ನಸುಕು.ಕಾಮ್ ನಡೆಸಿದ ವೀಕ್ಷಣಾ ಸಮೀಕ್ಷೆ ಇದೀಗ ನಿಮ್ಮ ಮುಂದೆ.. ಅಲ್ಲದೆ, 11 ಆಯ್ದ ಓದುಗರ ಮೆಚ್ಚಿನ ಚಿತ್ರ ಹಾಗೂ ವೆಬ್ ಸಿರೀಸ್ ನಿಮ್ಮೆಲ್ಲರ ಅವಗಾಹನೆಗಾಗಿ…
ಕೋರೊನಾದ ಆರ್ಭಟ ಜೋರಾಗಿಯೇ ಇದೆ..ಐವತ್ತು ಸಾವಿರಕ್ಕೂ ಹೆಚ್ಚು ಸೋಂಕಿತರ ನಡುವಲ್ಲಿ, ಇವತ್ತಿಗೂ ಅನಾವಶ್ಯಕ ಮನೆಯಿಂದ ಹೊರಬರುವುದನ್ನು ಕಮ್ಮಿ ಮಾಡಬೇಕಾದ ಅವಶ್ಯಕತೆ ಇದೆ ಎಂಬ ಸಂದೇಶ ಸಂಗೀತದ ಮೂಲಕ…ಮನೆಯಿಂದಲೇ ಹಾಡಿ ಕಳಿಸಿದವರು ಮಮತಾ ಮನ್ವಾಚಾರ್.
ಕೊರೋನಾ ಸಂದೇಶದ ಕ್ರಿಯೇಟಿವ್ ಹಾಡು ಹಾಗೂ ಸಾಹಿತ್ಯ ಮಮತಾ ಅವರದ್ದು.
ರಾಗ : ದರ್ಬಾರಿ ಕಾನ್ಹಾಡ ತಾಳ :ಭಜನ್ ಟೇಕ್
ಸಂಜೆ ಐದರ ಮಳೆಯಂತೆ ಮತ್ತೆ ಮತ್ತೆ ಬಾ..
ಅಲ್ವಿದಾ ನಿಸಾರ್ ಚಾಚಾ ಎನ್ನಲು ಮನಸಾಗುತ್ತಿಲ್ಲ….
ವಿಶ್ವಾಸ್ ಭಾರದ್ವಾಜ್ ಅವರ ನುಡಿ ನಮನ…
“ಹಳೆಯದಾದಷ್ಟೂ ಪತ್ರಗಳ ಪರಿಮಳ ಹೆಚ್ಚುವುದು, ನೆನಪುಗಳು ಮಾಗುವವು….” ಎನ್ನುತ್ತಾ ತಲಗೇರಿಯವರು ಗೋಪಾಲ ಕೃಷ್ಣನ ಕೈಲಿಂದ ರಾಧೆಗೆ ಬರೆಸುವ ಪತ್ರ ಅಪ್ಯಾಯಮಾನ, ಚೇತೋಹಾರಿ… ಮಿಸ್ ಮಾಡದೇ ಓದಿ…
“….ಮಾನವ ಹದ್ದು ಮೀರಿದ ಹದ್ದು…” ನೀವು ಕೇಳದ, ಕಾಣದ ಮನುಕುಲದ ಕ್ರೂರ ಅಟ್ಟಹಾಸದ ಲೆಕ್ಕ ಕೊಟ್ಟು ಬರೆದ ವಿಶ್ವಾಸ್ ಭಾರದ್ವಾಜ್, ಮನುಕುಲದ ಮುಖಕ್ಕೆ ಕನ್ನಡಿ ಹಿಡಿದಿದ್ದು ಹೀಗೆ…
ನಿಧಿಮಾ ಎಂಬ ಹೆಣ್ಣನ್ನು ಹುಡುಕುತ್ತಾ ಹೋರಾಟ ಲೇಖಕರಿಗೆ ದೊರಕಿದ್ದೇನು? ಹುಬ್ಬಳ್ಳಿ ಭಾಷೆಯಲ್ಲಿ ಹೆಣೆದ ಒಂದು ಭಾವ ಲಹರಿ… ನಾಗರಾಜ ಬಸರಕೋಡ ಅವರ ಲೇಖನಿಯಲ್ಲಿ..
