ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಾಲ ಅನ್ನುವುದೂ ಎಂದೂ ಮುಗಿಯದ,ಆದಿ, ಅಂತ್ಯಗಳಿಲ್ಲದ
ವಿಸ್ಮಯದ ಪ್ರವಾಹ.. ದೀಪಕ್ ಮೇಟಿಯವರು ಬರೆದ ಈ ಚಿಕ್ಕ ಕವಿತೆಯಲ್ಲಿ ಸಾಕಷ್ಟು ಕಾಲ ಬೇಡುವ ಅರ್ಥ ಭರಿತ ಸಾಲುಗಳದೇ ದೊಡ್ಡ ದೊಡ್ಡ ಪಾಲುಗಳು..!

ಚಿಂತಕ, ದಾರ್ಶನಿಕ ಜಾಕ್ವೆಸ್ ಡೆರಿಡಾ ಅವರು ಪ್ರಖ್ಯಾತ ಸ್ಯಾಕ್ಸೋಫೋನ್‌ವಾದಕ , ಸಂಯೋಜಕ ಅರ್ನೆಟ್ ಕೋಲ್‌ಮನ್ ಅವರನ್ನು ಮಾಡಿದ ಸಂದರ್ಶನ ಬಲು ಅಪರೂಪದ್ದು. ಇದನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿ ಗೆದ್ದವರು ಟಿ ಎಸ್. ವೇಣುಗೋಪಾಲ್ ಅವರು. ಕನ್ನಡ ಓದುಗ ಲೋಕಕ್ಕೊಂದು ಸಂಗ್ರಹ ಯೋಗ್ಯ ಸಂವಾದ ಇಲ್ಲಿದೆ..

ಹಸಿ ಬಾಯಾರಿಕೆ ಎಲ್ಲ ತನಗಳನ್ನೂ ಬಿಟ್ಟಿರಲಾರದ ತುಡಿತ.. ಕೆಲವು ಬೇಕುಗಳ ತವಕ ಕೂಡ… ಇನ್ನಷ್ಟು ಅರ್ಥಗಳನ್ನು ಹುದುಗಿಸಿಕೊಂಡ ಶಶಿ ತರೀಕೆರೆಯವರ ಸಾಲುಗಳು ಮತ್ತೆ ಬಾಯಾರಿಕೆಯನ್ನು ಮೂಡಿಸುವಲ್ಲಿ ಸಫಲವಾಗುತ್ತದೆ.

ಕವಿತೆಗಳು ತನ್ನ ಪ್ರಾಮಾಣಿಕತೆಗಳನ್ನು ಕಳೆದುಕೊಂಡರೆ ಹೇಗೆ ಎನ್ನುವುದನ್ನು ಮಾರ್ಮಿಕವಾಗಿ ರುದ್ರೇಶ್ವರಸ್ವಾಮಿ ಅವರು ಈ ಕವಿತೆಯಲ್ಲಿ ವಸ್ತು ನಿಷ್ಠವಾಗಿ ಬರೆಯುತ್ತಾರೆ…

‘ಬರೀ ಬೇರು ಸಾಲದೆಂದೇ ಜಂಗಮನಾದೆ’ ಎಂದು ಬರೆಯುವ ಡಾ.ಗೋವಿಂದ್ ಹೆಗಡೆಯವರು ಈ ಘಜ಼ಲ್ ನಲ್ಲಿ ಜಂಗಮ ನಾಗುವ ಹಲವು ವಿಧ್ಯಮಾನಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ.

“…ನೆನಪಿಸಿಕೊ ಅದೆಷ್ಟು ಸಂಜೆಗಳ ಏಕಾಂತಗಳನ್ನು ಹಂಚಿಕೊಂಡಿದ್ದೆವು!…” ಎನ್ನುತ್ತಾ ಲೇಖಕ ಮಧುಸೂಧನ್ ಅವರು ಏನೆಲ್ಲಾ ರಿಟರ್ನ್ ಮಾಡುವ ಬಗ್ಗೆ ಬರೆಯುತ್ತಾರೆ..ಯಾಕೆ? ನಿಟ್ಟುಸಿರು ತುಂಬಿದ ಈ ಕವಿತೆ ಓದುಗರ ಅವಗಾಹನೆಗೆ..

ಹೀಗೊಂದು ಹಸೀ ಪ್ರೇಮದ ಕಾವಿಗೆ ಉತ್ತರವಾಗಿ ಧಾರಾಕಾರ ಭಾವಗಳ ಮಳೆ ಸುರಿಸುವಂತೆ ಬರೆಯುತ್ತಾರೆ ಶಿವಲೀಲಾ ಹುಣಸಗಿ ಅವರು.. ಇಲ್ಲಿ ಕಲ್ಪನೆಗಳೂ ವಾಸ್ತವವೇ, ಕನವರಿಕೆಗಳೂ ಮನವರಿಕೆಗಳೇ ಎಂಬಷ್ಟು ನೈಜವಾಗಿ ಚಿತ್ರಿತವಾಗಿದೆ.. ಪ್ರೀತಿಸಿದವರು ಹಾಗೂ ಪ್ರೀತಿಸದೇ ಇರುವವರು ಮಿಸ್ ಮಾಡಿ ಕೊಳ್ಳದೆ ಓದಬೇಕಾದ ನೈಸರ್ಗಿಕ ಒಲವಿನ ಚಿಲುಮೆ ಈ ಲಹರಿ…!