ಪಿಸುಮಾತು ನೀನು!…” ಎಂದು ಬರೆಯುವ ಜಬಿ ಅವರ ಈ ಘಜ಼ಲ್, ಶಬ್ದಗಳು ಮತ್ತು ಕಲ್ಪನೆಗಳ ಜುಗಲ್ ಬಂದಿ ಯಲ್ಲಿ ಮಿಂದು ಮುದಕೊಡುತ್ತವೆ.
“…ನನ್ನ ಪ್ರೀತಿಯ ಮಳೆ ತೊಟ್ಟಿಕ್ಕತೊಡಗಿದೆ-ಎಷ್ಟು ಅದುಮಿಟ್ಟುಕೊಂಡರೂ ಗಾಳಿಯ ಕಣ್ಣುಗಳಿಂದ…” ಎಂದು ಬರೆಯುವ ಕವಿ ಕಾಜೂರು ಸತೀಶ್ ಅವರು ಹೂವಿನ ಕಣ್ಣುಗಳಿಂದ ನೋಡ ಬಯಸಿದ್ದೇನು..? ಓದಿ…!
“…ಅರ್ಧಂಬರ್ಧ ಕಾಣುವ ಕಿಟಕಿ ಗಾಜುಗಳ ಮೇಲೆ ಮಳೆಹನಿಗಳು ಜಾರುವಾಗಲೆಲ್ಲಾ ನಿನ್ನ ಹಣೆಯ ಮೇಲೆ ಪರೇಡಿಗೆ ಹೊರಡುವವರಂತೆ ಶಿಸ್ತಾಗಿ ಕೂರುವ ಬೆವರ ಹನಿಗಳನ್ನ ಕೆಣಕಬೇಕೆಂದಿದ್ದೇನೆ…” ಎಂದು ಬರೆಯುವ ಶ್ರೀ ತಲಗೇರಿಯವರ ಭಾವ ಲಹರಿಗೆ ಸಿಲುಕಿ ತೇಲುವುದೊಂದೇ ಚಂದ…!
ಕಾಡುಹಣ್ಣು ತುಂಬಿರುವ ಪುಟ್ಟ ಪೊದೆಯೊಳಗೆ ಪರಕಾಯ ಪ್ರವೇಶಗೊಂಡ ಲೇಖಕಿ ರೇಣುಕಾ ರಮಾನಂದ್ ಅವರು ಬರೆದ ವಿಶಿಷ್ಟವಾದ ಸಂವಾದದ ಲೇಖನ…!
ಕರಿ ಕುರುಳಿನ ಕೊರಳೊಳಗೆ
ಕಾರ್ಮೋಡಗಳ ಧ್ವನಿ ಮೊಳಗೆ
ಮೊಲ್ಲೆ ಮೊಗ್ಗುಗಳುದುರಿ ಬಿದ್ದವಾಗೆ !!
– ಎಂದು ಕ್ಲಾಸ್ಸಿಕ್ ಆದ ಒಲುಮೆಯ ಕವಿತೆ ವಾಚಿಸಿದವರು ಲೇಖಕಿ ಶ್ರೀಮತಿ ಶಾಂತಾ ಶಾಸ್ತ್ರಿ ಅವರು..!
ಡಾ ಅಜಿತ್ ಹರೀಶಿ ಅವರ “ಮತ್ತೆ ಮಳೆ” ಯಲ್ಲಿ ಮಳೆಯನ್ನು ಪ್ರೀತಿಯಿಂದ ತರಾಟೆಗೆ ತೆಗೆದುಕೊಂಡ ಪರಿಯನ್ನು ಕೇಳಿ ಅಮ್ರತಾ ಶೆಟ್ಟಿ ಅವರ ವಾಚನದಲ್ಲಿ…!
ಭಾವ ಸಮುದ್ರದ ಸುನಾಮಿ ಉಕ್ಕಿದರೆ ಉಂಟಾಗುವ ಎಲ್ಲ ತಲ್ಲಣ ಗಳನ್ನೂ ಪ್ರಸ್ತುತ ಪಡಿಸುವ ಕವಿತೆಯಲ್ಲಿ ಅಕ್ಷರಗಳೂ ಭಾವದಲಿ ಭಾರದವು… ಶಿವಲೀಲಾ ಹುಣಸಗಿ ಅವರ ಈ ಭಾವ ಪೂರ್ಣ ಕವಿತೆ..!
ಹೀಗೊಂದು ಸಿಂಗರದಾ ಕಲ್ಪನಾ ವಿಲಾಸಕ್ಕೊಂದು ಟಿಕೆಟ್…! ಮಾನ್ಸೂನ್ ನ ಒಲವಿನ ಮಳೆಯಲ್ಲಿ ಮಿಂದೇಳಲು…!