ಈ ಕೋವಿಡ್-೧೯ ಲಾಕ್ ಡೌನ್ ಗಾಗಿ ಮಾಡಿದ ರೆಡ್, ಒರೆಂಜ್ ಮತ್ತು ಗ್ರೀನ್ ಝೋನ್ ಗಳಲ್ಲಿ ಯಾವ ರಾಜ್ಯ ಟಾಪ್ ಅಥವಾ ಡವ್ನ್ ಅನ್ನೋದ್ ತಿಳಿಬೇಕಾದ್ರೆ, ನಸುಕು ತಂಡದ ನಕ್ಷಾ ವಿಶ್ಲೇಷಣೆ ನಿಮಗಾಗಿ. ಹಾಗೆಯೇ ಕರ್ನಾಟಕದ ಯಾವ ಜಿಲ್ಲೆ ರೆಡ್, ಗ್ರೀನ್, ಒರೇಂಜ್ ಅದು ಕೂಡ ತಿಳಿಯುತ್ತೆ.
ಮಾರ್ಪಟ್ಟ ಕಾಲದ ಬಗ್ಗೆ ಮಾವಿನ ಮರ, ಹಕ್ಕಿ ಹಾಗೂ ನೆನಪುಗಳ ರೂಪಕದ ಜತೆಗೆ ಮನ ಮುಟ್ಟುವ ಕವಿತೆ ಹೆಣೆಯುತ್ತಾರೆ ಲೇಖಕಿ ಅಂಕೊಲೆಯ ರೇಣುಕಾ ರಮಾನಂದ್..
ಪ್ರಸ್ತುತ ಕೊರೊನಾ ಮಹಾ ಮಾರಿಯ ಬಿಕ್ಕಟ್ಟಿನಲ್ಲಿ ಎರಡು ದೇಶಗಳ ನಡುವಿನ ವೈರುಧ್ಯತೆಗಳನ್ನು, ಸಂಕೀರ್ಣತೆಗಳನ್ನು ಎಳೆ ಎಳೆಯಾಗಿ ವಿವರಿಸುವ ಪ್ರಯತ್ನ ರವಿ ಹಂಜ್ ಅವರದ್ದು…
ಒಂದು ಕಡೆ ಕುವೆಂಪು ಹೇಳ್ತಾರೆ.” ವಿಶ್ವ ಸಾಹಿತ್ಯಕ್ಕೆ ಭಾರತದ ಅತೀ ದೊಡ್ಡ ಕೊಡುಗೆ ಎಂದರೆ ಅದು ವಚನ ಸಾಹಿತ್ಯ”.
ತುಂಬಾ ಕೇಳರಿಯದ, ಈ ವಿಶಿಷ್ಟ ವಾದ ಕದಿರೆ ರೆಮ್ಮವ್ವಳ ವಚನದ ಬಗ್ಗೆ ಸವಿಸ್ತಾರವಾಗಿ ಬರೆದವರು ಲೇಖಕ ಅಳಗುಂಡಿ ಅಂದಾನಯ್ಯ ಅವರು.
ಸದ್ಯದ ಪರಿಸ್ಥಿತಿಯಲ್ಲಿ ಪದ್ಯ ಹುಡುಕಿದ ಮಂಜುನಾಥ್ ಲತಾ ಅವರು ಗುಡಿ, ಬಯಲು, ಪರದೆ, ಕುಡಿಕೆ, ರಸ್ತೆಗಳನ್ನು ದಾಟಿ ಆಟಕೆ ಕರೆಯದ ಬೀದಿಯ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದು ಹೀಗೆ…
ನಿಮಗೇನಾದ್ರೂ ಒಂದು ಚಿತ್ರ ಇಲ್ಲವೇ ಸರಣಿಗಳು (ಫಿಲಂಸ್ ಅಥವಾ ಸೀರೀಸ್) ವಿಪರೀತವಾಗಿ ಇಷ್ಟವಾಗಿ, ‘ಮಿಸ್ ಮಾಡೋ ಹಾಗೇ ಇಲ್ಲ’ ಅಂತಾ ಇದ್ದರೆ, ನಮಗೂ ತಿಳಿಸಿ.
ಕನ್ನಡಿಗರು ಯಾವುದನ್ನ ಜಾಸ್ತಿ ಲೈಕ್ ಮಾಡಿದ್ದಾರೆ ಅಂತ ತಿಳಿಯೋದು ಇಂಟೆರೆಸ್ಟಿಂಗ್ ತಾನೇ…?
ದಿವಾಕರರನ್ನು ಓದುವುದೆಂದರೆ ಅದು ಅರಿವಿನ ವಿಸ್ತರಣೆ ಎನ್ನುವ ಸುಧೀಂದ್ರ ಬುಧ್ಯ, ದಿವಾಕರರ ಇತ್ತೀಚಿನ ಕವನ “ಸಂಕಲನ ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ” ದ ಬಗ್ಗೆ ಪುಸ್ತಕ ಪರಿಚಯದಲ್ಲಿ ಬರೆದಿದ್ದು ಹೀಗೆ…
ಒಂದು ವ್ಯಕ್ತಿ, ನಿಲುಮೆಗಳು, ಸಿದ್ಧಾಂತಗಳು, ಪರಿಸ್ಥಿತಿಗಳು ಮತ್ತು ಪ್ರತಿಕ್ರಿಯೆಗಳು ತರ್ಕಕ್ಕೆ ಸವಾಲಾಗಿ, ಕಾಲ ಪ್ರವಾಹದಲ್ಲಿ ಮಿಳಿತಗೊಂಡು ಸೇರಿ ಹೋಗುತ್ತವೆ..
…..ಹೀಗೊಬ್ಬ, ತನ್ನ ಸುತ್ತಲಿನವರ ಮೇಲೆ ಪ್ರಭಾವ ಬೀರಬಲ್ಲ , ಇಂದಿಲ್ಲದ ಜೀವ ಮಹೇಂದ್ರ ಕುಮಾರ್ ರ ಬಗ್ಗೆ ಲೇಖಕ ವಿಶ್ವಾಸ್ ಭಾರದ್ವಾಜ್ ಕಣ್ಣಿಗೆ ಕಟ್ಟುವಂತೆ, ಮನವ ಮುಟ್ಟುವಂತೆ ಚಿತ್ರಿಸಿದ್ದು ಹೀಗೆ..
ಕುಮಾರಸ್ವಾಮಿ ಅವರ ಮಗನ ಮದುವೆಗೂ, ತಬ್ಲಿಘಿಗಳಿಗೂ ಎತ್ತಣೆತ್ತಣ ಸಂಬಂಧ..? ಇವೆಲ್ಲದರ ಬಗ್ಗೆ ಬೇಕಾ ಬಿಟ್ಟಿಯಾಗಿ ಜನ ಆಡ್ತಿದ್ದರೆ, ಡಾ. ಅಭಿನವ ಅವರು ಮಾತ್ರ ವಸ್ತುನಿಷ್ಠವಾಗಿ ಬರೆಯುತ್ತಾರೆ. ಹಾಗಾದ್ರೆ ಅವರ ಒಟ್ಟಾರೆ ನಿಲುವು ನಿಮ್ಮ ನಿಲುವಿಗಿಂತ ಬೇರೆ ಏನು? … ಓದಿ ನೋಡಿ…
ಆಮಿನಾದಳಿಗೆ ಮಿಸ್ರಿ ಮಾಲೆಯ ಕನಸು… ಅದಕ್ಕಾಗೇ ಸಾವಿರಾರು ರೂಪಾಯಿ ಕಲೆ ಹಾಕುತ್ತಿದ್ದಾಳೆ… ಇನ್ನೇನು ಕೂಡಿ ಬಂತು ಅನ್ನುವಷ್ಟರಲ್ಲೇ ಏನಾಯ್ತು.. ಲೇಖಕ ಅನ್ಸಾರಿಯವರ ಹೃದಯ ಸ್ಪರ್ಶಿ ಕಥನ ವಿಥ್ ಪಾಸಿಟಿವ್ ವೈಬ್ಸ್…
“..ಮನುಷ್ಯನ ಸಾವಿಗೆ ಒಂದು ಕಾರಣ ಭಾವಗಳ ಹಸಿವೂ ಇದ್ದೀತು….”. ಎಂದು ಬರೆಯುವ ಸಂಧ್ಯಾ ಹೆಗಡೆ, ಪ್ರಸ್ತುತ ಸನ್ನಿವೇಶದ ಭಾವ ಲಹರಿಯನ್ನು ಹರಿಯಗೊಟ್ಟಿದ್ದು ಹೀಗೆ…